ಟಿಮ್ ಡೇವಿಡ್ ದಾಖಲೆ 
ಕ್ರಿಕೆಟ್

IPL 2025: PBKS ವಿರುದ್ಧ ಏಕಾಂಗಿ ಹೋರಾಟ; ಪಂದ್ಯಶ್ರೇಷ್ಠ ಪ್ರಶಸ್ತಿ, ಅಪರೂಪದ ದಾಖಲೆ ಜೊತೆ ಎಲೈಟ್ ಗ್ರೂಪ್ ಸೇರಿದ Tim David

ಐಪಿಎಲ್ ನಲ್ಲಿ ಮತ್ತೆ ಆರ್ ಸಿಬಿ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಅಪಾಯವಿತ್ತು. ನಾಯಕ ರಜತ್ ಪಾಟಿದಾರ್ (23 ರನ್)ಹೊರತು ಪಡಿಸಿದರೆ, ತಂಡದ ಬರೊಬ್ಬರಿ 10 ಆಟಗಾರರ ರನ್ ಗಳಿಕೆ ಒಂದಂಕಿಯಲ್ಲಿತ್ತು. ಇದು ಆರ್ ಸಿಬಿಯ ವೈಫಲ್ಯಕ್ಕೆ ಕಾರಣವಾಯಿತು.

ಬೆಂಗಳೂರು: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿ ಆರ್ ಸಿಬಿಗೆ ಎದುರಾಗಬೇಕಿದ್ದ ಮುಜುಗರವನ್ನು ತಪ್ಪಿಸಿದ ಟಿಮ್ ಡೇವಿಡ್ (Tim David) ಅಪರೂಪದ ದಾಖಲೆ ಜೊತೆ ಎಲೈಟ್ ಗ್ರೂಪ್ ಸೇರಿದ್ದಾರೆ.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು.

ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು ತಲಾ 14 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಆರ್ ಸಿಬಿ ಆಟಗಾರರ ಕಳಪೆ ಬ್ಯಾಟಿಂಗ್

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಕೇವಲ 41ರನ್ ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಐಪಿಎಲ್ ನಲ್ಲಿ ಮತ್ತೆ ಆರ್ ಸಿಬಿ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಅಪಾಯವಿತ್ತು. ನಾಯಕ ರಜತ್ ಪಾಟಿದಾರ್ (23 ರನ್)ಹೊರತು ಪಡಿಸಿದರೆ, ತಂಡದ ಬರೊಬ್ಬರಿ 10 ಆಟಗಾರರ ರನ್ ಗಳಿಕೆ ಒಂದಂಕಿಯಲ್ಲಿತ್ತು. ಇದು ಆರ್ ಸಿಬಿಯ ವೈಫಲ್ಯಕ್ಕೆ ಕಾರಣವಾಯಿತು.

ಟಿಮ್ ಡೇವಿಡ್ ಏಕಾಂಗಿ ಹೋರಾಟ

ಆದರೆ ಈ ಹಂತದಲ್ಲಿ ಕ್ರೀಸ್ ಗೆ ಬಂದ ಟಿಮ್ ಡೇವಿಡ್ ಆರ್ ಸಿಬಿ ಬ್ಯಾಟಿಂಗ್ ಗೆ ಜೀವ ತುಂಬಿದರು. ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್, 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಅಜೇಯ 50ರನ್ ಗಳಿಸಿದರು. ಆದರೆ ಟಿಮ್ ಡೇವಿಡ್ ಗೆ ತಂಡದ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ಟಿಮ್ ಡೇವಿಡ್ ಬ್ಯಾಟಿಂಗ್ ನೆರವಿನಿಂದಾಗಿಯೇ ಆರ್ ಸಿಬಿ 95 ರನ್ ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು.

ಪಂಜಾಬ್ ಗೆ 5 ವಿಕೆಟ್ ಅಂತರದ ವಿರೋಚಿತ ಜಯ

ಇನ್ನು ಆರ್ ಸಿಬಿ ನೀಡಿದ 96ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 12.1 ಓವರ್ ನಲ್ಲೇ 5 ವಿಕೆಟ್ ನಷ್ಟಕ್ಕೆ 98ರನ್ ಗಳಿಸಿ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಪಂಜಾಬ್ ಪರ ನೇಹಲ್ ವಧೇರಾ ಅಜೇಯ 33ರನ್ ಗಳಿಸಿ ಪಂಜಾಬ್ ನ ಗೆಲುವಿನ ರೂವಾರಿಯಾದರು.

ಪಂದ್ಯ ಸೋತರೂ ಟಿಮ್ ಡೇವಿಡ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಇನ್ನು ಈ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿದರೂ, ತಮ್ಮ ಏಕಾಂಗಿ ಹೋರಾಟದ ಮೂಲಕ ಆರ್ ಸಿಬಿ ತಂಡವನ್ನು ಕಳಪೆ ಮೊತ್ತದಿಂದ ರಕ್ಷಿಸಿದ ಟಿಮ್ ಡೇವಿಡ್ ರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿ ಆಯ್ಕೆ ಮಾಡಲಾಯಿತು. ಇಷ್ಟು ದಿನ ಐಪಿಎಲ್ ನಲ್ಲಿ ಪಂದ್ಯ ಗೆದ್ದ ತಂಡದ ಆಟಗಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಹಾಲಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯ ಸೋತ ತಂಡದ ಆಟಗಾರನಿಗೆ ಪಂದ್ಯಶ್ರೇಷ್ಛ ಪ್ರಶಸ್ತಿ ನೀಡಲಾಗಿದೆ.

ಎಲೈಟ್ ಗ್ರೂಪ್ ಸೇರಿದ Tim David

ಇನ್ನು ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನವಾದ ಟಿಮ್ ಡೇವಿಡ್ ಎಲೈಟ್ ಗ್ರೂಪ್ ಸೇರಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪಂದ್ಯ ಸೋತರೂ ಆರ್ ಸಿಬಿ ಪರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನವಾದ 4ನೇ ಆಟಗಾರ ಎಂಬ ಕೀರ್ತಿಗೆ ಟಿಮ್ ಡೇವಿಡ್ ಪಾತ್ರರಾಗಿದ್ದಾರೆ. ಈ ಹಿಂದೆ 2008ರಲ್ಲಿ ಡಿಸಿ ವಿರುದ್ಧದ ಪಂದ್ಯಜದಲ್ಲಿ 42 ಎಸೆತಗಳಲ್ಲಿ 52ರನ್ ಗಳಿಸಿದ್ದ ಶ್ರೀವತ್ಸ್ ಗೋಸ್ವಾಮಿ ಅಂದಿನ ಪಂದ್ಯ ಸೋತಿದ್ದರೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಬಳಿಕ 2009ರಲ್ಲಿ ಐಪಿಎಲ್ ಟೂರ್ನಿಯ ಫೈನಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಭರ್ಜರಿ ಬೌಲಿಂಗ್ ಮಾಡಿ ಕೇವಲ 16 ರನ್ ಗೆ 4 ವಿಕೆಟ್ ಪಡೆದಿದ್ದ ಅನಿಲ್ ಕುಂಬ್ಳೆ ಪಂದ್ಯ ಶ್ರೇಷ್ಠ ಪ್ರಸ್ತಿಗೆ ಭಾಜನರಾಗಿದ್ದರು. ಅಂದಿನ ಪಂದ್ಯವನ್ನೂ ಕೂಡ ಆರ್ ಸಿಬಿ ಸೋತಿತ್ತು. 2016ರಲ್ಲಿ ಗುಜರಾತ್ ವಿರುದ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಅಂದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಂದೂ ಕೂಡ ಆರ್ ಸಿಬಿ ಸೋತಿತ್ತು.

Players to have won the POTM for RCB in a losing cause:

  • Shreevats Goswami - 52(42) vs DC, 2008

  • Anil Kumble - 4/16 vs Dec, 2009 Finals

  • Virat Kohli - 100*(63) vs GL, 2016

  • Tim David - 50*(26) vs PBKS, 2025

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT