ಆರ್ ಅಶ್ವಿನ್ 
ಕ್ರಿಕೆಟ್

'ನನ್ನನ್ನು ರಿಲೀಸ್ ಮಾಡಿ': ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರ್ ಅಶ್ವಿನ್ ಮನವಿ; ಸಂಜು ಸ್ಯಾಮ್ಸನ್ ಎಂಟ್ರಿ?

ಕಳೆದ ವರ್ಷ ಅಶ್ವಿನ್ ಚೆನ್ನೈ ಫ್ರಾಂಚೈಸಿಗೆ ಮರಳಿ ಬಂದಿದ್ದು ಸಾಕಷ್ಟು ಸುದ್ದಿಯಾಗಿತ್ತು. ಏಕೆಂದರೆ, ಆಫ್-ಸ್ಪಿನ್ನರ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಫ್ರಾಂಚೈಸಿ ಕೂಡ ಅದೇ ಆಗಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ನೇ ಆವೃತ್ತಿಗೆ ಸಿದ್ಧವಾಗಲು ಎಲ್ಲ ಫ್ರಾಂಚೈಸಿಗಳಿಗೆ ಇನ್ನೂ ಕೆಲವು ತಿಂಗಳುಗಳು ಉಳಿದಿವೆ. ಆಟಗಾರರ ಸಂಭಾವ್ಯ ವಿನಿಮಯ ಮತ್ತು ನಿರ್ಗಮನದ ವದಂತಿಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ. ರಾಜಸ್ಥಾನ್ ರಾಯಲ್ಸ್ (RR) ನಾಯಕ ಸಂಜು ಸ್ಯಾಮ್ಸನ್ ಅವರು ತಂಡವನ್ನು ತೊರೆಯಲಿದ್ದಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಸೇರಲಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಕಳೆದ ವರ್ಷವಷ್ಟೇ ಸಿಎಸ್‌ಕೆಗೆ ಮರಳಿದ್ದ ರವಿಚಂದ್ರನ್ ಅಶ್ವಿನ್, ತಮ್ಮನ್ನು ಬಿಡುಗಡೆ ಮಾಡುವಂತೆ ಫ್ರಾಂಚೈಸಿಯನ್ನು ಕೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ವೊಂದು ಹೇಳಿದೆ.

ಐಪಿಎಲ್ 2026ನೇ ಆವೃತ್ತಿಗೂ ಮುನ್ನ ತಮ್ಮನ್ನು ಬಿಡುಗಡೆ ಮಾಡುವಂತೆ ಆರ್ ಅಶ್ವಿನ್ ಸಿಎಸ್‌ಕೆಗೆ ವಿನಂತಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ ಎಂದು ಜಾನ್ಸ್ ಎನ್ನುವ ಟ್ವಿಟರ್ ಬಳಕೆದಾರರು ತಿಳಿಸಿದ್ದಾರೆ.

ಕಳೆದ ವರ್ಷ ಅಶ್ವಿನ್ ಚೆನ್ನೈ ಫ್ರಾಂಚೈಸಿಗೆ ಮರಳಿ ಬಂದಿದ್ದು ಸಾಕಷ್ಟು ಸುದ್ದಿಯಾಗಿತ್ತು. ಏಕೆಂದರೆ, ಆಫ್-ಸ್ಪಿನ್ನರ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಫ್ರಾಂಚೈಸಿ ಕೂಡ ಅದೇ ಆಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಅನುಭವಿ ಸ್ಪಿನ್ನರ್ ಈಗ ಹೊಸ ತಂಡದ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ.

2025ರ ಐಪಿಎಲ್ ಆವೃತ್ತಿಯಲ್ಲಿ ಅಶ್ವಿನ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಸಿಎಸ್‌ಕೆ ಪರ ಕೇವಲ 9 ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ಕೇವಲ 7 ವಿಕೆಟ್‌ಗಳನ್ನು ಪಡೆದಿದ್ದರು. ಕಳಪೆ ಪ್ರದರ್ಶನದಿಂದಾಗಿ ಅಶ್ವಿನ್ ಹಲವಾರು ಪಂದ್ಯಗಳಿಂದ ಬೆಂಚ್‌ನಲ್ಲಿ ಕೂರಬೇಕಾಯಿತು. ಅವರ ಬದಲಿಗೆ ಫ್ರಾಂಚೈಸಿ ಕಿರಿಯ ಆಟಗಾರರನ್ನು ಕರೆತಂತು. ಈಗಾಗಲೇ 30 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಆಟಗಾರರಿಂದ ತುಂಬಿರುವ ಫ್ರಾಂಚೈಸಿಯಾಗಿರುವ ಸಿಎಸ್‌ಕೆಗೆ 38 ವರ್ಷದ ಅಶ್ವಿನ್ ಮೇಲೆ ಒಲವಿರಲಿಲ್ಲ.

ರಾಜಸ್ಥಾನ್ ರಾಯಲ್ಸ್ ತಂಡದಿಂದ ಸ್ಯಾಮ್ಸನ್ ಹೊರಹೋಗುವ ಸಾಧ್ಯತೆ ಇದೆ ಎಂಬ ವದಂತಿಗಳು ನಿಜವಾಗಿದ್ದರೆ, ಅವರು ಸಿಎಸ್‌ಕೆಗೆ ಗಂಭೀರ ಆಯ್ಕೆಯಾಗಬಹುದು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿರುವ ಸ್ಯಾಮ್ಸನ್, 2026ರ ಆವೃತ್ತಿಗೂ ಮುನ್ನ ಎಂಎಸ್ ಧೋನಿಯಿಂದ ತೆರವಾಗುವ ಸ್ಥಾನವನ್ನು ತುಂಬಲು ಅತ್ಯುತ್ತಮ ಅಭ್ಯರ್ಥಿ ಎನ್ನಲಾಗಿದೆ.

ಮತ್ತೊಂದು ಪ್ರಮುಖ ವಿಚಾರವೆಂದರೆ, ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯೊಂದಿಗೆ ಸಾಕಷ್ಟು ಯಶಸ್ಸನ್ನು ಕಂಡ ಆಟಗಾರ. ಆದ್ದರಿಂದ, ಅಶ್ವಿನ್ ಮತ್ತು ಸ್ಯಾಮ್ಸನ್ ಅವರನ್ನು ಒಳಗೊಂಡ ಟ್ರೇಡ್ RR ಮತ್ತು CSK ಎರಡಕ್ಕೂ ಸಂಭಾವ್ಯ ಪರಿಹಾರವಾಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT