ಬೆಂಗಳೂರು: ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿಯಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಉದ್ಯಾನಗರಿ ಸಜ್ಜಾಗುತ್ತಿದೆ.
ಬೆಂಗಳೂರಿನಲ್ಲಿರುವ ಅಭಿಮಾನಿಗಳು ಲೈವ್ ಆಗಿ ಪಂದ್ಯ ವೀಕ್ಷಿಸಲು ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7-30ಕ್ಕೆ ಪಂದ್ಯ ಆರಂಭದೊಂದಿಗೆ ನಗರದಾದ್ಯಂತ ಬಾರ್‌ಗಳು, ಕೆಫೆಗಳು ಮತ್ತು ಮೇಲ್ಛಾವಣಿಗಳು ಅಭಿಮಾನಿಗಳಿಗೆ ಮಿನಿ ಸ್ಟೇಡಿಯಂಗಳಾಗಿ ಪರಿವರ್ತನೆಯಾಗುವುದರಿಂದ ಬೆಂಗಳೂರಿನ ಶಕ್ತಿ (POWER) ಮಾರ್ದನಿಸುವ ನಿರೀಕ್ಷಿಯಿದೆ.
ಆರ್ ಸಿಬಿ ಅಭಿಮಾನಿಗಳಿಗಾಗಿ ನಗರದ ಹಲವಾರು ಕಡೆಗಳಲ್ಲಿ live screening ಆಯೋಜಿಸಲಾಗಿದೆ.
ಈ ಸ್ಥಳಗಳಲ್ಲಿ ಹೆಚ್ಚಿನವು ದೊಡ್ಡ ಪರದೆ ಹೊಂದಿದ್ದು, ಐಪಿಎಲ್ ವಿಷಯಾಧಾರಿತ ವಿವಿಧ ಬಗೆಯ ಮೆನುಗಳು, ಆಹಾರ ಮತ್ತು ಪಾನೀಯಗಳು ಇರುತ್ತವೆ. ಹರ್ಷೋದ್ಗಾರ, ಘೋಷಣೆಗಳೊಂದಿಗೆ ಇಲ್ಲಿ ಅಭಿಮಾನಿಗಳು ಎಂಜಾಯ್ ಮಾಡಬಹುದಾಗಿದೆ.
ಫೈನಲ್ ಹಿನ್ನೆಲೆಯಲ್ಲಿ ಈ ಸ್ಥಳಗಳೆಲ್ಲಾ ಈಗಾಗಲೇ ಭರ್ತಿಯಾಗಿವೆ. ಮೆಟ್ರೋ, ಬಿಎಂಟಿಸಿ ಬಸ್ ಗಳು ಮತ್ತು ಕ್ಯಾಬ್ ಸೇವೆಗಳು ಸುಲಭವಾಗಿ ದೊರೆಯುವಂತಹ ಕಡೆಗಳಲ್ಲಿ ಈ ವ್ಯವಸ್ಥೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.