ಚೆನ್ನೈ: ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರಗೆ ಬಿದ್ದಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ಸಲಹೆಗಳು ಹೆಚ್ಚಾಗುತ್ತಿವೆ.
ಮುಂದಿನ IPLಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಬೇಕಾದ ಸಮಯವಿದೆ ಎಂದಿರುವ ಲೆಜೆಂಡರಿ ಆಸ್ಟ್ರೇಲಿಯನ್ ವಿಕೆಟ್‌ಕೀಪರ್-ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್, ಮಹೇಂದ್ರ ಸಿಂಗ್ ಧೋನಿ ಫ್ರಾಂಚೈಸಿಯನ್ನು ತೊರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಧೋನಿ, ಕ್ರಿಕೆಟ್ ಆಟದಲ್ಲಿ ಸಾಬೀತುಪಡಿಸಲು ಬೇರೆನೂ ಇಲ್ಲ. ಅವರು ಎಲ್ಲವನ್ನೂ ಸಾಧಿಸಿದ್ದಾರೆ. ಅವರಿಗೆ ಏನು ಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಆದರೆ ನಾನು ಹೇಳುತ್ತಿದ್ದೇನೆ, ಭವಿಷ್ಯಕ್ಕಾಗಿ ಅವರು ಐಪಿಲ್ ನಲ್ಲಿ ಆಡುವ ಅಗತ್ಯ ಇಲ್ಲ ಎಂದಿದ್ದಾರೆ.
CSKಯ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಮೇಲೆ ಇನ್ನೊಂದು ಬಾರಿಯಾದರೂ ನಂಬಿಕೆ ಇಡಬೇಕೆಂದು ಗಿಲ್ ಕ್ರಿಸ್ಟ್ ಬಾವಿಸಿದ್ದಾರೆ. "ಏನು ಪ್ರತಿಭೆ! ಹೌದು, ವಯಸ್ಸಾಗುತ್ತಿದೆ. ಐಪಿಎಲ್ ಪ್ರಾರಂಭವಾದಾಗ ಶೇನ್ ವಾರ್ನ್ ಹೇಳಿದ್ದಂತೆ ನಾನು ಈಗಲೂ ರಾಕ್‌ಸ್ಟಾರ್‌ನನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.