ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ನಿಶ್ಚಿತಾರ್ಥ ನಡೆದಿದೆ ಎಂದು ತಿಳಿದುಬಂದಿದೆ.
25 ವರ್ಷಕ್ಕೆ ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಬಾಲ್ಯದ ಗೆಳತಿ ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ನಿಶ್ಚಿತಾರ್ಥ ಕಾರ್ಯಕ್ರಮ ರಹಸ್ಯವಾಗಿ ನಡೆದಿದ್ದು, ಸರಳವಾಗಿ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಎರಡೂ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಫೋಟೋಗಳು ವೈರಲ್ ಆಗಿವೆ.
ಆದರೆ, ನಿಶ್ಚಿತಾರ್ಥದ ಬಗ್ಗೆ ಎರಡೂ ಕುಟುಂಬಗಳಿಂದ ಇನ್ನು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಅಲ್ಲದೆ, ಅರ್ಜುನ್ ತೆಂಡೂಲ್ಕರ್ ಸಹ ಈ ಬಗ್ಗೆ ತನ್ನ ಯಾವುದೇ ಪೋಸ್ಟ್'ಗಳನ್ನು ಮಾಡಿಲ್ಲ.
ಅರ್ಜುನ್ ಅವರ ಭಾವಿ ಪತ್ನಿ ಸಾನಿಯಾ ಚಂದೋಕ್ ಮುಂಬೈನ ದೊಡ್ಡ ಕುಟುಂಬಕ್ಕೆ ಸೇರಿದವರು. ಸಾನಿಯಾ ಹೈ ಪ್ರೋಫೈಲ್ ಕುಟುಂಬದವರಾದರೂ ಸಾಮಾನ್ಯ ಜನರಂತೆ ಇದ್ದಾರೆ. ಇವರು ಮುಂಬೈನ ಪ್ರಸಿದ್ಧ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಘಾಯ್ ಇಂಟರ್ ಕಾಂಟಿನೆಂಟಲ್ ಮೆರೈನ್ ಡ್ರೈವ್ ಹೋಟೆಲ್ ಮತ್ತು ಬ್ರೂಕ್ಲಿನ್ ಕ್ರೀಮರಿಗಳ ಮಾಲೀಕರು.