ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

IPL 2025: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್, Suresh Raina ದಾಖಲೆ ಮುರಿದ MS Dhoni

9ನೇ ಕ್ರಮಾಂಕದಲ್ಲಿ ಬಂದು ವೇಗವಾಗಿ ಬ್ಯಾಟಿಂಗ್ ಮಾಡಿದರಾದರೂ ಅಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು. ಚೆನ್ನೈ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಂತಕಥೆ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ನಿನ್ನೆ ಸಿಎಸ್ ಕೆ ತವರು ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಎಂಎಸ್ ಧೋನಿ 16 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ಅಜೇಯ 30 ರನ್ ಸಿಡಿಸಿದರು.

9ನೇ ಕ್ರಮಾಂಕದಲ್ಲಿ ಬಂದು ವೇಗವಾಗಿ ಬ್ಯಾಟಿಂಗ್ ಮಾಡಿದರಾದರೂ ಅಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು. ಚೆನ್ನೈ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

ಆರ್ ಸಿಬಿ ಬರೊಬ್ಬರಿ 50 ರನ್ ಗಳ ಅಂತರದಲ್ಲಿ ಜಯಭೇರಿ ಭಾರಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ರೈನಾ ದಾಖಲೆ ಮುರಿದ ಧೋನಿ

ಇನ್ನು ಈ ಪಂದ್ಯದಲ್ಲಿ ಅಜೇಯ 30 ರನ್ ಗಳಿಸಿದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತೀ ಹೆಚ್ಚು ರನ್ ಗಳಿಕೆ ಮಾಡಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದದರು. ಚೆಪಾಕ್​ನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು ಕೃನಾಲ್ ಪಾಂಡ್ಯ ಕೊನೆಯ ಓವರ್‌ನಲ್ಲಿ ಸತತ 2 ಸಿಕ್ಸರ್‌ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

43 ವರ್ಷ ವಯಸ್ಸಿನ ಧೋನಿ 2008 ರಿಂದ 2025 ರವರೆಗೆ ಸಿಎಸ್‌ಕೆ ಪರ 236 ಪಂದ್ಯಗಳಲ್ಲಿ 4,699 ರನ್ ಗಳಿಸಿದ್ದಾರೆ. ಆ ಮೂಲಕ ಚೆನ್ನೈ ಪರ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇಷ್ಟು ದಿನ ಈ ಪಟ್ಟಿಯಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇದ್ದರು. ರೈನಾ 2008 ಮತ್ತು 2021 ರ ನಡುವೆ 176 ಪಂದ್ಯಗಳಲ್ಲಿ 4,687 ರನ್ ಗಳಿಸಿದ್ದಾರೆ.

ಉಳಿದಂತೆ ಪಟ್ಟಿಯಲ್ಲಿ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸುತ್ತಿರುವ ಫಾಫ್ ಡು ಪ್ಲೆಸಿಸ್ 2,721 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ 2,433 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

17 ವರ್ಷಗಳ ಬಳಿಕ ಚೆಪಾಕ್ ನಲ್ಲಿ ಸಿಎಸ್ ಕೆ ವಿರುದ್ಧ ಬೆಂಗಳೂರಿಗೆ ಜಯ

ಇನ್ನು ಆರ್‌ಸಿಬಿ ಅಂತಿಮವಾಗಿ ಚೆಪಾಕ್‌ನಲ್ಲಿ 50 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ತಮ್ಮ 17 ವರ್ಷಗಳ ಬಳಿಕ ಚೆನ್ನೈ ವಿರುದ್ಧ ತನ್ನ ಮೊದಲ ಪಂದ್ಯ ಗೆದ್ದು ಬೀಗಿತು.

Most runs for CSK in the IPL
4699 - MS Dhoni (204 inns)*
4687 - Suresh Raina (171 inns)
2721 - Faf du Plessis (86 inns)
2433 - Ruturaj Gaikwad (67 inns)
1939 - Ravindra Jadeja (127 inns)

ಅಗತ್ಯ ಸಂದರ್ಭದಲ್ಲಿ ತಡವಾಗಿ ಕ್ರೀಸ್ ಗೆ ಬಂದ ಧೋನಿ

ಇನ್ನು ಸವಾಲಿನ ರನ್ ಚೇಸ್‌ನ ಹೊರತಾಗಿಯೂ ಮಹೇಂದ್ರ ಸಿಂಗ್ 9ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದಿದ್ದು ಅಭಿಮಾನಿಗಳ ನಿರಾಶೆಗೆ ಕಾರಣವಾಯಿತು. ಸಿಎಸ್‌ಕೆಗೆ ಧೋನಿಯ ಅಪಾರ ಅನುಭವದ ಅಗತ್ಯವಿದ್ದರೂ, ಧೋನಿ ಮಾತ್ರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದು, ಪ್ರಶ್ನೆಯಾಗಿ ಉಳಿದಿದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಸಹ ಧೋನಿಗಿಂತ ಮುಂದೆ ಕಳುಹಿಸಲಾಯಿತು. ಇದರಿಂದ ಸಿಎಸ್ ಕೆ ಅಭಿಮಾನಿಗಳು ನಿರಾಶೆಗೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT