ವಿರಾಟ್ ಕೊಹ್ಲಿ - ಕೆಎಲ್ ರಾಹುಲ್ 
ಕ್ರಿಕೆಟ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲದ ಡ್ರೆಸ್ಸಿಂಗ್ ರೂಂಗೆ ಹೋಗುವುದು ಸ್ವಲ್ಪ ವಿಚಿತ್ರವೆನಿಸುತ್ತದೆ: ಕೆಎಲ್ ರಾಹುಲ್

ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದರು.

ಶುಕ್ರವಾರದಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಣಸಾಡಲಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ಇದು ಯುವ ಆಟಗಾರರಿಗೆ ತಂಡವನ್ನು ಮುಂದೆ ನಡೆಸಲು ಸಿಗುವ ಉತ್ತಮ ಅವಕಾಶವಾಗಿದೆ ಎಂದು ಭಾರತದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದರು. 36 ವರ್ಷದ ಕೊಹ್ಲಿ 123 ಟೆಸ್ಟ್‌ಗಳಲ್ಲಿ 9,230 ರನ್ ಗಳಿಸಿದ್ದಾರೆ ಮತ್ತು ಈ ದೀರ್ಘ ಸ್ವರೂಪದಲ್ಲಿ ಭಾರತದ ಸಾರ್ವಕಾಲಿಕ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

'ಕಳೆದೊಂದು ದಶಕದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್‌ನ ಆಧಾರಸ್ತಂಭಗಳಾಗಿದ್ದರು. ಅವರಿಬ್ಬರ ಅನುಪಸ್ಥಿತಿಯು ಮೈದಾನದ ಒಳಗೆ ಮತ್ತು ಹೊರಗೆ ಆಳವಾಗಿ ಅನುಭವಕ್ಕೆ ಬರುತ್ತದೆ. ತಮ್ಮ ವೃತ್ತಿಜೀವನದುದ್ದಕ್ಕೂ, ಈ ಇಬ್ಬರು ಐಕಾನ್‌ಗಳಲ್ಲಿ ಕನಿಷ್ಠ ಒಬ್ಬರೊಂದಿಗೆ ನಾನು ಯಾವಾಗಲೂ ಆಡಿದ್ದೇನೆ. ಇದು ಗಮನಾರ್ಹ ಮತ್ತು ಅಪರಿಚಿತ ಬದಲಾವಣೆಯಾಗಿದೆ' ಎಂದು ಹೇಳಿದರು.

'ನಾನು ಆಡಿರುವ 50 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಅಥವಾ ರೋಹಿತ್ ಅಥವಾ ಇಬ್ಬರೂ ತಂಡದಲ್ಲಿ ಇದ್ದರು. ಆ ಡ್ರೆಸ್ಸಿಂಗ್ ರೂಂಗೆ ಹೋಗುವುದು ಸ್ವಲ್ಪ ವಿಚಿತ್ರವೆನಿಸುತ್ತದೆ. ಆದರೆ, ನೀವು ಅವರ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ' ಎಂದರು.

'ಅವರು ದೇಶಕ್ಕಾಗಿ ಎಲ್ಲವನ್ನೂ ನೀಡಿದ್ದಾರೆ ಮತ್ತು ಅವರು ಭಾರತೀಯ ಕ್ರಿಕೆಟ್‌ನ ದಂತಕಥೆಗಳಾಗಿ ಉಳಿಯುತ್ತಾರೆ. ಆದರೆ, ಇದೀಗ ಯುವ ಆಟಗಾರರು ಮುಂದಕ್ಕೆ ಬರಬೇಕಾದ ಸಮಯ ಬಂದಿದೆ' ಎಂದು ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಮಾಧ್ಯಮ ತಂಡಕ್ಕೆ ತಿಳಿಸಿದರು.

ಎಂಟು ವರ್ಷಗಳ ನಂತರ ಭಾರತ ತಂಡಕ್ಕೆ ಮರಳುತ್ತಿರುವ ತಮ್ಮ ಸಹ ಆಟಗಾರ ಕರುಣ್ ನಾಯರ್ ಕುರಿತು ರಾಹುಲ್ ಮಾತನಾಡಿದರು ಮತ್ತು ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಕರುಣ್ ನಾಯರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಕ್ಯಾಂಟರ್ಬರಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025ರ ಆವೃತ್ತಿಯಲ್ಲಿ, ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ ಎಂಟು ಪಂದ್ಯಗಳಲ್ಲಿ ಅರ್ಧಶತಕ ಸೇರಿದಂತೆ 198 ರನ್‌ಗಳನ್ನು ಗಳಿಸಿದ್ದಾರೆ.

33 ವರ್ಷದ ಅವರು 2016 ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು ಚೆನ್ನೈನಲ್ಲಿ ನಡೆದ ತಮ್ಮ ಮೂರನೇ ಟೆಸ್ಟ್‌ನಲ್ಲಿ ಅಜೇಯ 303 ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಆದಾಗ್ಯೂ, ಆ ಐತಿಹಾಸಿಕ ಬ್ಯಾಟಿಂಗ್ ನಂತರ ಅವರು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದರು. ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು.

ಐಪಿಎಲ್ 2025ರ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್, 11 ವರ್ಷದ ಬಾಲಕರಾಗಿದ್ದಾಗ ಮತ್ತು ಕರುಣ್ ನಾಯರ್ ಜೊತೆಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ದಿನಗಳನ್ನು ನೆನಪಿಸಿಕೊಂಡರು.

'ನಾವು 11 ವರ್ಷದ ಬಾಲಕರಾಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದೆವು ಮತ್ತು ಅಂದಿನಿಂದ ಈ ಪ್ರಯಾಣದಲ್ಲಿದ್ದೇವೆ. ನಾವಿಬ್ಬರೂ ನಮ್ಮದೇ ಆದ ಏರಿಳಿತಗಳನ್ನು ಕಂಡಿದ್ದೇವೆ. ಅವರಿಗೆ ಅವಕಾಶ ಸಿಕ್ಕಿತು. ತ್ರಿಶತಕ ಗಳಿಸಿದರು. ಅದರ ನಂತರವೂ ಹಲವು ಕಾರಣಗಳಿಂದ ಸ್ವಲ್ಪ ಕಠಿಣ ಸಮಯವನ್ನು ಎದುರಿಸಿದರು. ಆದರೆ, ಕಳೆದ 2-3 ವರ್ಷಗಳಲ್ಲಿ ಅವರು ಪ್ರದರ್ಶಿಸಿದ ರೀತಿ ಎದ್ದು ಕಾಣುತ್ತದೆ' ಎಂದು ರಾಹುಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಸಂಪುಟ ಅನುಮೋದನೆ; ಎರಡು ವರ್ಷದಲ್ಲಿ ಪೂರ್ಣ

ರಷ್ಯಾ ತೈಲ ಖರೀದಿ ವಿಷಯವಾಗಿ ಮೋದಿ ಟ್ರಂಪ್ ಜೊತೆ ಮಾತಾಡೇ ಇಲ್ಲ- EAM

Gujarat: ಒಂದು ಕಾಲದ ಬಿಜೆಪಿ ವಿರೋಧಿಗಳಿಗೆ ಒಲಿದ ಸಚಿವ ಸ್ಥಾನ?: ನೂತನ ಸಂಪುಟದಲ್ಲಿ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್!

ಅಕ್ರಮ ಗಣಿಗಾರಿಕೆ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ!

KPCC ಯಲ್ಲಿ ಕೆಲಸದಲ್ಲಿರುವುದಾಗಿ ನಂಬಿಸಿ ಮಹಿಳೆಯರ ಜೊತೆ ರಾಸಲೀಲೆ: ಗಂಡನ S**X ವಿಡಿಯೋ ನೋಡಿ ದಂಗಾದ ಪತ್ನಿ!

SCROLL FOR NEXT