ಐಪಿಎಲ್ - ಆರ್‌ಸಿಬಿ 
ಕ್ರಿಕೆಟ್

IPL 2026 ಹರಾಜು ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ; RCB ಮಾಜಿ ಆಟಗಾರ, ಕನ್ನಡಿಗ ಸೇರಿ 9 ಮಂದಿ ಸೇರ್ಪಡೆ!

ಡಿಸೆಂಬರ್ 16 ರಂದು ನಡೆಯಲಿರುವ ಮಿನಿ-ಹರಾಜಿಗಾಗಿ ಹರಾಜು ಪಟ್ಟಿಗೆ 9 ಹೊಸ ಆಟಗಾರರು ಸೇರ್ಪಡೆಯಾಗಿದ್ದು, ಈಗ ಅವರ ಸಂಖ್ಯೆ 359 ಆಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಹರಾಜು ಪಟ್ಟಿಗೆ ಒಂಬತ್ತು ಹೊಸ ಆಟಗಾರರನ್ನು ಸೇರಿಸಿದೆ. ಡಿಸೆಂಬರ್ 16 ರಂದು ನಡೆಯಲಿರುವ ಮಿನಿ-ಹರಾಜಿಗಾಗಿ 1,005 ಹೆಸರುಗಳನ್ನು ಕೈಬಿಟ್ಟು 350 ಆಟಗಾರರ ಪಟ್ಟಿಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ, ಬಿಸಿಸಿಐ ಇನ್ನೂ ಒಂಬತ್ತು ಆಟಗಾರರೊಂದಿಗೆ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಪಟ್ಟಿಯಲ್ಲಿ ಐಪಿಎಲ್ 2025 ರಲ್ಲಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದ ಆಟಗಾರ ಭಾರತೀಯ ಬ್ಯಾಟ್ಸ್‌ಮನ್ ಸ್ವಸ್ತಿಕ್ ಚಿಕಾರ ಸ್ಥಾನ ಪಡೆದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶ ಟಿ20 ಲೀಗ್‌ನಲ್ಲಿ ಚಿಕಾರ ಅವರ ಪ್ರದರ್ಶನವನ್ನು ಗಮನಿಸಿದರೆ, ಆರಂಭಿಕ ಪಟ್ಟಿಯಲ್ಲಿ ಅವರ ಅನುಪಸ್ಥಿತಿಯು ಆಶ್ಚರ್ಯಕರವಾಗಿತ್ತು.

ಹರಾಜು ಪಟ್ಟಿಗೆ ಐದು ಹೊಸ ಆಟಗಾರರು ಸೇರ್ಪಡೆಯಾಗಿದ್ದು, ಈಗ ಅವರ ಸಂಖ್ಯೆ 359 ಆಗಿದೆ. ಇದರಲ್ಲಿ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ತಂಡದ ಸದಸ್ಯರಾಗಿದ್ದ ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ಶ್ರೀಜಿತ್ ಸೇರಿದ್ದಾರೆ.

ತ್ರಿಪುರಾದ ಮಣಿಶಂಕರ್ ಮುರಾಸಿಂಗ್, ಹೈದರಾಬಾದ್‌ನ ಚಾಮಾ ಮಿಲಿಂದ್, ಉತ್ತರಾಖಂಡದ ರಾಹುಲ್ ರಾಜ್ ನಮಲಾ ಮತ್ತು ಜಾರ್ಖಂಡ್‌ನ ವಿರಾಟ್ ಸಿಂಗ್ ಸೇರ್ಪಡೆಗೊಂಡ ಇತರ ಭಾರತೀಯ ಆಟಗಾರರು. ಈ ಆಟಗಾರರಲ್ಲಿ ಮಿಲಿಂದ್ ಮತ್ತು ಸಿಂಗ್ ಈ ಹಿಂದೆ ಐಪಿಎಲ್‌ನಲ್ಲಿ ಆಡಿದ್ದರು.

ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ರಿಸ್ ಗ್ರೀನ್, ದಕ್ಷಿಣ ಆಫ್ರಿಕಾದ ಬೌಲರ್ ಈಥನ್ ಬಾಷ್ ಮತ್ತು ಮಲೇಷ್ಯಾದ ವಿಕೆಟ್ ಕೀಪರ್ ವೀರಂದೀಪ್ ಸಿಂಗ್ ಸೇರಿದಂತೆ ಮೂವರು ವಿದೇಶಿ ಆಟಗಾರರನ್ನು ಸೇರಿಸಲಾಗಿದೆ.

ಕುತೂಹಲಕಾರಿಯಾಗಿ, ಈಥನ್ ಬಾಷ್ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರ ಸಹೋದರರಾಗಿದ್ದು, ಅವರನ್ನು ಐಪಿಎಲ್ 2026ಕ್ಕಾಗಿ ಮುಂಬೈ ಉಳಿಸಿಕೊಂಡಿದೆ. ಈಮಧ್ಯೆ, ವೀರಂದೀಪ್ ಐಪಿಎಲ್ 2026ರ ಹರಾಜಿನಲ್ಲಿ ಭಾಗವಹಿಸುವ ಅಸೋಸಿಯೇಟ್ ರಾಷ್ಟ್ರದ ಏಕೈಕ ಆಟಗಾರನಾಗಿರುತ್ತಾರೆ.

ಬಿಸಿಸಿಐ ಪರಿಷ್ಕೃತ ಪಟ್ಟಿಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಲೆಗ್-ಸ್ಪಿನ್ನರ್ ನಿಖಿಲ್ ಚೌಧರಿ ಅವರ ರಾಷ್ಟ್ರೀಯತೆಯನ್ನು ಭಾರತದಿಂದ ಆಸ್ಟ್ರೇಲಿಯಾಕ್ಕೆ ಬದಲಿಸಲಾಗಿದೆ. ಭಾರತದಲ್ಲಿ ಜನಿಸಿದ ಚೌಧರಿ ಅವರನ್ನು ಆರಂಭದಲ್ಲಿ ವಿದೇಶಿ ಆಟಗಾರನಾಗಿ ಅಲ್ಲ, ಸ್ಥಳೀಯ ಆಟಗಾರನಾಗಿ ಪಟ್ಟಿ ಮಾಡಲಾಗಿತ್ತು.

ಐಪಿಎಲ್ 2026 ಹರಾಜಿನ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಆಟಗಾರರು

1. ಮಣಿಶಂಕರ್ ಮುರಸಿಂಗ್ (ಭಾರತ)

2. ವಿರಂದೀಪ್ ಸಿಂಗ್ (ಮಲೇಷ್ಯಾ)

3. ಚಾಮಾ ಮಿಲಿಂದ್ (ಭಾರತ)

4. ಕೆಎಲ್ ಶ್ರೀಜಿತ್ (ಭಾರತ)

5. ಎಥಾನ್ ಬಾಷ್ (ದಕ್ಷಿಣ ಆಫ್ರಿಕಾ)

6. ಕ್ರಿಸ್ ಗ್ರೀನ್ (ಆಸ್ಟ್ರೇಲಿಯಾ)

7. ಸ್ವಸ್ತಿಕ್ ಚಿಕಾರಾ (ಭಾರತ)

8. ರಾಹುಲ್ ರಾಜ್ ನಾಮಲ (ಭಾರತ)

9. ವಿರಾಟ್ ಸಿಂಗ್ (ಭಾರತ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕ್ರಿಕೆಟ್ ಅಭಿಮಾನಿಗಳಿಗೆ ಡಿಕೆಶಿ ಗುಡ್ ನ್ಯೂಸ್; ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್

ಮೈಸೂರು: ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು!

ಮದುವೆಯಾಗಿ ಮೂರೇ ದಿನಕ್ಕೆ ವಿಚ್ಛೇದನ ಕೇಳಿದ ವಧು; ಮೊದಲ ರಾತ್ರಿಯೇ ಆಘಾತಕಾರಿ ವಿಷಯ ಬಹಿರಂಗ!

MUDA: 300 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್‌ ಅಭಿವೃದ್ಧಿ; ಸಚಿವ ಬೈರತಿ ಸುರೇಶ್‌

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

SCROLL FOR NEXT