ಸೆಂಟ್ ವಿನ್ಸೆಂಟ್: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂದು ಮತ್ತೊಂದು ರೋಚಕ ಪಂದ್ಯ ನಡೆದಿದ್ದು, ಪ್ರಬಲ ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಭೀತಿ ಹುಟ್ಟಿಸಿದ್ದ ಕ್ರಿಕೆಟ್ ಶಿಶು ನೇಪಾಳ ಕೇವಲ 1ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.
ಹೌದು.. ಸೆಂಟ್ ವಿನ್ಸೆಂಟ್ ನ ಅರ್ನೋಸ್ ವೇಲ್ ಗ್ರೌಂಡ್, ಕಿಂಗ್‌ಸ್ಟೌನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೇಪಾಳ ವಿರುದ್ಧ 1ರನ್ ನ ರೋಚಕ ಗೆಲುವು ದಾಖಲಿಸಿದೆ. ದಕ್ಷಿಣ ಆಫ್ರಿಕಾ ನೀಡಿದ 116ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನೇಪಾಳ ನಿಗದಿತ 20 ಓವರ್ ನಲ್ಲಿ ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಕೇವಲ 1 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಒಂದು ಹಂತದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾಕ್ಕೆ ನೇಪಾಳ ಸೋಲಿನ ಭೀತಿ ಹುಟ್ಟಿಸಿದಂತೂ ಸಳ್ಳಲ್ಲ. ದಕ್ಷಿಣ ಆಫ್ರಿಕಾ ಮತ್ತು ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರಿಣ ಪಡೆ ರೀಜಾ ಹೆಂಡ್ರಿಕ್ಸ್(43) ಅವರ ಏಕಾಂಗಿ ಹೋರಾಟದ ನೆರವಿನಿಂದ 7 ವಿಕೆಟ್ಗೆ 115 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನೇಪಾಳ ಅಂತಿಮ ಓವರ್ನ 2 ಎಸೆತದಲ್ಲಿ ಗೆಲುವಿಗೆ 2 ರನ್ ಬಾರಿಸಲು ಸಾಧ್ಯವಾಗದೆ ವಿರೋಚಿತ 1 ರನ್ ಅಂತರದ ಸೋಲು ಕಂಡಿತು.
ಅಂತಿಮವಾಗಿ 7 ವಿಕೆಟ್ಗೆ 114 ರನ್ ನಷ್ಟೇ ಗಳಿಸಲು ಶಕ್ತವಾಗಿ 1 ರನ್ ಅಂತರದಲ್ಲಿ ಸೋಲು ಕಂಡಿತು. ಈ ಹಂತದಲ್ಲಿ ನೇಪಾಳ ಒಂದು ರನ್ ಗಳಿಸುತ್ತಿದ್ದರೂ ಕೂಡ ಪಂದ್ಯ ಟೈ ಆಗಿ ಸೂಪರ್ ಓವರ್ ಕಾಣುತ್ತಿತ್ತು. ಆದರೆ ಗುಲ್ಸನ್ ಝಾ ರನೌಟ್ ತುತ್ತಾಗಿದ್ದರಿಂದ ತಂಡ ಸೋಲಿಗೆ ತುತ್ತಾಯಿತು.
ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ ಸ್ಪಿನ್ ಮ್ಯಾಚಿಕ್ ನಡೆಸಿ 4 ವಿಕೆಟ್ ಪಡೆದು ಮಿಂಚಿದರು. ಕೈಗೆ ಬಂತ ತುತ್ತು ಬಾಯಿಗೆ ಬರಲಿಲ್ಲ ಎನ್ನವಂತೆ ಇನ್ನೇನು ನೇಪಾಳ ಗೆದ್ದ ಬಿಟ್ಟಿತು ಎನ್ನುವಾಗಲೇ ತಂಡ ಸೋತಿದ್ದು ತಂಡದ ಆಟಗಾರರನ್ನು ಕಣ್ಣೀರಲ್ಲಿ ಮುಳುಗುವಂತೆ ಮಾಡಿತು.