ವೈಭವ್ ಸೂರ್ಯವಂಶಿ - ಆಯುಷ್ ಮ್ಹಾತ್ರೆ 
ಕ್ರಿಕೆಟ್

U19 ವಿಶ್ವಕಪ್‌ ಭಾರತ ತಂಡ ಪ್ರಕಟ; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನಾಯಕನಾಗಿ ವೈಭವ್ ಸೂರ್ಯವಂಶಿ ನೇಮಿಸಿದ ಬಿಸಿಸಿಐ

ಐದು ಬಾರಿಯ ಚಾಂಪಿಯನ್‌ಗಳಾಗಿ (2000, 2008, 2012, 2018 ಮತ್ತು 2022) ಮತ್ತು ಕಳೆದ ವರ್ಷದ ಫೈನಲಿಸ್ಟ್‌ ಆಗಿದ್ದ ಭಾರತ ಇದೀಗ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2026ರ ಐಸಿಸಿ ಅಂಡರ್-19 ಪುರುಷರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿದೆ. ಆಯುಷ್ ಮ್ಹಾತ್ರೆ ಮತ್ತು ವಿಹಾನ್ ಮಲ್ಹೋತ್ರಾ ನಾಯಕ ಮತ್ತು ಉಪನಾಯಕರಾಗಿ ಮುಂದುವರಿಯಲಿದ್ದಾರೆ. 2025ರ ಪುರುಷರ ಅಂಡರ್-19 ಏಷ್ಯಾ ಕಪ್‌ನಲ್ಲಿ ತಂಡದ ಭಾಗವಾಗಿದ್ದ ಯುವರಾಜ್ ಹೊಗಿಲ್ ಮತ್ತು ನಮನ್ ಪುಷ್ಪಕ್ ಅವರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ಮೊಹಮ್ಮದ್ ಎನಾನ್ ಮತ್ತು ಆರ್‌ಎಸ್‌ ಅಂಬ್ರೀಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಐದು ಬಾರಿಯ ಚಾಂಪಿಯನ್‌ಗಳಾಗಿ (2000, 2008, 2012, 2018 ಮತ್ತು 2022) ಮತ್ತು ಕಳೆದ ವರ್ಷದ ಫೈನಲಿಸ್ಟ್‌ ಆಗಿದ್ದ ಭಾರತ ಇದೀಗ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಈಗಾಗಲೇ ಸೂಪರ್‌ಸ್ಟಾರ್‌ಗಳಾಗಿರುವ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ತಂಡದಲ್ಲಿರುವುದು ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ICC ಅಂಡರ್-19 ಏಕದಿನ ವಿಶ್ವಕಪ್ 2026ಕ್ಕಾಗಿ ಭಾರತ ತಂಡ

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್‌ಎಸ್ ಅಂಬ್ರಿಶ್, ಕನಿಷ್ಕ್ ಚೌಹಾಣ್, ಖಿಲಾನ್ ಎ. ಪಟೇಲ್, ಮೊಹಮ್ಮದ್ ಏನನ್, ಹೆನಿಲ್ ಪಟೇಲ್, ಡಿ. ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್

ಐಸಿಸಿ ಟೂರ್ನಿಯಲ್ಲಿ ಆಯುಷ್ ಮ್ಹಾತ್ರೆ ತಂಡವನ್ನು ಮುನ್ನಡೆಸಲಿದ್ದರೂ, ದಕ್ಷಿಣ ಆಫ್ರಿಕಾ ವಿರುದ್ಧದ ಪೂರ್ವಸಿದ್ಧತಾ ಸರಣಿಯಲ್ಲಿ ಅವರು ಭಾಗವಹಿಸುವುದಿಲ್ಲ. ಮ್ಹಾತ್ರೆ ಮತ್ತು ವಿಹಾನ್ ಗಾಯಗಳಿಂದ ಹೊರಗುಳಿದಿದ್ದಾರೆ ಮತ್ತು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಗೆ ವರದಿ ಮಾಡಿಕೊಳ್ಳಲಿದ್ದಾರೆ. ಮ್ಹಾತ್ರೆ ಅನುಪಸ್ಥಿತಿಯಲ್ಲಿ, ಸೂರ್ಯವಂಶಿ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಆರನ್ ಜಾರ್ಜ್ ಉಪನಾಯಕರಾಗಿರುತ್ತಾರೆ.

'ಆಯುಷ್ ಮ್ಹಾತ್ರೆ ಮತ್ತು ವಿಹಾನ್ ಮಲ್ಹೋತ್ರಾ ಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಈ ಜೋಡಿ ತಮ್ಮ ಗಾಯಗಳ ಹೆಚ್ಚಿನ ನಿರ್ವಹಣೆಗಾಗಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ತೆರಳಲಿದ್ದಾರೆ. ಐಸಿಸಿ ಪುರುಷರ ಅಂಡರ್-19 ವಿಶ್ವಕಪ್‌ಗಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ' ಎಂದು ಬಿಸಿಸಿಐ ಹೇಳಿದೆ.

ದಕ್ಷಿಣ ಆಫ್ರಿಕಾ ಸರಣಿಗಾಗಿ ಭಾರತದ ಅಂಡರ್-19 ತಂಡ

ವೈಭವ್ ಸೂರ್ಯವಂಶಿ (ನಾಯಕ), ಆರನ್ ಜಾರ್ಜ್ (ಉಪನಾಯಕ), ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್‌ಎಸ್ ಅಂಬ್ರೀಶ್, ಕನಿಷ್ಕ್ ಚೌಹಾಣ್, ಖಿಲಾನ್ ಎ ಪಟೇಲ್, ಮೊಹಮ್ಮದ್ ಏನನ್, ಹೆನಿಲ್ ಪಟೇಲ್, ಡಿ. ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಯುವರಾಜ್ ಗೋಹಿಲ್, ರಾಹುಲ್ ಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಒಂದು ಸಿದ್ಧಾಂತ, ಸಿದ್ಧಾಂತಗಳು ಎಂದಿಗೂ ಸಾಯಲ್ಲ: 140ನೇ ಸಂಸ್ಥಾಪನಾ ದಿನದಂದು ಮಲ್ಲಿಕಾರ್ಜುನ ಖರ್ಗೆ

'ಜನ ನಾಯಗನ್' ನನ್ನ ಕೊನೆಯ ಸಿನಿಮಾ: ಮುಂದಿನ 30 ವರ್ಷ ನಿಮ್ಮ ಋಣ ತೀರಿಸಲು ದುಡಿಯುತ್ತೇನೆ - ನಟ ವಿಜಯ್

ಬಿಜೆಪಿ-ಆರ್‌ಎಸ್‌ಎಸ್‌ ಹೊಗಳಿದ ದಿಗ್ವಿಜಯ್ ಸಿಂಗ್‌‌ಗೆ ಶಶಿ ತರೂರ್ ಬೆಂಬಲ; ಪಕ್ಷದ ಸಂಘಟನೆ ಬಲಪಡಿಸಬೇಕು ಎಂದ ಸಂಸದ

'ಮಧ್ಯಮ ವರ್ಗದವರ ಜೀವನ' ಭಾರತಕ್ಕಿಂತ ಕೆನಡಾದಲ್ಲಿ ಉತ್ತಮವಾಗಿದೆಯೇ? ಚರ್ಚೆ ಹುಟ್ಟುಹಾಕಿದ ಭಾರತೀಯ ವಲಸಿಗ! Video

ರಾಜ್ಯ ಲೋಕಾಯುಕ್ತ ಇತಿಹಾಸದಲ್ಲಿ ಇದೇ ಮೊದಲು! ಭ್ರಷ್ಟಾಚಾರ ಆರೋಪ, ಒಂದೇ ತಾಲೂಕಿನ ಎಲ್ಲಾ '25 ಗ್ರಾಮ ಪಂಚಾಯಿತಿ'ಗಳ ವಿರುದ್ಧ ದೂರು ದಾಖಲು!

SCROLL FOR NEXT