ಫಿಲ್ ಸಾಲ್ಟ್ 
ಕ್ರಿಕೆಟ್

IPL 2025 Final Match: RCB ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್; ಈ ಸ್ಟಾರ್ ಆಟಗಾರ ಆಡೋದು ಅನುಮಾನ!

ಈ ಪಂದ್ಯದಲ್ಲಿ ಸ್ಟಾರ್ ಆಟಗಾರರೊಬ್ಬರು ಆಡೋದು ಅನುಮಾನವಾಗಿದ್ದು, ಫ್ರಾಂಚೈಸಿ ಹಾಗೂ ಆರ್ ಸಿಬಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ವಿಶ್ವದ ಅತಿ ದೊಡ್ಡ ಐಪಿಎಲ್ 2025 18ನೇ ಆವೃತ್ತಿಯ ಫೈನಲ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲೂ ಆರ್ ಸಿಬಿ ಸತತ 18 ವರ್ಷಗಳ ನಂತರ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಕನಸನ್ನು ನನಸಾಗುವ ನಿರೀಕ್ಷೆಯೊಂದಿಗೆ ಭಾರಿ ಸಿದ್ದತೆ ನಡೆಸಿದೆ.

ಆದರೆ, ಈ ಪಂದ್ಯದಲ್ಲಿ ಸ್ಟಾರ್ ಆಟಗಾರರೊಬ್ಬರು ಆಡೋದು ಅನುಮಾನವಾಗಿದ್ದು, ಫ್ರಾಂಚೈಸಿ ಹಾಗೂ ಆರ್ ಸಿಬಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

ವರದಿಯೊಂದರ ಪ್ರಕಾರ, ಆರ್‌ಸಿಬಿಯ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಪಂಜಾಬ್ ಫ್ರಾಂಚೈಸಿ ವಿರುದ್ಧ ಪ್ರಶಸ್ತಿ ಹಣಾಹಣಿಯಲ್ಲಿ ಆಡೋದು ಅನುಮಾನವಿದೆ. ಏಕೆಂದರೆ ಅವರು ತಮ್ಮ ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. ಅಂತಿಮ ಪಂದ್ಯದ ಮುನ್ನಾದಿನದಂದು RCB ಯ ತರಬೇತಿ ಅವಧಿಯಲ್ಲಿ ಫಿಲ್ ಸಾಲ್ಟ್ ಕಾಣಿಸದೆ ಇರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸಾಲ್ಟ್ ಆಡಲ್ಲ. ಅವರ ಮೊದಲ ಮಗುವಿನ ಜನನಕ್ಕಾಗಿ ತನ್ನ ಪತ್ನಿಯೊಂದಿಗೆ ತೆರಳಲು ಯೋಜಿಸಿದ್ದಾರೆ ಎಂದು ESPNCricinfo ವರದಿ ಮಾಡಿದೆ. ಆದರೆ ಈ ಬಗ್ಗೆ RCB ತರಬೇತುದಾರ ಆಂಡಿ ಫ್ಲವರ್ ಮತ್ತು ನಾಯಕ ರಜತ್ ಪಾಟಿದಾರ್, ಯಾರೂ ಕೂಡಾ ಎಲ್ಲೂ ಬಾಯ್ಬಿಟ್ಟಿಲ್ಲ. ಎಲ್ಲಾರೂ ಪ್ರಮುಖ ಪಂದ್ಯದ ಮುಂದೆ ಆ ವಿಷಯವನ್ನು ರಹಸ್ಯವಾಗಿಡಲು ಬಯಸಿದ್ದಾರೆ.

ಫಿಲ್ ಸಾಲ್ಟ್ ಈ ಬಾರಿ RCB ಗಾಗಿ 12 ಪಂದ್ಯಗಳಲ್ಲಿ 175.90 ಸ್ಟ್ರೈಕ್-ರೇಟ್ ಮತ್ತು 35.18 ರ ಸರಾಸರಿಯಲ್ಲಿ 387 ರನ್ ಗಳಿಸಿದ್ದಾರೆ. ಜಾಕೋಬ್ ಬೆಥೆಲ್ ಈಗಾಗಲೇ ಸ್ವದೇಶಕ್ಕೆ ಮರಳಿದ್ದು,ಇದೀಗ ಫಿಲ್ ಸಾಲ್ಟ್ ಲಭ್ಯವಿಲ್ಲದಿದ್ದರೆ ಬೆಂಗಳೂರು ತಂಡವು ಆರಂಭಿಕ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಲ್ಟ್ ಇಲ್ಲದಿದ್ದರೆ ಟಿಮ್ ಸಿಫೆರ್ಟ್ ಮತ್ತು ಮಯಾಂಕ್ ಅಗರ್ವಾಲ್ ಅವರು ವಿರಾಟ್ ಕೊಹ್ಲಿ ಜೊತೆಗೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT