ರಿಯಾನ್ ಪರಾಗ್ 
ಕ್ರಿಕೆಟ್

IPL 2025: ಅಬ್ಬಾಬ್ಬ... ಏನ್ ಆಟ! ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್, Elite list ಸೇರಿದ ರಿಯಾನ್!

ಇಂಗ್ಲೆಂಡ್ ನ ಮಾಜಿ ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಅಬ್ಬರಿಸಿದರು.

ಕೋಲ್ಕತ್ತಾ: ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆಯುತ್ತಿರುವ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಒಂದೇ ಓವರ್ ನಲ್ಲಿ ಬ್ಯಾಕ್ ಟು ಬ್ಯಾಕ್ 6 ಸಿಕ್ಸರ್ ಬಾರಿಸಿದರು. ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಸಾಧನೆಯೂ ಸೇರಿದ್ದು, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರಿದ್ದಾರೆ.

ಇಂಗ್ಲೆಂಡ್ ನ ಮಾಜಿ ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಐದು ಮಂದಿ ಬ್ಯಾಟರ್ ಗಳು ಮಾತ್ರ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿದ್ದಾರೆ.

ಐದು ಸಿಕ್ಸರ್ ಗಳಿಸಿದ ಬ್ಯಾಟರ್ ಗಳ ಎಲೈಟ್ ಪಟ್ಟಿ:

* 2012ರಲ್ಲಿ ಆರ್ ಸಿಬಿಯ ಕ್ರಿಸ್ ಗೇಲ್ ರಾಹುಲ್ ಶರ್ಮಾ ವಿರುದ್ಧ ಐದು ಸಿಕ್ಸರ್ ಬಾರಿಸಿದ್ದರು.

* 2020 ರಲ್ಲಿ ರಾಹುಲ್ ತೆವಾಟಿಯಾ ಕಾಟ್ರೆಲ್ ವಿರುದ್ಧ ಐದು ಸಿಕ್ಸರ್ ಸಿಡಿಸಿದ್ದರು

* 2021 ರಲ್ಲಿ ರವೀಂದ್ರ ಜಡೇಜ , ಹರ್ಷಲ್ ಪಟೇಲ್ ವಿರುದ್ಧ ಒಂದೇ ಓವರ್ ನಲ್ಲಿ ಐದು ಸಿಕ್ಸರ್ ಬಾರಿಸಿದ್ದರು.

* 2023 ರಲ್ಲಿ ರಿಂಕು ಸಿಂಗ್, ಯಶ್ ದಯಾಳ್ ವಿರುದ್ಧ ಈ ಸಾಧನೆ ಮಾಡಿದ್ದರು.

* 2025 ರಿಯಾನ್ ಪರಾಗ್, ಮೊಯಿನ್ ಆಲಿ ವಿರುದ್ಧ ಬ್ಯಾಕ್ ಟು ಬ್ಯಾಟ್ ಸಿಕ್ಸರ್ ಹೊಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!