ನವದೆಹಲಿ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನ್ನು ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ನಿರ್ಗಮಿಸಿದ್ದು, ಇನ್ನು ಮುಂದೆ ಗೌತಮ್ ಗಂಭೀರ್ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ ಐಪಿಎಲ್ ಕಪ್ ಗೆದ್ದಿದ್ದ ಕೋಲ್ಕತ್ತಾ ತಂಡಕ್ಕೆ ಗಂಭೀರ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು. ಮಂಗಳವಾರದಂದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಿರ್ಗಮಿತ ಮುಖ್ಯ ಕೋಚ್ ದ್ರಾವಿಡ್‌ಗೆ ಗೌರವ ಸಲ್ಲಿಸಿದರು, ಅವರ ಅಧಿಕಾರಾವಧಿಯಲ್ಲಿ ಭಾರತ ಕ್ರಿಕೆಟ್ ತಂಡ "ಪ್ರಬಲ ಶಕ್ತಿ"ಯಾಗಿ ಹೊರಹೊಮ್ಮಿದೆ ಎಂದು ಜಯ್ ಶಾ ಬಣ್ಣಿಸಿದ್ದರು.
ದ್ರಾವಿಡ್ ಮಾರ್ಗದರ್ಶನದಲ್ಲಿ, ಭಾರತ 17 ವರ್ಷಗಳ ನಂತರ T20 ವಿಶ್ವಕಪ್ ಗೆದ್ದಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ODI ವಿಶ್ವಕಪ್ ಫೈನಲ್‌ಗೆ ತಲುಪಿತ್ತು.