ರೋಹಿತ್-ಹಾರ್ದಿಕ್ ವಾಗ್ಯುದ್ಧ
ರೋಹಿತ್-ಹಾರ್ದಿಕ್ ವಾಗ್ಯುದ್ಧ 
ಕ್ರಿಕೆಟ್

ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ: ಮೈದಾನದಲ್ಲಿ ರೋಹಿತ್-ಹಾರ್ದಿಕ್ ವಾಗ್ಯುದ್ಧ; ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹೊಡೆದಾಟ, ವಿಡಿಯೋ

Vishwanath S

ಅಹಮದಾಬಾದ್‌: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ವಾತಾವರಣ ಕಠಿಣವಾಗಿತ್ತು.

ನಾಯಕತ್ವದ ವಿಚಾರದಲ್ಲಿ ಪಂದ್ಯ ಆರಂಭವಾಗುವ ಮುನ್ನ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸುತ್ತ ಭಾರೀ ಚರ್ಚ ನಡೆದಿತ್ತು. ರೋಹಿತ್ ನಾಯಕತ್ವದಿಂದ ಕೆಳಗಿಳಿದ ನಂತರ ಹಾರ್ದಿಕ್ ಅವರನ್ನು ತಂಡದ ಹೊಸ ನಾಯಕನಾಗಿ ನೇಮಿಸಲಾಗಿದೆ. ನಿಜವಾದ ಸಮಸ್ಯೆ ಏನೆಂಬುದರ ಬಗ್ಗೆ ಭಾರಿ ಊಹಾಪೋಹಗಳಿವೆ, ಆದರೆ ಇನ್ನೂ ಅದರ ಬಗ್ಗೆ ಸ್ಪಷ್ಟತೆ ಇಲ್ಲ.

ಭಾನುವಾರ ಪಂದ್ಯ ನಡೆಯುತ್ತಿದ್ದ ವೇಳೆ ರೋಹಿತ್ ಹಾಗೂ ಹಾರ್ದಿಕ್ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ಈಗ ವೈರಲ್ ಆಗುತ್ತಿರುವ ಹೊಡೆದಾಟ ವಿಡಿಯೋ ಇದೀಗ ವೈರಲ್ ಆಗಿದೆ.

ಕಳೆದ ಎರಡು ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರು ಮತ್ತು ಈ ಆವೃತ್ತಿಯಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದು ಗುಜರಾತ್ ಟೈಟಾನ್ಸ್ ತಂಡದ ಅಭಿಮಾನಿಗಳ ಕೋಪಕ್ಕೆ ಕಾಣವಾಗಿದೆ. ಅಲ್ಲದೆ, ರೋಹಿತ್ ಶರ್ಮಾ ಅಭಿಮಾನಿಗಳು ಕೂಡ ಪಾಂಡ್ಯ ವಿರುದ್ಧ ಕೋಪಗೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಪಂದ್ಯದ ವೇಳೆ ಇದ್ದಕ್ಕಿದ್ದಂತೆ ನಾಯಿಯೊಂದು ಮೈದಾನಕ್ಕೆ ಪ್ರವೇಶಿಸಿದ್ದು ಈ ವೇಳೆ ಅಭಿಮಾನಿಗಳು 'ಹಾರ್ದಿಕ್, ಹಾರ್ದಿಕ್' ಎಂದು ಘೋಷಣೆ ಕೂಗಿ ಹಾರ್ದಿಕ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

SCROLL FOR NEXT