ಹರ್ಭಜನ್ ಸಿಂಗ್ ಮತ್ತು ಯೋಗರಾಜ್ ಸಿಂಗ್ 
ಕ್ರಿಕೆಟ್

Rohit Sharma ಫಿಟ್ನೆಸ್ ಬಗ್ಗೆ ಪ್ರಶ್ನೆ: 'ಯಾರಿಗೂ ಅಧಿಕಾರವಿಲ್ಲ' ಎಂದ Harbhajan Singh; 'ದೇಶ ಬಿಟ್ಟು ತೊಲಗು' ಎಂದ Yograj Singh

ಫಿಟ್ನೆಸ್ ಕುರಿತು ಮಾತನಾಡಲು ನೀವು ಯಾರು..? ಫಿಟ್ನೆಸ್ ತರಬೇತುದಾರರೇ? ಬಿಸಿಸಿಐ ಅಧ್ಯಕ್ಷರೇ? ಅಥವಾ ಅವರು ಫಿಟ್ನೆಸ್ ಬಗ್ಗೆ ತಿಳಿದುಕೊಳ್ಳಲು ಯಾವುದೇ ಕ್ರೀಡೆಗೆ ಸಂಬಂಧಿಸಿದ್ದೀರಾ?..

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಕುರಿತು ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕಿ ಶಮಾ ಮಹಮದ್ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ಹರಿದು ಬರುತ್ತಿದ್ದು, ಇದೀಗ ಈ ಪಟ್ಟಿಗೆ ಮಾಜಿ ಕ್ರಿಕೆಟಿಗೆ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಸೇರ್ಪಡೆಯಾಗಿದ್ದಾರೆ.

ಶಮಾ ಮಹಮದ್ ಹೇಳಿಕೆಗೆ ವಿಡಿಯೋ ಮೂಲಕ ಉತ್ತರ ನೀಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, 'ರೋಹಿತ್ ಶರ್ಮಾ ಬಗ್ಗೆ ಏನೇ ಹೇಳಿದ್ದರೂ - ಅವರು ದೇಶಕ್ಕೆ ತುಂಬಾ ಸೇವೆ ಸಲ್ಲಿಸಿದ ಆಟಗಾರ. ಅವರು ಇನ್ನೂ ತಂಡವನ್ನು ಚೆನ್ನಾಗಿ ಮುನ್ನಡೆಸುತ್ತಿದ್ದಾರೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ... ಅವರ ಫಿಟ್ನೆಸ್ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಅವರ ಫಿಟ್ನೆಸ್ ಚೆನ್ನಾಗಿಲ್ಲದಿದ್ದರೆ, ಅವರು ತಂಡದ ಭಾಗವಾಗಿರುತ್ತಿರಲಿಲ್ಲ, ಆದರೆ ಅವರು ತಂಡದಲ್ಲಿದ್ದಾರೆ ಅದು ಕೂಡ ನಾಯಕನಾಗಿ. ತಂಡಕ್ಕೆ ಬರಲು ನೀವು ಪಾಸ್ ಮಾಡಬೇಕಾದ ಹಲವು ಹಂತದ ಫಿಟ್ನೆಸ್ ಇದೆ. ಅವುಗಳೆಲ್ಲವನ್ನೂ ರೋಹಿತ್ ಪಾಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಅವರ ಫಿಟ್ನೆಸ್ ಕುರಿತು ಮಾತನಾಡಲು ನೀವು ಯಾರು..? ಫಿಟ್ನೆಸ್ ತರಬೇತುದಾರರೇ? ಬಿಸಿಸಿಐ ಅಧ್ಯಕ್ಷರೇ? ಅಥವಾ ಅವರು ಫಿಟ್ನೆಸ್ ಬಗ್ಗೆ ತಿಳಿದುಕೊಳ್ಳಲು ಯಾವುದೇ ಕ್ರೀಡೆಗೆ ಸಂಬಂಧಿಸಿದ್ದೀರಾ? ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಅವರು ರೋಹಿತ್ ಶರ್ಮಾ ರನ್ನು ಇನ್ನೂ ತಂಡದಲ್ಲಿರುವ ಇತರೆ ಆಟಗಾರನೊಂದಿಗೆ ಹೋಲಿಸುತ್ತಿದ್ದಾರೆ. ಅವರಿಗೆ ಫಿಟ್ನೆಸ್‌ನ ನಿಯತಾಂಕಗಳು ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಸತ್ಯಗಳನ್ನು ತಿಳಿಯದೆ, ಯಾರೂ ಮಾತನಾಡಬಾರದು ಎಂದು ನಾನು ಭಾವಿಸುತ್ತೇನೆ... ನಾವು ರೋಹಿತ್ ಶರ್ಮಾ ಅವರ ಕೊಡುಗೆಗಳ ಕಡೆಗೆ ನೋಡಬೇಕು ಎಂದು ಭಜ್ಜಿ ಖಡಕ್ ತಿರುಗೇಟು ನೀಡಿದ್ದಾರೆ.

'ದೇಶ ಬಿಟ್ಟು ತೊಲಗು' ಎಂದ Yograj Singh

ಅಂತೆಯೇ ಇದೇ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, 'ನಾನೇದರೂ ಭಾರತದ ಪ್ರಧಾನಿಯಾಗಿದಿದ್ದರೆ, ಆಕೆಯನ್ನು ದೇಶ ಬಿಟ್ಟು ತೊಲಗುವಂತೆ ಹೇಳುತ್ತಿದ್ದೆ ಎಂದು ಕಿಡಿಕಾರಿದ್ದಾರೆ.

'ನಾನು ಒಂದೇ ಒಂದು ವಿಷಯ ಹೇಳಲು ಬಯಸುತ್ತೇನೆ, ಜಿಸ್ಕ ಕಾಮ್ ಉಸೇ ಕೋ ಸಾಜೆ ಔರ್ ಕರೇ ತೋ ದಂಡ ಬಾಜೆ (ಈ ಕೆಲಸ ಯಾರಿಗೆ ಸೇರಿದೆಯೋ ಅವರಿಗೆ ಮಾತ್ರ ಸರಿಹೊಂದುತ್ತದೆ; ಬೇರೆ ಯಾರಾದರೂ ಮಾಡಿದರೆ ಅದು ಹಾಳಾಗುತ್ತದೆ). ಭಾರತೀಯ ಕ್ರಿಕೆಟಿಗರು, ಜನರು ಮತ್ತು ಭೂಮಿ ನನಗೆ ನನ್ನ ಸ್ವಂತ ಜೀವನಕ್ಕಿಂತ ಹೆಚ್ಚು ಪ್ರಿಯ. ರಾಜಕೀಯ ವ್ಯವಸ್ಥೆಯಲ್ಲಿ ಯಾರಾದರೂ ನಮ್ಮ ರಾಷ್ಟ್ರಕ್ಕೆ ಹೆಮ್ಮೆ ತಂದ ಆಟಗಾರನ ಬಗ್ಗೆ ಅಂತಹ ಹೇಳಿಕೆ ನೀಡಿದರೆ, ಆ ವ್ಯಕ್ತಿ ನಾಚಿಕೆಪಡಬೇಕು. ಅಂತಹ ವ್ಯಕ್ತಿಗೆ ನಮ್ಮ ರಾಷ್ಟ್ರದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ. ಕ್ರಿಕೆಟ್ ನಮ್ಮ ಧರ್ಮ ಎಂದು ಹೇಳಿದ್ದಾರೆ.

ಅಂತೆಯೇ ನಾವು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತಾಗ ರೋಹಿತ್ ಮತ್ತು ವಿರಾಟ್ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಆದರೆ ನಾವು ಅವರ ಪರವಾಗಿ ನಿಂತಿದ್ದೇವೆ. ನನಗೆ ತುಂಬಾ ದುಃಖವಾಗುತ್ತಿದೆ. ಪಾಕಿಸ್ತಾನದಲ್ಲಿ ಇಂತಹ ವಿಷಯಗಳು ನಡೆಯುತ್ತವೆ. ಅವರ ಮಾಜಿ ಸ್ಟಾರ್ ಆಟಗಾರ, 'ಯಾರು ಇಷ್ಟೊಂದು ಬಾಳೆಹಣ್ಣು ತಿನ್ನುತ್ತಾರೆ?' ಎಂದು ಕೇಳಿದರು (ವಾಸಿಂ ಅಕ್ರಮ್ ಅವರನ್ನು ಟೀಕಿಸುತ್ತಾ). ಈಗ ಭಾರತದಲ್ಲೂ ಇಂತಹ ಕ್ಷುಲ್ಲಕ ಹೇಳಿಕಗಳು ಬರುತ್ತಿವೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ಸಹಿಸಬಾರದು. ನಾನು ಪ್ರಧಾನಿಯಾಗಿದ್ದರೆ, ಖಂಡಿತಾ ಅವರನ್ನು ದೇಶ ಬಿಟ್ಟು ಹೋಗುವಂತೆ ಹೇಳುತ್ತಿದ್ದೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಏನು ಹೇಳಿದ್ದರು?

ಸಂಜೆ ವೇಳೆ ಟ್ವೀಟ್ ಮಾಡಿದ್ದ ಶಮಾ ಮಹಮದ್, 'ಕ್ರೀಡಾಪಟುವಾಗಿ ರೋಹಿತ್ ಶರ್ಮಾ ದಪ್ಪಗಿದ್ದಾರೆ, ತೂಕ ಇಳಿಸಿಕೊಳ್ಳಬೇಕು. ಮತ್ತು ಖಂಡಿತವಾಗಿಯೂ, ಭಾರತ ಕಂಡ ಅತ್ಯಂತ ಕಳಪೆ ನಾಯಕ ಇವರೇ ಎಂದು ಮೊಹಮ್ಮದ್ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, “ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಮತ್ತು ಉಳಿದವರಿಗೆ ಹೋಲಿಸಿದರೆ ಅವರಲ್ಲಿ ಜಗತ್ತಿಗೆ ಮಾದರಿಯಾಗುವಂತಹದ್ದೇನಿದೆ? ಅವರು ಸಾಧಾರಣ ಆಟಗಾರರಾಗಿದ್ದು, ಭಾರತದ ನಾಯಕರಾಗಲು ಅದೃಷ್ಟವಿತ್ತು ಅಷ್ಟೇ” ಎಂದು ಹೇಳಿದ್ದಾರೆ.

ವ್ಯಾಪಕ ಆಕ್ರೋಶ

ಶಮಾ ಮಹಮದ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತು ಟೀಕೆ ಮಾಡಿರುವ ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ, ‘ಕಾಂಗ್ರೆಸ್‌ಗೆ ಇದು ಅವಮಾನದ ಸಂಗತಿಯಾಗಿದೆ. ಎಲ್ಲವನ್ನೂ ಬಿಟ್ಟು ಈಗ ಭಾರತೀಯ ಕ್ರಿಕೆಟ್‌ ತಂಡದ ನಾಯಕನ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾದರೆ ರಾಜಕೀಯದಲ್ಲಿ ವಿಫಲವಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಕ್ರಿಕೆಟ್‌ ಆಡುತ್ತಾರೆ ಎಂದು ಅವರು ನಿರೀಕ್ಷಿಸುತ್ತಾರೆಯೇ?’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಶೆಹಜಾದ್ ಪೂನಾವಾಲಾ ಕೂಡ ಇದನ್ನು ಟೀಕಿಸಿದ್ದು, 'ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 90 ಚುನಾವಣೆಗಳನ್ನು ಸೋತವರು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಕಳಪೆ ಎಂದು ಕರೆಯುತ್ತಿದ್ದಾರೆ! ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT