ರವಿಶಾಸ್ತ್ರಿ - ವಿರಾಟ್ ಕೊಹ್ಲಿ 
ಕ್ರಿಕೆಟ್

'ವಿರಾಟ್ ಕೊಹ್ಲಿ ನಿವೃತ್ತಿಯನ್ನು ತಡಮಾಡಬಹುದಿತ್ತು'; BCCI ವಿರುದ್ಧ ರವಿಶಾಸ್ತ್ರಿ ಕಿಡಿ

ನನಗೆ ಇದರಲ್ಲಿ ಏನಾದರೂ ಸಂಬಂಧವಿದ್ದಿದ್ದರೆ, ಆಸ್ಟ್ರೇಲಿಯಾ ಪ್ರವಾಸದ ನಂತರ ಅವರನ್ನು ನೇರವಾಗಿ ನಾಯಕನನ್ನಾಗಿ ಮಾಡುತ್ತಿದ್ದೆ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ನಿಖರವಾಗಿ ಒಂದು ತಿಂಗಳು ಕಳೆದಿದೆ. ಭಾರತ vs ಇಂಗ್ಲೆಂಡ್ ಸರಣಿ ಹತ್ತಿರವಾಗುತ್ತಿದ್ದಂತೆ, ಕೊಹ್ಲಿ ಮತ್ತು ಅವರ ಅನುಪಸ್ಥಿತಿಯ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಟೀಂ ಇಂಡಿಯಾದ ಮುಖ್ಯ ಕೋಚ್ ಮತ್ತು ಕೊಹ್ಲಿ ಅವರ ಆಪ್ತ ರವಿಶಾಸ್ತ್ರಿ, ಈ ಸ್ಟಾರ್ ಬ್ಯಾಟರ್ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇರಬೇಕಿತ್ತು ಎಂದು ಹೇಳಿದ್ದಾರೆ.

'ಭಾರತ ಮಾತ್ರವಲ್ಲ, ಟೆಸ್ಟ್ ಕ್ರಿಕೆಟ್‌ನ ಬೆಂಬಲಿಗರಾದ ಇಡೀ ಕ್ರಿಕೆಟ್ ಸಮುದಾಯವೇ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂಬುದು ನನಗೆ ಗೊತ್ತು. ಆದರೆ, ಇದನ್ನೆಲ್ಲ ಮೊದಲೇ ತಪ್ಪಿಸಬಹುದಿತ್ತು. ಕೊಹ್ಲಿ ನಿವೃತ್ತಿಯ ಬಗ್ಗೆ ಸಂತೋಷವಿಲ್ಲ. ಇದೆಲ್ಲ ಹೇಗೆ ನಡೆಯಿತು. ಅವರು ಅದರ ಬಗ್ಗೆ ಹೆಚ್ಚು ವಿವರಿಸದಿದ್ದರೂ, ಸಾಮಾನ್ಯ ಜನರಿಗೆ ತಿಳಿದಿಲ್ಲದ ಒಂದು ವಿಷಯ ಅವರಿಗೆ ತಿಳಿದಿದೆ ಎಂಬುದು ಸ್ಪಷ್ಟ' ಎಂದರು.

'ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು. ಕೊಹ್ಲಿ ಮತ್ತು ಮಂಡಳಿಯ ನಡುವೆ ಮಾತುಕತೆಯ ಕೊರತೆ ಇತ್ತು. ತಮ್ಮ ನಿರ್ಧಾರವನ್ನು ಘೋಷಿಸುವ ಒಂದು ತಿಂಗಳ ಮೊದಲು ನಿವೃತ್ತಿ ನಿರ್ಧಾರದ ಬಗ್ಗೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರೊಂದಿಗೆ ಸ್ಟಾರ್ ಬ್ಯಾಟ್ಸ್‌ಮನ್ ಮಾತನಾಡಿದ್ದರು ಮತ್ತು ಅಗರ್ಕರ್ ತಮ್ಮ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ಕೊಹ್ಲಿ ನಿವೃತ್ತಿ ಘೋಷಿಸಿದರು' ಎಂದಿದ್ದಾರೆ.

'ನೀವು ನಿವೃತ್ತರಾದಾಗ, ನೀವು ಎಷ್ಟು ದೊಡ್ಡ ಆಟಗಾರ ಎಂಬುದು ಜನರಿಗೆ ಅರಿವಾಗುತ್ತದೆ. ಅವರು ಹೋಗಿದ್ದಾರೆ ಎನ್ನುವುದು ಮತ್ತು ಹೋದ ರೀತಿಯಿಂದಾಗಿ ನನಗೆ ಬೇಸರವಾಗುತ್ತದೆ. ಅದನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ಮಾತುಕತೆ ಇರಬೇಕಿತ್ತು' ಎಂದು ಶಾಸ್ತ್ರಿ ಸೋನಿಲೈವ್‌ಗೆ ತಿಳಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನದ ನಂತರ, ವಿರಾಟ್ ಕೊಹ್ಲಿ ಅವರನ್ನು ಭಾರತದ ಟೆಸ್ಟ್ ತಂಡದ ನಾಯಕನನ್ನಾಗಿ ನೇಮಿಸಬೇಕಾಗಿತ್ತು. ಕೊಹ್ಲಿ ಟೆಸ್ಟ್ ಕ್ರಿಕೆಟ್‌ ಅನ್ನು ಮುನ್ನಡೆಸುತ್ತಿದ್ದಾಗ ಅವರು ಎಷ್ಟು ಚೆನ್ನಾಗಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದು ಕೊಹ್ಲಿಯಿಂದ ಅತ್ಯುತ್ತಮವಾದದ್ದನ್ನು ಹೊರತರುತ್ತಿತ್ತು ಮತ್ತು ಅವರು ಭಾರತದ ಇಂಗ್ಲೆಂಡ್ ಪ್ರವಾಸದ ಭಾಗವಾಗಿರುತ್ತಿದ್ದರು' ಎಂದು ತಿಳಿಸಿದರು.

ನನಗೆ ಇದರಲ್ಲಿ ಏನಾದರೂ ಸಂಬಂಧವಿದ್ದರೆ, ಆಸ್ಟ್ರೇಲಿಯಾ ಪ್ರವಾಸದ ನಂತರ ಅವರನ್ನು ನೇರವಾಗಿ ನಾಯಕನನ್ನಾಗಿ ಮಾಡುತ್ತಿದ್ದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT