ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯ ನಾಗಪುರದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಈ ಮಧ್ಯೆ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಹರ್ಷಿತ್ ರಾಣಾ ಅನಗತ್ಯ ದಾಖಲೆ ಮಾಡಿದ್ದರೆ, ಆರ್ ಸಿಬಿ ಫ್ರಾಂಚೈಸಿ ಖರೀದಿಸಿರುವ ಇಂಗ್ಲೆಂಡ್ ತಂಡ ಸ್ಫೋಟಕ ಬ್ಯಾಟ್ಸ್ ಮನ್ ಫಿಲ್ ಸಾಲ್ಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು RCB ಅಭಿಮಾನಿಗಳಿಗೆ ಕೊಂಚ ಭರವಸೆ ಮೂಡಿಸಿದೆ.
ಇಂಗ್ಲೆಂಡ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಸ್ಫೋಟ ಬ್ಯಾಟಿಂಗ್ ಮಾಡಿ ಒಂದೇ ಓವರ್‌ನಲ್ಲಿ 6,4,6,4,0,6 ಒಟ್ಟಾರೆ 26 ರನ್ ಬಾರಿಸುವ ಮೂಲಕ ಹರ್ಷಿತ್ ರಾಣಾ ಅವರ ಅದ್ಭುತ ಆರಂಭಕ್ಕೆ ಬ್ರೇಕ್ ಹಾಕಿದರು. ನಾಗ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ODI ಗೆ ಪಾದಾರ್ಪಣೆ ಮಾಡಿದ ಹರ್ಷಿತ್, ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಕೇವಲ 11 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮವಾಗಿ ಪ್ರಾರಂಭಿಸಿದರು, ಅದರಲ್ಲಿ ಒಂದು ಮೇಡನ್ ಕೂಡ ಸೇರಿತ್ತು. ಆದರೆ ಅವರ ಮೂರನೇ ಓವರ್ ನಲ್ಲಿ 26 ರನ್ ಹೊಡೆಸಿಕೊಂಡಿದ್ದು ದುಬಾರಿ ಅನಿಸಿಕೊಂಡಿತು.
ಇದು ODIಗಳಲ್ಲಿ ಭಾರತಕ್ಕೆ ನಾಲ್ಕನೇ ಅತ್ಯಂತ ದುಬಾರಿ ಮತ್ತು ಚೊಚ್ಚಲ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ದುಬಾರಿ ರನ್ ಹೊಡೆಸಿಕೊಂಡ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
ಭಾರತಕ್ಕೆ ODIಗಳಲ್ಲಿ ಅತ್ಯಂತ ದುಬಾರಿ ಓವರ್‌ಗಳು:
30 - ಯುವರಾಜ್ ಸಿಂಗ್ vs ಡಿಮಿಟ್ರಿ ಮಸ್ಕರೇನ್ಹಸ್ (ENG), ದಿ ಓವಲ್, 2007
30 - ಇಶಾಂತ್ ಶರ್ಮಾ vs ಜೇಮ್ಸ್ ಫಾಕ್ನರ್ (AUS), ಮೊಹಾಲಿ, 2014
28 - ಕೃನಾಲ್ ಪಾಂಡ್ಯ vs ಬೆನ್ ಸ್ಟೋಕ್ಸ್ (ENG), ಪುಣೆ, 2021
26 - ಹರ್ಷಿತ್ ರಾಣಾ vs ಫಿಲ್ ಸಾಲ್ಟ್ (ENG), ನಾಗ್ಪುರ, 2025*
26 - ರವಿಶಾಸ್ತ್ರಿ vs ಮೈಕ್ ಗ್ಯಾಟಿಂಗ್ (ENG), ಝಲಂದರ್, 1981
ಇದಾದ ನಂತರ ರಾಣಾ ಬದಲಿಗೆ ಹಾರ್ದಿಕ್ ಪಾಂಡ್ಯರನ್ನು ಕಣಕ್ಕೆ ಇಳಿಸಲಾಯಿತು. ಹಾರ್ದಿಕ್ ಬೌಲಿಂಗ್ ನಲ್ಲಿ ಫಿಲ್ ಸಾಲ್ಟ್ ರನ್ ಔಟ್ ಆದ ನಂತರ ರಾಣಾ ಮತ್ತೆ ಬೌಲಿಂಗ್ ಮಾಡಿದ್ದು ಒಂದೇ ಓವರ್‌ನಲ್ಲಿ ಬೆನ್ ಡಕೆಟ್ ಮತ್ತು ಹ್ಯಾರಿ ಬ್ರೂಕ್ ಇಬ್ಬರ ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಫಿಲ್ ಸಾಲ್ಟ್ 26 ಎಸೆತಗಳಲ್ಲಿ 3 ಸಿಕ್ಸರ್ 5 ಬೌಂಡರಿ ಸೇರಿದಂತೆ 43 ರನ್ ಬಾರಿಸಿ ಔಟಾದರು.