ಸುನಿಲ್ ನರೈನ್ 
ಕ್ರಿಕೆಟ್

IPL 2025: DC ವಿರುದ್ಧ ಭರ್ಜರಿ ಬೌಲಿಂಗ್; T20 ಅಪರೂಪದ ದಾಖಲೆ ಸರಿಗಟ್ಟಿದ Sunil Narine

ಕೋಲ್ಕತಾ ನೀಡಿದ 205 ರನ್ ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 14ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ನವದೆಹಲಿ: ಐಪಿಎಲ್ ಟೂರ್ನಿಯ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸ್ಟಾರ್ ಬೌಲರ್ ಸುನಿಲ್ ನರೈನ್ (Sunil Narine) ಪುರುಷರ ಟಿ20 ಕ್ರಿಕೆಟ್ ನ ಅಪರೂಪದ ದಾಖಲೆ ಸರಿಗಟ್ಟಿದ್ದಾರೆ.

ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ರನ್ ಗಳ ಸೋಲು ಕಂಡಿತು. ಕೋಲ್ಕತಾ ನೀಡಿದ 205 ರನ್ ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 14ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ಸುನಿಲ್ ನರೈನ್ ಭರ್ಜರಿ ಬೌಲಿಂಗ್

ಈ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ 27 ರನ್ ಮಾತ್ರ ಗಳಿಸಿ ನಿರಾಶೆ ಮೂಡಿಸಿದ್ದ ಸುನಿಲ್ ನರೈನ್, ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಒಟ್ಟು 4 ಓವರ್ ಎಸೆದ ನರೈನ್ ಕೇವಲ 7.20 ಸರಾಸರಿಯಲ್ಲಿ 29 ರನ್ ಮಾತ್ರ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಅಂತೆಯೇ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

ಪುರುಷರ ಟಿ20 ಕ್ರಿಕೆಟ್ ನ ದಾಖಲೆ

ಇನ್ನು ಇಂದಿನ ಪಂದ್ಯದಲ್ಲಿ 3 ವಿಕೆಟ್ ಪಡೆದ ಸುನಿಲ್ ನರೈನ್ ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 208ಕ್ಕೆ ಏರಿಸಿಕೊಂಡರು. ಆ ಮೂಲಕ ಸುನಿಲ್ ನರೈನ್ ಪುರುಷರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಂಡವೊಂದರ ಪರ ಅತೀ ಹೆಚ್ಚು ವಿಕೆಟ್ ಪಡೆದ ಜಂಟಿ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಈ ಪಟ್ಟಿಯಲ್ಲಿ ಇಂಗ್ಲೆಂಡ್ ನ ಸಮಿತ್ ಪಟೇಲ್ ಇಲ್ಲಿಯವರೆಗೂ ಅಗ್ರಸ್ಥಾನಿಯಾಗಿದ್ದರು. ಅವರು ನಾಟಿಂಗ್ ಹ್ಯಾಮ್ ಷೈರ್ ಪರ 208 ವಿಕೆಟ್ ಗಳಿಸಿದ್ದಾರೆ. ಇದೀಗ ಸುನಿಲ್ ನರೈನ್ ಕೂಡ ಕೆಕೆಆರ್ ಪರ 208 ವಿಕೆಟ್ ಕಬಳಿಸಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಹ್ಯಾಂಪ್ ಶೈರ್ ಪರ 199 ವಿಕೆಟ್ ಕ್ರಿಸ್ ವುಡ್ 2ನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ಪರ 195 ವಿಕೆಟ್ ಪಡೆದಿರುವ ಲಸಿತ್ ಮಲಿಂಗಾ 3 ಮತ್ತು Gloucestershire ಪರ 193 ವಿಕೆಟ್ ಪಡೆದಿರುವ ಡೇವಿನ್ ಪೈನ್ 4ನೇ ಸ್ಥಾನದಲ್ಲಿದ್ದಾರೆ.

Most wickets for a team in Men’s T20 cricket

  • 208 - Samit Patel (Nottinghamshire)

  • 208* - Sunil Narine (Kolkata Knight Riders)

  • 199 - Chris Wood (Hampshire)

  • 195 - Lasith Malinga (Mumbai Indians)

  • 193 - David Payne (Gloucestershire)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT