ಆರ್ ಸಿಬಿ ಭರ್ಜರಿ ಬೌಲಿಂಗ್ 
ಕ್ರಿಕೆಟ್

IPL 2025: RCB ವಿರುದ್ಧ PBKS ಪರದಾಟ, Rajat Patidar ಪಡೆಗೆ 158 ರನ್ ಗುರಿ

ಪಂಜಾಬ್ ಪರ ಪ್ರಿಯಾಂಶ್ ಆರ್ಯ 22 ರನ್, ಪ್ರಭ್ ಸಿಮ್ರನ್ ಸಿಂಗ್ 33 ರನ್, ಜಾಶ್ ಇಂಗ್ಲಿಸ್ 29ರನ್, ಶಶಾಂಕ್ ಸಿಂಗ್ ಅಜೇಯ 31 ರನ್ ಮತ್ತು ಮಾರ್ಕೋ ಜೇನ್ಸನ್ ಅಜೇಯ 25 ರನ್ ಗಳಿಸಿದರು.

ಚಂಡೀಗಢ: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು ಪಂಜಾಬ್ ಕಿಂಗ್ಸ್ ತಂಡ 158 ರನ್ ಗಳ ಗುರಿ ನೀಡಿದೆ.

ಚಂಡೀಗಢದ ಮುಲ್ಲನ್ಪುರ್ ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು.

ಪಂಜಾಬ್ ಪರ ಪ್ರಿಯಾಂಶ್ ಆರ್ಯ 22 ರನ್, ಪ್ರಭ್ ಸಿಮ್ರನ್ ಸಿಂಗ್ 33 ರನ್, ಜಾಶ್ ಇಂಗ್ಲಿಸ್ 29ರನ್, ಶಶಾಂಕ್ ಸಿಂಗ್ ಅಜೇಯ 31 ರನ್ ಮತ್ತು ಮಾರ್ಕೋ ಜೇನ್ಸನ್ ಅಜೇಯ 25 ರನ್ ಗಳಿಸಿದರು.

ಭರ್ಜರಿ ಆರಂಭ

ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯ (22 ರನ್) ಮತ್ತು ಪ್ರಭ್ ಸಿಮ್ರನ್ ಸಿಂಗ್ (33 ರನ್) ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 42 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ಬೌಲಿಂಗ್ ಗೆ ಇಳಿದ ಆರ್ ಸಿಬಿ ಸ್ಪಿನ್ನರ್ ಕೃಣಾಲ್ ಪಾಂಡ್ಯಾ ಇಬ್ಬರೂ ಆರಂಭಿಕರನ್ನು ಪೆವಿಲಿಯನ್ ಗೆ ಅಟ್ಟಿದರು. ಬಳಿಕ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಕೂಡ ರೊಮಾರಿಯೋ ಶೆಫರ್ಡ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಈ ವಿಕೆಟ್ ಬಳಿಕ ಪಂಜಾಬ್ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಕಳೆದ ಪಂದ್ಯದ ಹೀರೋ ನೇಹಲ್ ವದೇರಾ 5 ರನ್ ಗಳಿಸಿ ಅನಗತ್ಯ ರನ್ ಗಳಿಸಲು ಹೋಗಿ ರನೌಟ್ ಗೆ ಬಲಿಯಾದರು. ಅವರ ಹಿಂದೆಯೇ ಮಾರ್ಕಸ್ ಸ್ಟಾಯಿನಸ್ ಕೂಡ 1 ರನ್ ಗಳಿಸಿ ಸುಯಾಶ್ ಶರ್ಮಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಅದೇ ಓವರ್ ನಲ್ಲಿ 29 ರನ್ ಗಳಿಸಿದ್ದ ಜದಾಶ್ ಇಂಗ್ಲಿಸ್ ಕೂಡ ಸುಯಾಶ್ ಶರ್ಮಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ಶಶಾಂಕ್ ಸಿಂಗ್ ಮತ್ತು ಮಾರ್ಕೋ ಜೇನ್ಸನ್ ಜೋಡಿ ರಕ್ಷಣಾತ್ಮಕ ಆಟದ ಮೊರೆ ಹೋದರು. ಈ ಜೋಡಿ ಪಂಜಾಬ್ ಗೆ ಇನ್ನಾವುದೇ ಆಘಾತ ನೀಡದ 20 ಓವರ್ ಸಂಪೂರ್ಣಗೊಳಿಸಿದರು. ಶಶಾಂಕ್ ಸಿಂಗ್ ಅಜೇಯ 31 ರನ್ ಮತ್ತು ಮಾರ್ಕೋ ಜೇನ್ಸನ್ ಅಜೇಯ 25 ರನ್ ಗಳಿಸಿದರು.

ಸುಯಾಶ್ ಶರ್ಮಾ ಭರ್ಜರಿ ಬೌಲಿಂಗ್

ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ಸ್ಪಿನ್ನರ್ ಸುಯಾಶ್ ಶರ್ಮಾ ಭರ್ಜರಿ ಬೌಲಿಂಗ್ ಮಾಡಿದರು. ಸುಯಾಶ್ ತಾವೆಸೆದ 3ನೇ ಓವರ್ ನಲ್ಲಿ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಪಡೆದರು. ಒಟ್ಟು ನಾಲ್ಕು ಓವರ್ ಎಸೆದ ಸುಯಾಶ್ ಶರ್ಮಾ 6.50 ರನ್ ಸರಾಸರಿಯಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು. ಅಂತೆಯೇ ಅವರಿಗೆ ಉತ್ತಮ ಸಾಥ್ ನೀಡಿದ ಕೃಣಾಲ್ ಪಾಂಡ್ಯಾ ಕೂಡ 4 ಓವರ್ ಎಸೆದು 6.20 ಸರಾಸರಿಯಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ರೊಮಾರಿಯೋ ಶೆಫರ್ಡ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಲಯಾಳಂ ನಟಿ ಮೇಲೆ ಹತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಡಿಕೆಶಿ ಅವಕಾಶ ಕೇಳಿದ್ರು, ಆದ್ರೆ CM ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸ್ಫೋಟಕ ಹೇಳಿಕೆ

ಬೆಳಗಾವಿ ಅಧಿವೇಶನ 2025: ಸುವರ್ಣ ಸೌಧದಲ್ಲೂ'ನಾಟಿ ಕೋಳಿ' ಸದ್ದು, ಆರ್ ಅಶೋಕ್ ಗೆ ಸಿಎಂ ಸಿದ್ದು ಸಲಹೆ!

ಬೆಳಗಾವಿ ಅಧಿವೇಶನ: ವಿಧಾಸಭೆ ಕಲಾಪ ಆರಂಭ; ಸಾಲುಮರದ ತಿಮ್ಮಕ್ಕ ಸೇರಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ

7ನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು; ಬೆಂಗಳೂರಿನಲ್ಲಿ 127 ವಿಮಾನ ರದ್ದು; ಮುಂಬೈ, ದೆಹಲಿಯಲ್ಲೂ ಇದೆ ಕಥೆ!

SCROLL FOR NEXT