ಕೆಎಲ್ ರಾಹುಲ್ 
ಕ್ರಿಕೆಟ್

KL Rahul ಗೆ ಬ್ಯಾಟಿಂಗ್ ಮರೆತೋಯ್ತಾ? ಬೌಲ್ಡ್ ಆಗಿ ಕಕ್ಕಾಬಿಕ್ಕಿಯಾಗಿ ನಿಂತ ಆಟಗಾರ, ವಿಡಿಯೋ ವೈರಲ್!

ಕೆಎಲ್ ರಾಹುಲ್ ಅವರ ಫ್ಲಾಪ್ ಶೋ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ ನಂತರ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲೂ ದಯನೀಯವಾಗಿ ವಿಫಲರಾಗಿದ್ದಾರೆ. ಅವರ ನಿರಾಶಾದಾಯಕ ಪ್ರದರ್ಶನವು ಭಾರತ ಎ ಜೊತೆಗೆ ಟೀಂ ಇಂಡಿಯಾದ ನಿರ್ವಹಣೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಸರಣಿಯ ಎರಡನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಅವರಿಗೆ ಅವಕಾಶ ನೀಡಲಾಗಿದೆ.

ಧ್ರುವ್ ಜುರೆಲ್ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಹೊಂದಿಕೊಂಡಿದ್ದಾರೆ. ಆದರೆ ಕೆಎಲ್ ರಾಹುಲ್ ಅವರ ಫ್ಲಾಪ್ ಶೋ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ ನಂತರ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲೂ ದಯನೀಯವಾಗಿ ವಿಫಲರಾಗಿದ್ದಾರೆ. ಅವರ ನಿರಾಶಾದಾಯಕ ಪ್ರದರ್ಶನವು ಭಾರತ ಎ ಜೊತೆಗೆ ಟೀಂ ಇಂಡಿಯಾದ ನಿರ್ವಹಣೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅತ್ಯಂತ ಕಳಪೆಯಾಗಿ ಔಟಾದರು. ಇವರನ್ನು ನೋಡಿದರೆ ಆಸ್ಟ್ರೇಲಿಯಾ ತಲುಪಿದ ನಂತರ ಅವರ ಫಾರ್ಮ್ ಜೊತೆಗೆ ಆತ್ಮವಿಶ್ವಾಸವೂ ಕಡಿಮೆಯಾಗಿದೆ ಎಂಬುದು ಕಾಣುತ್ತಿದೆ. ಕೆಎಲ್ ರಾಹುಲ್ ಅವರು ಸ್ಪಿನ್ನರ್ ರೊಚ್ಚಿಚೋಲಿ ಅವರ ಚೆಂಡನ್ನು ಲೆಗ್ ಸೈಡ್‌ನಲ್ಲಿ ಹೊಡೆಯಲು ಬಯಸಿದ್ದರು. ಆದರೆ ಅವರಿಗೆ ಚೆಂಡಿನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಚೆಂಡು ಅವನ ಕಾಲುಗಳ ನಡುವೆ ಹಾದು ಹೋಗಿ ವಿಕೆಟ್‌ಗೆ ಬಡಿಯಿತು. ಒಬ್ಬ ಬ್ಯಾಟ್ಸ್‌ಮನ್ ಈ ರೀತಿ ಔಟಾಗುವುದನ್ನು ನೀವು ಬಹಳ ಅಪರೂಪವಾಗಿ ನೋಡಿರಬಹುದು.

ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಕೇವಲ 161 ರನ್ ಗಳಿಸಿತ್ತು. ಈ 161 ರನ್‌ಗಳಲ್ಲಿ 80 ಧ್ರುವ್ ಜುರೆಲ್ ಅವರದ್ದಾಗಿತ್ತು. ಜುರೆಲ್ ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್ ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್‌ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 223 ರನ್ ಗಳಿಸಿ 62 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಮುನ್ನಡೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಯಿತು. ಆದರೆ 73 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT