ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ 
ಕ್ರಿಕೆಟ್

IPL: Ben Stokes, ಜೋ ರೂಟ್ 2 ವರ್ಷ ನಿಷೇಧ?; ಕಳ್ಳಾಟಕ್ಕೆ BCCI ಬ್ರೇಕ್!

2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ.

ಮುಂಬೈ: ಐಪಿಎಲ್ 2025 ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇಂಗ್ಲೆಂಡ್ ನ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಮೇಲೆ ನಿಷೇಧದ ತೂಗುಗತ್ತಿ ತೂಗುತ್ತಿದೆ.

ಹೌದು.. 2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ.

ಈ ಬಾರಿ ಮೆಗಾ ಹರಾಜಿಗೆ 1165 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 1574 ಕ್ರಿಕೆಟಿಗರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 320 ಕ್ಯಾಪ್ಡ್ ಮತ್ತು 1224 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಉಳಿದಂತೆ ಸಹವರ್ತಿ ದೇಶಗಳ 30 ಆಟಗಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಆದರೆ ಈ ಬಾರಿ ಹರಾಜಿಗೆ ನೋಂದಾಯಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಹೆಸರಿಲ್ಲ. ಆ್ಯಶಸ್ ಸರಣಿ ಮೇಲೆ ಕಣ್ಣಿಟ್ಟಿರುವ ಈ ಇಬ್ಬರು ಆಟಗಾರರು ಐಪಿಎಲ್ ಹರಾಜು ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಆದರೆ ಅವರ ಇದೇ ನಿರ್ಧಾರ ಇದೀಗ ಅವರನ್ನು 2 ವರ್ಷಗಳ ಕಾಲ ಐಪಿಎಲ್ ನಿಂದ ದೂರವಿಡುವ ಆಪಾಯ ತಂದಿದೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸದ ಆಟಗಾರರು ಎರಡು ವರ್ಷಗಳ ಕಾಲ ಐಪಿಎಲ್ ಆಡಲು ಅವಕಾಶವಿಲ್ಲ. ಬಿಸಿಸಿಐನ ಹೊಸ ನಿಯಮದ ಪ್ರಕಾರ, ಮೆಗಾ ಹರಾಜಿನಲ್ಲಿ ನೋಂದಾಯಿಸದ ವಿದೇಶಿ ಆಟಗಾರರು ಮುಂದಿನ ವರ್ಷದ ಹರಾಜಿನಲ್ಲೂ ಭಾಗವಹಿಸಲು ಅರ್ಹರಲ್ಲ.

ರೂಟ್ ಮತ್ತು ಸ್ಟೋಕ್ಸ್ ಮುಂಬರುವ ಆಷಸ್ ಸರಣಿಯ ಮೇಲೆ ಗಮನಹರಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಈ ನಿಯಮದಿಂದಾಗಿ ಜೋ ರೂಟ್ ಮತ್ತು ಸ್ಟೋಕ್ಸ್ 2026ರ ಐಪಿಎಲ್​ನಲ್ಲೂ ಆಡಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ನಿಯಮಗಳಿಂದಾಗಿ ಸ್ಟೋಕ್ಸ್ ಐಪಿಎಲ್‌ನ ಮುಂಬರುವ ಎರಡು ಸೀಸನ್‌ಗಳ ಭಾಗವಾಗಿರಲು ಸಾಧ್ಯವಾಗುವುದಿಲ್ಲ.

ಬಿಸಿಸಿಐ ಪ್ರಕಾರ, ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ವಿದೇಶಿ ಆಟಗಾರ ತನ್ನ ಹೆಸರನ್ನು ನೋಂದಾಯಿಸಿಕೊಳ್ಳದಿದ್ದರೆ, ಆತ ಮುಂದಿನ ವರ್ಷ ನಡೆಯಲಿರುವ ಹರಾಜಿನಲ್ಲೂ ಭಾಗವಹಿಸುಂತಿಲ್ಲ ಎಂಬುದು ಕೂಡ ಈ ನಿಯಮಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬೆನ್ ಸ್ಟೋಕ್ಸ್ 2026 ರ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಐಪಿಎಲ್ ಆಡುವ ಇಚ್ಛೆಯಿರುವ ಯಾವುದೇ ವಿದೇಶಿ ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಅವರು ತಮ್ಮ ಹೆಸರನ್ನು ನೋಂದಣಿ ಮಾಡದಿದ್ದರೆ ಮುಂದಿನ ವರ್ಷದ ಹರಾಜಿಗೆ ಅವರು ಅನರ್ಹರಾಗುತ್ತಾರೆ. ಇದರರ್ಥ ಸ್ಟೋಕ್ಸ್, 2025 ರ ಐಪಿಎಲ್ ಜೊತೆಗೆ 2026 ರ ಐಪಿಎಲ್​ನಲ್ಲೂ ಆಡಲು ಸಾಧ್ಯವಾಗುವುದಿಲ್ಲ.

ಕಳ್ಳಾಟಕ್ಕೆ BCCI ಬ್ರೇಕ್

ಬಿಸಿಸಿಐ ಈ ನಿಯಮ ಮಾಡಲು ಪ್ರಮುಖ ಕಾರಣವೇನು ಎಂದರೆ, ಕಳೆದ ಕೆಲವು ವರ್ಷಗಳಲ್ಲಿ ವಿದೇಶಿ ಆಟಗಾರರು ಮೆಗಾ ಹರಾಜಿನಲ್ಲಿ ಭಾಗವಹಿಸುವುದಿಲ್ಲ. ಆದರೆ ಆ ನಂತರ ನಡೆಯುವ ಮಿನಿ ಹರಾಜಿನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಎಲ್ಲಾ ತಂಡಗಳಿಗೂ ಸ್ಟಾರ್ ಪ್ಲೇಯರ್​ನ ಅಗತ್ಯವಿರುವ ಕಾರಣ ಆತ ಊಹೆಗೂ ಮೀರಿದ ಹಣಕ್ಕೆ ಹರಾಜಾಗುತ್ತಾನೆ. ಈ ರೀತಿಯ ಸಂದರ್ಭಗಳನ್ನು ನಾವು ಈ ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ. ಇದನ್ನು ತಪ್ಪಿಸುವ ಸಲುವಾಗಿಯೇ ಬಿಸಿಸಿಐ ವಿದೇಶಿ ಆಟಗಾರರ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಂಡಿದೆ.

ಬೆನ್ ಸ್ಟೋಕ್ಸ್ ಈ ಹಿಂದೆಯೂ ಇದೇ ರೀತಿಯ ಕೆಲಸ ಮಾಡಿದ್ದಾರೆ. 2022 ರ ಮೆಗಾ ಹರಾಜಿನಿಂದ ಹೊರಗುಳಿದ್ದ ಸ್ಟೋಕ್ಸ್, ಆ ನಂತರ ಅಂದರೆ 2023 ರಲ್ಲಿ ನಡೆದ ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ವೇಳೆ ಸ್ಟಾರ್ ಆಟಗಾರನನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿದ್ದವು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಖರ್ಚು ಮಾಡುವ ಮೂಲಕ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ: 5 ಸಾವು, 12 ಜನರಿಗೆ ಗಾಯ

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ; ಇದು INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವಿಗೆ ವರವಾಗುತ್ತಾ?

ರಷ್ಯಾದಿಂದ ತೈಲ ಖರೀದಿ "ರಕ್ತದ ಹಣ": ಭಾರತದ ಮೇಲೆ ಮತ್ತೆ ಕಿಡಿ ಕಾರಿದ ವ್ಯಾಪಾರ ಸಲಹೆಗಾರ ಪೀಟರ್ ನವರೊ!

SCROLL FOR NEXT