ದುಬೈ: ಐಪಿಎಲ್ ಹರಾಜು ಪ್ರಕ್ರಿಯೆ 2 ನೇ ದಿನ ಮುಂದುವರೆದಿದ್ದು, ಬೌಲರ್ ಉಮೇಶ್ ಯಾದವ್ ಈ ವರೆಗೂ ಬಿಕರಿಯಾಗದೇ ಉಳಿದಿದ್ದಾರೆ.
ಉಮೇಶ್ ಯಾದವ್ ಬಿಡ್ಡಿಂಗ್ ಮೊತ್ತ 2 ಕೋಟಿ ಇದ್ದು, ಇನ್ನೂ ಯಾವುದೇ ಐಪಿಎಲ್ ತಂಡವೂ ಉಮೇಶ್ ಯಾದವ್ ಅವರನ್ನು ಖರೀದಿಸಿಲ್ಲ.
ಉಮೇಶ್ ಯಾದವ್ ಮಾತ್ರವಲ್ಲದೇ ಆಂಡ್ರೆ ಸಿದ್ದಾರ್ಥ್ ಸಹ ಯಾವುದೇ ತಂಡಕ್ಕೆ ಬಿಕರಿಯಾಗದೇ ಉಳಿದಿದ್ದಾರೆ. ಆಂಡ್ರೆ ಸಿದ್ದಾರ್ಥ್ ಬಿಡ್ಡಿಂಗ್ ಮೊತ್ತ 30 ಲಕ್ಷ ರೂಪಾಯಿಯಾಗಿದೆ. ಹರ್ನೂರು ಪನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಬಿಡ್ ಮೊತ್ತ 30 ಲಕ್ಷ ರೂಪಾಯಿಗಳಿಗೆ ಬಿಕರಿಯಾಗಿದ್ದಾರೆ.
1 ಕೋಟಿಯ ಮೂಲ ಬೆಲೆಯಲ್ಲಿ ವೇಗಿ ಜಯದೇವ್ ಉನದ್ಕತ್ ಅವರಿಗೆ ಹೆಚ್ಚಿನ ಮೊತ್ತ ನೀಡಲು ಯಾವುದೇ ತಂಡ ಮುಂದಾಗಲಿಲ್ಲ. ಕೊನೆಗೆ ಎಸ್‌ಆರ್‌ಎಚ್‌ಗೆ 1 ಕೋಟಿಗೆ ಮಾರಾಟವಾಗಿದ್ದಾರೆ. ಅಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಅವರ 2 ಕೋಟಿ ಬೆಲೆ ಯಾವುದೇ ಬಿಡ್‌ಗಳನ್ನು ಆಕರ್ಷಿಸಲಿಲ್ಲ ಮತ್ತು ಮಾರಾಟವಾಗದೆ ಉಳಿದಿದ್ದಾರೆ. ರಿಶಾದ್ ಹೊಸೈನ್ ಸಹ ಮಾರಾಟವಾಗದೇ ಹಾಗೆಯೇ ಉಳಿದಿದ್ದಾರೆ.