ಜಸ್ ಪ್ರೀತ್ ಬುಮ್ರಾ ಮತ್ತು ಅರ್ಶ್ ದೀಪ್ ಸಿಂಗ್ 
ಕ್ರಿಕೆಟ್

ICC T20 World Cup 2024: ಗರಿಷ್ಠ ವಿಕೆಟ್ ಸಾಧನೆ; ಅರ್ಶ್ ದೀಪ್ ಸಿಂಗ್, Jasprit Bumrah ನಡುವೆ ಪೈಪೋಟಿ

ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ತಂಡ ವೇಗಿಗಳಾದ ಅರ್ಶ್ ದೀಪ್ ಸಿಂಗ್ ಮತ್ತು ಜಸ್ ಪ್ರೀತ್ ಬುಮ್ರಾ ಪೈಪೋಟಿಗೆ ಬಿದ್ದಿದ್ದು, ಇಬ್ಬರೂ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಗಯಾನ: ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ತಂಡ ವೇಗಿಗಳಾದ ಅರ್ಶ್ ದೀಪ್ ಸಿಂಗ್ ಮತ್ತು ಜಸ್ ಪ್ರೀತ್ ಬುಮ್ರಾ ಪೈಪೋಟಿಗೆ ಬಿದ್ದಿದ್ದು, ಇಬ್ಬರೂ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಹೌದು..ಹಾಲಿ ಐಸಿಸಿ ಟಿ20 ವಿಶ್ವಕಪ್ ಮುಕ್ತಾಯಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದ್ದು ಬಾರ್ಬೋಡಾಲ್ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದೇ ಶನಿವಾರ ಅಂದರೆ ನಾಳೆ ಫೈನಲ್ ಪಂದ್ಯ ನಡೆಯಲಿದೆ.

ಈ ನಡುವೆ ಭಾರತದ ಪ್ರಮುಖ ವೇಗಿಗಳಾದ ಅರ್ಶ್ ದೀಪ್ ಸಿಂಗ್ ಮತ್ತು ಜಸ್ ಪ್ರೀತ್ ಬುಮ್ರಾ ನಡುವೆ ಪೈಪೋಟಿಯೊಂದು ಏರ್ಪಟ್ಟಿದ್ದು, ಟಿ20 ವಿಶ್ವಕಪ್ ಸರಣಿಯಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಪಟ್ಟಕ್ಕಾಗಿ ಇಬ್ಬರೂ ಪೈಪೋಟಿ ನಡೆಸಿದ್ದಾರೆ.

ಹಾಲಿ ಟೂರ್ನಿಯಲ್ಲಿ ಅರ್ಶ್ ದೀಪ್ ಸಿಂಗ್ 15 ವಿಕೆಟ್ ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ 13 ವಿಕೆಟ್ ಪಡೆದಿರುವ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ಈ ಇಬ್ಬರೂ ವೇಗಿಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದ ಭಾರತದ ಆರ್ ಪಿ ಸಿಂಗ್ ಮತ್ತು ಆರ್ ಅಶ್ವಿನ್ ರ ದಾಖಲೆಯನ್ನು ಹಿಂದಿಕ್ಕಿದ್ದು, ಇದೀಗ ಗರಿಷ್ಠ ವಿಕೆಟ್ ಪಡೆದ ಬೌಲರ್ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದಾರೆ.

Most wickets in a T20 WC edition for India

  • 15 - Arshdeep Singh (2024)

  • 13 - Jasprit Bumrah (2024)

  • 12 - RP Singh (2007)

  • 11 - Ravichandran Ashwin (2014)

ಅಂದಹಾಗೆ ಆರ್ ಸಿ ಸಿಂಗ್ 2007ರಲ್ಲಿ 12 ವಿಕೆಟ್ ಪಡೆದು ಭಾರತದ ಪರಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. 2014ರಲ್ಲಿ ಆರ್ ಅಶ್ವಿನ್ 11 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದರು.

ವೇಗಿಗಳನ್ನು ಮೀರಿಸಿದ ಭಾರತದ ಸ್ಪಿನ್ನರ್ ಗಳು

ಇನ್ನು ಹಾಲಿ ಟೂರ್ನಿಯಲ್ಲಿ ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್ ಲೆಕ್ಕಾಚಾರದಲ್ಲಿ ವೇಗಿಗಳಿಗಿಂತ ಸ್ಪಿನ್ ಬೌಲರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರೆಗೂ ವೇಗಿಗಳು 17.4 ಓವರ್ ನಲ್ಲಿ 8 ವಿಕೆಟ್ ಪಡೆದು 9.23 ಸರಾಸರಿಯಲ್ಲಿ 163 ರನ್ ನೀಡಿದ್ದರೆ, ಸ್ಪಿನ್ನರ್ ಗಳು 19 ಓವರ್ ಎಸೆದು ಕೇವಲ 5.63 ಸರಾಸರಿಯಲ್ಲಿ 107 ರನ್ ನೀಡಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಹಾಲಿ ಟೂರ್ನಿಯಲ್ಲಿ ಸ್ಪಿನ್ನರ್ ಗಳದ್ದೇ ಮೇಲುಗೈ ಸಾಧಿಸಿದಂತಾಗಿದೆ.

Pace vs Spin in this game

  • Pace: 8/163 in 17.4 overs (ER: 9.23)

  • Spin: 7/107 in 19 overs (ER: 5.63)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT