ಪುಣೆ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕೇವಲ 159 ರನ್ ಗೆ ಆಲೌಟ್ ಆಗಿದ್ದು, ಆ ಮೂಲಕ ಕಿವೀಸ್ ಪಡೆ 103 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತದ ಬ್ಯಾಟರ್ ಗಳು ಅಕ್ಷರಶಃ ವೈಫಲ್ಯ ಅನುಭವಿಸಿದರು. ಭೋಜನ ವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದ ಭಾರತ ತಂಡ ಭೋಜನ ವಿರಾಮದ ಬಳಿಕ 159 ರನ್ ಗೆ ಆಲೌಟ್ ಆಗಿದೆ.
ಆ ಮೂಲಕ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 103 ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ಭೋಜನ ವಿರಾಮದ ವೇಳೆಗೆ ಕ್ರೀಸ್ ಕಾಯ್ದುಕೊಂಡಿದ್ದ ರವೀಂದ್ರ ಜಡೇಜಾ 38 ರನ್ ಗಳಿಸಿ ಸ್ಯಾಂಥ್ನರ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಕಾಶ್ ದೀಪ್ ಕ್ಲೀನ್ ಬೌಲ್ಡ್ ಆದರೆ ಬುಮ್ರಾ ಎಲ್ ಬಿ ಬಲೆಗೆ ಬಿದ್ದರು. ಆ ಮೂಲಕ ಭಾರತ 159 ರನ್ ಗೆ ಆಲೌಟ್ ಆಯಿತು.
ಇನ್ನು ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಥ್ನರ್ 7 ವಿಕೆಟ್, ಗ್ಲೇನ್ ಫಿಲಿಪ್ಸ್ 2 ಮತ್ತು ಟಿಮ್ ಸೌಥಿ 1 ವಿಕೆಟ್ ಪಡೆದರು.
ಇತ್ತೀಚಿನ ವರದಿಗಳು ಬಂದಾಗ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೇ 22 ರನ್ ಕಲೆಹಾಕಿದ್ದು, 125 ರನ್ ಗಳ ಮುನ್ನಡೆ ಸಾಧಿಸಿದೆ. ಅಂತೆಯೇ 15 ರನ್ ಗಳಿಸಿರುವ ಟಾಮ್ ಲಾಥಮ್ ಮತ್ತು 7 ರನ್ ಗಳಿಸಿರುವ ಡೆವಾನ್ ಕಾನ್ವೆ ಬ್ಯಾಟಿಂಗ್ ನಡೆಸುತ್ತಿದ್ದಾರೆ.