ಸೆಂಟ್ ವಿನ್ಸೆಂಟ್: ಐಸಿಸಿ ಟಿ20 ವಿಶ್ವಕಪ್ ನಲ್ಲಿ ನೇಪಾಳ ವಿರುದ್ಧ ದ.ಆಫ್ರಿಕಾ ತಂಡ 1 ರನ್ ರೋಚಕ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.
ಸೆಂಟ್ ವಿನ್ಸೆಂಟ್ ನ ಅರ್ನೋಸ್ ವೇಲ್ ಗ್ರೌಂಡ್, ಕಿಂಗ್‌ಸ್ಟೌನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೇಪಾಳ ವಿರುದ್ಧ 1ರನ್ ರೋಚಕ ಗೆಲುವು ದಾಖಲಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ 116ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನೇಪಾಳ ನಿಗದಿತ 20 ಓವರ್ ನಲ್ಲಿ ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಕೇವಲ 1 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಈ ಪಂದ್ಯದ ಮೂಲಕ ಹಲವು ಕ್ರಿಕೆಟ್ ದಾಖಲೆಗಳು ಕೂಡ ನಿರ್ಮಾಣವಾಗಿವೆ.
ಟಿ20 ವಿಶ್ವಕಪ್ ನಲ್ಲಿ ಮತ್ತೊಂದು 1ರನ್ ಅಂತರದ ಜಯ
ಇನ್ನು ಟಿ20 ವಿಶ್ವಕಪ್ ನಲ್ಲಿ ಈ ವರೆಗೂ 6 ಬಾರಿ 1ರನ್ ಅಂತರದ ಜಯ ದಾಖಲಾಗಿದ್ದು, ನೇಪಾಳ vs ದಕ್ಷಿಣ ಆಫ್ರಿಕಾ ಪಂದ್ಯ ಈ ಪಟ್ಟಿಯಲ್ಲಿ 6ನೇ ಪಂದ್ಯವಾಗಿದೆ. 2009ರಲ್ಲಿ ಲಾರ್ಡ್ಸ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 1ರನ್ ಅಂತರದಲ್ಲಿ ಜಯ ಗಳಿಸಿತ್ತು. ಇದು ಟಿ20 ವಿಶ್ವಕಪ್ ನಲ್ಲಿ ದಾಖಲಾದ ಮೊದಲ ಜಯವಾಗಿದೆ.
1-run wins in Men’s T20 World Cup
SA vs NZ, Lord’s, 2009
NZ vs PAK, Bridgetown, 2010
IND vs SA, Colombo RPS, 2012
IND vs BAN, Bengaluru, 2016
ZIM vs PAK, Perth, 2022
SA vs NEP, Kingstown, 2024
ಅತೀ ಹೆಚ್ಚು ಬಾರಿ 1ರನ್ ಅಂತರದಲ್ಲಿ ಗೆದ್ದ ತಂಡಗಳ ಪಟ್ಟಿಯಲ್ಲಿ ಆಫ್ರಿಕಾಗೆ ಅಗ್ರಸ್ಥಾನ
ಇನ್ನು ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 1ರನ್ ಅಂತರದಲ್ಲಿ ಗೆದ್ದ ತಂಡಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. ಈ ವರೆಗೂ ದಕ್ಷಿಣ ಆಫ್ರಿಕಾ ತಂಡ 5 ಬಾರಿ 1ರನ್ ಅಂತರದಲ್ಲಿ ಗೆಲುವು ಸಾಧಿಸಿದೆ. 2ನೇ ಸ್ಥಾನದಲ್ಲಿ ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಐರ್ಲೆಂಡ್ ಮತ್ತು ಕೀನ್ಯಾ ಜಂಟಿ 2ನೇ ಸ್ಥಾನದಲ್ಲಿವೆ.
Teams with multiple 1-run wins in T20Is
5 - South Africa
2 - England
2 - India
2 - New Zealand
2 - Ireland
2 - Kenya
ಕನಿಷ್ಠ ಮೊತ್ತವನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿದ ದಕ್ಷಿಣ ಆಫ್ರಿಕಾ
ಇನ್ನು ನೇಪಾಳ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಕನಿಷ್ಠ ಮೊತ್ತವನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿದ 3ನೇ ಪಂದ್ಯವಾಗಿದೆ. ಇದೇ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ 114ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿತ್ತು. ಇಂದಿನ ಪಂದ್ಯ ಜಂಟಿ 2ನೇ ಸ್ಥಾನದಲ್ಲಿದೆ.
Lowest targets successfully defended by South Africa in T20Is
114 vs BAN, New York, 2024
116 vs SL, Colombo RPS, 2013
116 vs NEP, Kingstown, 2024
121 vs WI, North Sound, 2010
129 vs NZ, Lord's, 2009
ಕನಿಷ್ಠ ಮೊತ್ತವನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿದ 2ನೇ ಪಂದ್ಯ
ನೇಪಾಳ ನಡುವಿನ ಪಂದ್ಯ ಕನಿಷ್ಠ ಮೊತ್ತವನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿದ 2ನೇ ತಂಡ ಎಂಬ ಕೀರ್ತಿಗೆ ದಕ್ಷಿಣ ಆಫ್ರಿಕಾ ಪಾತ್ರವಾಗಿದೆ. ಇದೇ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ 114ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿತ್ತು. ಭಾರತ ಕೂಡ ಪಾಕಿಸ್ತಾನ ವಿರುದ್ಧ 120ರನ್ ಗಳನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿ ಗೆದ್ದು ಬೀಗಿತ್ತು.
Lowest targets successfully defended in Men’s T20 WC
114 - SA vs BAN, New York, 2024
116 - SA vs NEP, Kingstown, 2024
120 - SL vs NZ, Chattogram, 2014
120 - IND vs PAK, New York, 2024
124 - AFG vs WI, Nagpur, 2016