ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಅಂಡರ್-19 ವಿಶ್ವಕಪ್‌: ಬಾಂಗ್ಲಾವನ್ನು 84 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದ ಭಾರತ

ಎಡಗೈ ಆರಂಭಿಕ ಆದರ್ಶ್ ಸಿಂಗ್ ಮತ್ತು ನಾಯಕ ಉದಯ್ ಸಹರಾನ್ ಅರ್ಧಶತಕ ಹಾಗೂ ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ಅವರ ಮಾರಕ ಬೌಲಿಂಗ್‌ ನೆರವಿನಿಂದ ಭಾರತವು ಅಂಡರ್-19 ವಿಶ್ವಕಪ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಭಾರತ ತಂಡ
Vishwanath S
Updated On : 20 Jan 2024, 9:34 pm

ಬ್ಲೋಮ್‌ಫಾಂಟೈನ್: ಎಡಗೈ ಆರಂಭಿಕ ಆದರ್ಶ್ ಸಿಂಗ್ ಮತ್ತು ನಾಯಕ ಉದಯ್ ಸಹರಾನ್ ಅರ್ಧಶತಕ ಹಾಗೂ ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ಅವರ ಮಾರಕ ಬೌಲಿಂಗ್‌ ನೆರವಿನಿಂದ ಭಾರತವು ಅಂಡರ್-19 ವಿಶ್ವಕಪ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. 

ಶನಿವಾರ ನಡೆದ ಅಂಡರ್-19 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ 84 ರನ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶದ ವಿರುದ್ಧ ಭಾರತ ಏಳು ವಿಕೆಟ್‌ಗೆ 251 ರನ್ ಪೇರಿಸಿತ್ತು. ನಂತರ ಬಾಂಗ್ಲಾದೇಶವನ್ನು ಕೇವಲ 167 ರನ್ ಗಳಿಗೆ ಕಟ್ಟಿ ಹಾಕಿ 84 ರನ್ ಗಳಿಂದ ಗೆಲುವು ಸಾಧಿಸಿದೆ. 

ಭಾರತದ ಪರ ಆದರ್ಶ್ (96 ಎಸೆತಗಳಲ್ಲಿ 76 ರನ್) ಮತ್ತು ನಾಯಕ ಉದಯ್ (94 ಎಸೆತಗಳಲ್ಲಿ 64 ರನ್) ಭಾರತದ ಇನ್ನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 23.5 ಓವರ್‌ಗಳಲ್ಲಿ 116 ರನ್‌ಗಳ ಜೊತೆಯಾಟ ನೀಡಿದರು. ಭಾರತ ತಂಡದ ಫಿನಿಶರ್ ಸಚಿನ್ ದಾಸ್ ಡೆತ್ ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ 20 ಎಸೆತಗಳಲ್ಲಿ 26 ರನ್ ಗಳಿಸಿದರು, ಈ ಕಾರಣದಿಂದಾಗಿ ತಂಡವು 250 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಬಾಂಗ್ಲಾದೇಶ ಪರ ಎಡಗೈ ವೇಗದ ಬೌಲರ್ ಮರೂಫ್ ಮೃಧಾ 43 ರನ್ ನೀಡಿ 5 ವಿಕೆಟ್ ಪಡೆದರು.

Advertisement

Advertisement

ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವ ದಾಖಲೆ; ಟೈಟಲ್ ಹಕ್ಕು ಮತ್ತೆ ಟಾಟಾ ಪಾಲು, 2024 ರಿಂದ 2028ರವರೆಗಿನ 'ಸ್ಪಾನ್ಸರ್ ಶಿಪ್'!

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೌಮ್ಯ ಪಾಂಡೆ ಮತ್ತು ಮುಶೀರ್ ಖಾನ್ ಅವರ ಬೌಲಿಂಗ್‌ನಿಂದಾಗಿ 45.5 ಓವರ್‌ಗಳಲ್ಲಿ ಕೇವಲ 167 ರನ್‌ಗಳಿಗೆ ಕುಸಿಯಿತು. ಮೊಹಮ್ಮದ್ ಶಿಹಾಬ್ ಜೇಮ್ಸ್ ಗರಿಷ್ಠ 54 ರನ್ ಗಳಿಸಿದರು. ಅರಿಫುಲ್ ಇಸ್ಲಾಂ 41 ರನ್ ಗಳಿಸಿದರು, ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಸೌಮಿ ಪಾಂಡೆ 9.5 ಓವರ್‌ಗಳಲ್ಲಿ ಒಂದು ಮೇಡನ್‌ನೊಂದಿಗೆ 24 ರನ್‌ಗಳನ್ನು ನೀಡುವ ಮೂಲಕ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಬಲಿಪಶು ಮಾಡಿದರು. ಮುಶೀರ್ ಖಾನ್ ಎರಡು ಯಶಸ್ಸು ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments