ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 133 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದ್ದು ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಭಾರತಕ್ಕೆ ಸಿಕ್ಕ 3ನೇ ಅತೀ ದೊಡ್ಡ ಗೆಲುವಾಗಿದೆ.
ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತ್ತು. ಭಾರತ ತಂಡದ ಪರ ಸಂಜು ಸ್ಯಾಮ್ಸನ್ (111 ರನ್) ಅಮೋಘ ಶತಕ ಸಿಡಿಸಿದರೆ, ಸೂರ್ಯ ಕುಮಾರ್ (75 ರನ್) ಅರ್ಧಶತಕ, ಹಾರ್ದಿಕ್ ಪಾಂಡ್ಯ (47 ರನ್) ಮತ್ತು ರಿಯಾನ್ ಪರಾಗ್ (34) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ 20 ಓವರ್ ನಲ್ಲಿ 164 ರನ್ ಗಳಿಸಿ ಅಲೌಟ್ ಆಯಿತು. ಆ ಮೂಲಕ 133 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಇದು ಭಾರತಕ್ಕೆ ಟಿ20 ಕ್ರಿಕೆಟ್ ನಲ್ಲಿ ಸಿಕ್ಕ 3ನೇ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಭಾರತ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ 168 ರನ್ ಗಳ ಜಯ ದಾಖಲಿಸಿತ್ತು. ಇದು ಟಿ20ಯಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ.
Highest victory margins for India in T20Is
168 runs vs NZ, Ahmedabad, 2023
143 runs vs IRE, Dublin, 2018
133 runs vs BAN, Hyderabad, 2024
106 runs vs SA, Johannesburg, 2023
101 runs vs AFG, Dubai, 2022
100 runs vs ZIM, Harare, 2024
ಗರಿಷ್ಠ ರನ್ ಹರಿದು ಬಂದ 2ನೇ ಟಿ20 ಪಂದ್ಯ
ಇನ್ನು ಈ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಕೇವಲ 40 ಓವರ್ ನಲ್ಲಿ ಬರೊಬ್ಬರಿ 461ರನ್ ಗಳು ಹರಿದುಬಂದಿದೆ. ಈ ಪೈಕಿ ಭಾರತ 296 ರನ್ ಗಳಿಸಿದರೆ, ಬಾಂಗ್ಲಾದೇಶ 164 ರನ್ ಗಳಿಸಿತ್ತು. ಆ ಮೂಲಕ ಇದು ಟಿ20 ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಬಂದ 2ನೇ ಗರಿಷ್ಠ ರನ್ ಗಳಾಗಿದೆ. ಇದಕ್ಕೂ ಮೊದಲು 2019ರಲ್ಲಿ ಐರ್ಲೆಂಡ್ ಮತ್ತು ಆಪ್ಘಾನಿಸ್ತಾನ ಪಂದ್ಯದಲ್ಲಿ 472 ರನ್ ಹರಿದು ಬಂದಿತ್ತು. ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 278 ರನ್ ಗಳಿಸಿದ್ದರೆ, 2ನೇ ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 194 ರನ್ ಕಲೆಹಾಕಿತ್ತು.
Highest match-aggregates in T20Is in India
472 - AFG vs IRE, Dehradun, 2019
461 - IND vs BAN, Hyderabad, 2024
459 - ENG vs SA, Mumbai WS, 2016
458 - IND vs SA, Guwahati, 2022
447 - IND vs AUS, Guwahati, 2023