ರಿಷಬ್ ಪಂತ್ ಔಟ್ ಮತ್ತು ಸಂಜೀವ್ ಗೊಯೆಂಕಾ 
ಕ್ರಿಕೆಟ್

IPL 2025: 'ಬ್ಯಾಟೂ ಹೋಯ್ತು.. ವಿಕೆಟ್ಟೂ ಹೋಯ್ತು..'; Rishabh Pant ಆಟ ನೋಡಿ LSG ಮಾಲೀಕ Sanjiv Goenka ಬೇಸ್ತು, Video

ಬೃಹತ್ ಟಾರ್ಗೆಟ್ ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಿಷಬ್ ಪಂತ್ 17 ಎಸೆತಗಳಲ್ಲಿ 18 ರನ್ ಗಳಿಸಿದ್ದರು. ಈ ಹಂತದಲ್ಲಿ ಅಜ್ಮತುಲ್ಲಾ ಬೌಲಿಂಗ್ ನಲ್ಲಿ ಭಾರಿ ಹೊಡತಕ್ಕೆ ಮುಂದಾದ ರಿಷಬ್ ಪಂತ್, ಸ್ಕ್ವೇರ್ ಲೆಗ್ ನತ್ತ ಚೆಂಡನ್ನು ಭಾರಿಸಿದರು.

ಧರ್ಮಶಾಲಾ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಣಿ ಮುಂದುವರೆದಿದ್ದು, ಈ ನಡುವೆ ತಂಡದ ನಾಯಕ ರಿಷಬ್ ಪಂತ್ (Rishabh Pant) ವಿರುದ್ಧ ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಮತ್ತೆ ಅಸಮಾಧಾನಗೊಂಡ ಬೆಳವಣಿಗೆ ನಡೆದಿದೆ.

ನಿನ್ನೆ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ LSG ತಂಡ 37 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ತಂಡ ಪ್ರಭ್ ಸಿಮ್ರನ್ (91 ರನ್) ನಾಯಕ ಶ್ರೇಯಸ್ ಅಯ್ಯರ್ (45 ರನ್), ಜಾಶ್ ಇಂಗ್ಲಿಸ್ (30 ರನ್) ಮತ್ತು ಶಶಾಂಕ್ ಸಿಂಗ್ ರ ಅಜೇಯ 33 ರನ್ ಗಳ ನೆರವಿನಿಂದ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 236 ರನ್ ಪೇರಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 199 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ರಿಷಬ್ ಪಂತ್ ಪಡೆ 37 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಲಕ್ನೋ ಪರ ಆಯುಶ್ ಬದೋನಿ 74 ರನ್ ಸಿಡಿಸಿದರೆ, ಅಬ್ದುಲ್ ಸಮದ್ 45 ರನ್ ಗಳಿಸಿ ತಂಡಕ್ಕೆ ಆಧಾರವಾದರೂ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲಾಗಲಿಲ್ಲ.

ತಾಳ್ಮೆ ಕಳೆದುಕೊಂಡ ರಿಷಬ್ ಪಂತ್, 'ಬ್ಯಾಟ್ಯೂ ಹೋಯ್ತು.. ವಿಕೆಟ್ಟೂ ಹೋಯ್ತು'

ಬೃಹತ್ ಟಾರ್ಗೆಟ್ ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಿಷಬ್ ಪಂತ್ 17 ಎಸೆತಗಳಲ್ಲಿ 18 ರನ್ ಗಳಿಸಿದ್ದರು. ಈ ಹಂತದಲ್ಲಿ ಅಜ್ಮತುಲ್ಲಾ ಬೌಲಿಂಗ್ ನಲ್ಲಿ ಭಾರಿ ಹೊಡತಕ್ಕೆ ಮುಂದಾದ ರಿಷಬ್ ಪಂತ್, ಸ್ಕ್ವೇರ್ ಲೆಗ್ ನತ್ತ ಚೆಂಡನ್ನು ಭಾರಿಸಿದರು.

ಈ ವೇಳೆ ಅವರ ಕೈಯಲ್ಲಿದ್ದ ಬ್ಯಾಟ್ ಸ್ಲಿಪ್ ಆಗಿ ಹಾರಿ ಹೋಯಿತು. ಅತ್ತ ಚೆಂಡು ಕೂಡ ನೇರವಾಗಿ ಶಶಾಂಕ್ ಸಿಂಗ್ ಕೈ ಸೇರಿತು. ಆ ಮೂಲಕ ಮತ್ತೆ ರಿಷಬ್ ಪಂತ್ ಕಡಿಮೆ ಮೊತ್ತಕ್ಕೆ ಔಟಾದರು. ಹಾಲಿ ಐಪಿಎಲ್ ಟೂರ್ನಿಯಲ್ಲಿ ಯಾಕೋ ರಿಷಬ್ ಪಂತ್ ಅದೃಷ್ಟವೇ ಸರಿ ಇಲ್ಲ. ಇತ್ತ ನಾಯಕನಾಗಿ ತಂಡಕ್ಕೆ ಗೆಲುವುಗಳೂ ಬರುತ್ತಿಲ್ಲ. ಇತ್ತ ಅವರ ಬ್ಯಾಟ್ ನಿಂದ ಸೂಕ್ತ ರನ್ ಗಳೂ ಹರಿಯುತ್ತಿಲ್ಲ.

ಹಾಲಿ ಟೂರ್ನಿಯಲ್ಲಿ ಒಟ್ಟು 10 ಇನ್ನಿಂಗ್ಸ್ ಆಡಿರುವ ಪಂತ್ ಕೇವಲ 12.8 ಸರಾಸರಿಯಲ್ಲಿ 128 ರನ್ ಗಳಿಸಿದ್ದಾರೆ. ಅದೂ ಕೂಡ 99.22 ಸ್ಟ್ರೈಕ್ ರೇಟ್ ನಲ್ಲಿ ಎಂಬುದು ವಿಶೇಷ.

ಬೇಸ್ತು ಬಿದ್ದ LSG ಮಾಲೀಕ Sanjiv Goenka

ಇನ್ನು ರಿಷಬ್ ಪಂತ್ ಔಟಾದ ರೀತಿ ಪ್ರೇಕ್ಷಕರನ್ನು ಮಾತ್ರವಲ್ಲ. ಸ್ವತಃ ಡಗೌಟ್ ನಲ್ಲಿ ಕುಳಿತಿದ್ದ ಎಲ್ ಎಸ್ ಜಿ ಮಾಲೀಕ ಸಂಜೀವ್ ಗೊಯೆಂಕಾರನ್ನೂ ಬೇಸ್ತು ಬೇಳಿಸಿದೆ. ಪಂತ್ ಔಟಾಗಿ ಹೊರನಡೆಯುತ್ತಿರುವುದನ್ನು ಅಸಹಾಯಕರಾಗಿಯೇ ಸಂಜೀವ್ ಗೊಯೆಂಕಾ ನೋಡುತ್ತಿದ್ದುದು ಕಂಡುಬಂತು. ಈ ವಿಡಿಯೋ ಇದೀಗ ಸಾಮಾಜಿಕಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT