ರವಿಶಾಸ್ತ್ರಿ 
ಕ್ರಿಕೆಟ್

India vs England Test Series: ಸಾಯಿ ಸುದರ್ಶನ್, ಅರ್ಷದೀಪ್ ಸಿಂಗ್‌ಗೆ ಸ್ಥಾನ; ಶ್ರೇಯಸ್ ಅಯ್ಯರ್‌ ಸೇರ್ಪಡೆ ಅನುಮಾನ- ರವಿಶಾಸ್ತ್ರಿ

ಸಾಯಿ ಸುದರ್ಶನ್ ಅವರು ಎಲ್ಲ ಮಾದರಿಗೆ ಸೂಕ್ತವಾಗುವ ಆಟಗಾರ. ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಸೇರ್ಪಡೆ ಮಾಡುವುದರಿಂದ ತಂಡಕ್ಕೆ ಒಳಿತಾಗಲಿದೆ. ತಮಿಳುನಾಡಿನ ಬ್ಯಾಟರ್ ಎಡಗೈ ಬ್ಯಾಟರ್ ಆಗಿರುವುದರ ಜೊತೆಗೆ ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ ಎಂದರು.

ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಮುಂಬರುವ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಸಾಯಿ ಸುದರ್ಶನ್ ಮತ್ತು ಅರ್ಷದೀಪ್ ಸಿಂಗ್ ಅವರಿಗೆ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಾಯಿ ಸುದರ್ಶನ್ ಈಗಾಗಲೇ ಶಾರ್ಟ್‌ಲಿಸ್ಟ್ ಆಗಿದ್ದಾರೆ ಎಂದು ವರದಿಯಾಗಿದ್ದು, ಅರ್ಷ್‌ದೀಪ್ ಮತ್ತು ಶ್ರೇಯಸ್ ಅವರು ಸ್ಥಾನ ಪಡೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಐಸಿಸಿ ರಿವ್ಯೂನಲ್ಲಿ ಮಾತನಾಡಿದ ಶಾಸ್ತ್ರಿ, ಸಾಯಿ ಸುದರ್ಶನ್ ಅವರು ಎಲ್ಲ ಮಾದರಿಗೆ ಸೂಕ್ತವಾಗುವ ಆಟಗಾರ. ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಸೇರ್ಪಡೆ ಮಾಡುವುದರಿಂದ ತಂಡಕ್ಕೆ ಒಳಿತಾಗಲಿದೆ. ತಮಿಳುನಾಡಿನ ಬ್ಯಾಟರ್ ಎಡಗೈ ಬ್ಯಾಟರ್ ಆಗಿರುವುದರ ಜೊತೆಗೆ ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ ಎಂದರು.

'ಎಡಗೈ ಆಟಗಾರನಾಗಿ ಇಂಗ್ಲಿಷ್ ಪರಿಸ್ಥಿತಿಗಳನ್ನು ತಿಳಿದಿರುವುದು ಮತ್ತು ಅವರ ತಂತ್ರ, ಅವರು ಆಡುವ ರೀತಿಯಿಂದಾಗಿ ಅವರು ಇಂಗ್ಲೆಂಡ್‌ನಲ್ಲಿನ ಸರಣಿಯಲ್ಲಿ ಟೀಂ ಇಂಡಿಯಾದ ಪರ ನನ್ನ ಪ್ರಕಾರ ಸಾಯಿ ಸುದರ್ಶನ್ ಅಗ್ರಸ್ಥಾನದಲ್ಲಿರುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಶಾಸ್ತ್ರಿ ಹೇಳಿದರು.

ಸುದರ್ಶನ್ ದೇಶೀಯ ಕ್ರಿಕೆಟ್ ಮತ್ತು IPL 2025 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 29 ಪ್ರಥಮ ದರ್ಜೆ ಪಂದ್ಯಗಳಿಂದ 39.93 ಸರಾಸರಿಯಲ್ಲಿ 1,957 ರನ್ ಗಳಿಸಿದ್ದಾರೆ. ಐಪಿಎಲ್ 2025 ರಲ್ಲಿ, ಅವರು ಈಗಾಗಲೇ 9 ಪಂದ್ಯಗಳಿಂದ 456 ರನ್ ಗಳಿಸಿದ್ದಾರೆ ಮತ್ತು ಸರಾಸರಿ 50.66 ಆಗಿದೆ. ಅವರು ಈ ಹಿಂದೆ ಕೌಂಟಿ ಚಾಂಪಿಯನ್‌ಶಿಪ್‌ಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ತಂಡಕ್ಕೆ ಆಯ್ಕೆಯಾದರೆ ಭಾರತಕ್ಕೆ ಎಕ್ಸ್-ಫ್ಯಾಕ್ಟರ್ ಎಂದು ಸಾಬೀತುಪಡಿಸಬಹುದು.

ಎಡಗೈ ವೇಗಿಯಾಗಿರುವುದರಿಂದ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಪಂಜಾಬ್ ಬೌಲರ್ ವೈಟ್-ಬಾಲ್ ಫಾರ್ಮ್ಯಾಟ್‌ನಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ, ಇನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡಿಲ್ಲ. ಇವರೊಂದಿಗೆ ಖಲೀಲ್ ಅಹ್ಮದ್ ಕೂಡ ಉತ್ತಮ ಆಯ್ಕೆಯಾಗಿದ್ದಾರೆ ಎಂದರು.

'ನೀವು ಆಟಗಾರರನ್ನು ಆಯ್ಕೆಮಾಡುವಾಗ, ನೀವು ಪ್ರತಿಯೊಬ್ಬರನ್ನು ಪರಿಗಣಿಸಬೇಕು. ಕೇವಲ ಒಂದು ಸ್ವರೂಪವನ್ನು ಆಡುವ ಖ್ಯಾತಿಯನ್ನು ಹೊಂದಿರುವವರು. ಮುಖ್ಯವಾಗಿ ವೈಟ್-ಬಾಲ್ ಕ್ರಿಕೆಟ್‌ಗೆ ಹೆಸರುವಾಸಿಯಾದ ಯಾರಾದರೂ ಸಹ ಸರಿಯಾದ ಆಯ್ಕೆಯಾಗಿರಬಹುದು. ಅರ್ಷದೀಪ್ ಸಿಂಗ್ ಅವರಂತಹವರನ್ನು ಕೇವಲ ವೈಟ್-ಬಾಲ್ ಸ್ಪೆಷಲಿಸ್ಟ್' ಎಂದು ಹೇಳುವುದು ಸರಿಯಲ್ಲ. ನನಗೆ ಇಷ್ಟವಾಗುವುದಿಲ್ಲ. ನಿಮಗೆ ಎಡಗೈ ಆಟಗಾರ ಬೇಕು. ಅದು ಯಾರೇ ಆಗಿರಲಿ, ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರನ್ನು ಆರಿಸಿ. ಖಲೀಲ್ ಅಹ್ಮದ್ ಕೂಡ ಇದ್ದಾರೆ. ಅವರ ಲಯ ಚೆನ್ನಾಗಿದೆ, ಅವರು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ' ಎಂದು ಹೇಳಿದರು.

'ಅವರು (ಶ್ರೇಯಸ್ ಅಯ್ಯರ್) ಕಂಬ್ಯಾಕ್ ಮಾಡಬಹುದು. ಆದರೆ, ಇದು ಮತ್ತೆ ಸ್ಪರ್ಧೆಯಾಗಲಿದೆ. ನಾವು ಇತರ ಆಟಗಾರರು ಯಾರೆಂದು ಕಾದು ನೋಡಬೇಕಾಗಿದೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

SCROLL FOR NEXT