ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಗೆದ್ದ ತಂಡದ ನಾಯಕನಿಗೆ ಪಟೌಡಿ ಹೆಸರಿನಲ್ಲಿ ಪದಕ ಸ್ವೀಕರಿಸಲಿದ್ದಾರೆ. ಐದು ಪಂದ್ಯಗಳ ಸರಣಿ ಟೆಸ್ಟ್ ಸರಣಿಗೆ ಪಟೌಡಿ ಟ್ರೋಫಿ ಹೆಸರು ಕೈಬಿಟ್ಟು,ತೆಂಡೂಲ್ಕರ್-ಅ್ಯಂಡರ್ಸನ್ ಎಂದು ಹೆಸರಿಡಲು ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಈ ಬೆಳವಣಿಗೆಯಾಗಿದೆ.
ಶ್ರೇಷ್ಟ ಟೆಸ್ಟ್ ಕ್ರಿಕೆಟಿಗರಾದ ತೆಂಡೂಲ್ಕರ್-ಅ್ಯಂಡರ್ಸನ್ ಅವರ ಗೌರವಾರ್ಥವಾಗಿ ಈ ಸರಣಿಗೆ ಅವರ ಹೆಸರಿಡಲು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಆದರೆ ಪಟೌಡಿ ಹೆಸರನ್ನು ತೆಗೆದು ಹಾಕುವುದಕ್ಕೆ ವಿರೋಧ ವ್ಯಕ್ತವಾದ ನಂತರ ವೈಯಕ್ತಿಕವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಭೇಟಿಯಾದ ಸಚಿನ್ ತೆಂಡೊಲ್ಕರ್ , ಪಟೌಡಿ ಪರಂಪರೆಯನ್ನು ಮುಂದುವರೆಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಐಸಿಸಿ ಮುಖ್ಯಸ್ಥ ಜಯ್ ಶಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟೌಡಿ ಕುಟುಂಬ ಮತ್ತು ಎರಡು ಕ್ರಿಕೆಟ್ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪದಕವನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ- ಇಂಗ್ಲೆಂಡ್ ಸರಣಿಯಲ್ಲಿ ಪಟೌಡಿ ಹೆಸರನ್ನು ಮುಂದುವರೆಸುವಂತೆ ಸಚಿನ್ ತೆಂಡೊಲ್ಕರ್ ಮನವಿಯನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಒಪ್ಪಿದ್ದು, ಟ್ರೋಫಿ ಗೆದ್ದ ನಾಯಕನಿಗೆ ಪಟೌಡಿ ಹೆಸರಿನಲ್ಲಿ ಪದಕ ವಿತರಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಸರಣಿ ಸಮಾರೋಪದಲ್ಲಿ ಪಟೌಡಿ ಪದಕ ವಿತರಿಸಲಾಗುತ್ತದೆ.