ಹರ್ಭಜನ್ ಸಿಂಗ್ 
ಕ್ರಿಕೆಟ್

IPL 2025: ಹರ್ಭಜನ್ ಸಿಂಗ್ ಪ್ರಕಾರ ಈ ತಂಡಗಳೇ ಫೈನಲಿಸ್ಟ್ ಗಳು! GT ಅಥವಾ PBKS ಅಲ್ಲವೇ ಅಲ್ಲ..

ಈ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದು, ಸ್ಥಿರತೆ ಕಾಯ್ದುಕೊಂಡಿವೆ.

ನವದೆಹಲಿ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡಗಳು ಫೈನಲ್ ತಲುಪಬಹುದು ಎಂಬುದನ್ನು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ. ಹರ್ಭಜನ್ ಸಿಂಗ್ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ ( MI) ಫೈನಲಿಸ್ಟ್ ತಂಡಗಳಾಗಿವೆ.

ಈ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದು, ಸ್ಥಿರತೆ ಕಾಯ್ದುಕೊಂಡಿವೆ. ಹೀಗಾಗಿ ಈ ತಂಡಗಳೇ ಫೈನಲ್ ನಲ್ಲಿ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ ಎಂದು ಅನಿಸುತ್ತಿದೆ ಎಂದಿದ್ದಾರೆ.

RCB ಪ್ಲೇ ಆಫ್ ಸ್ಥಾನ ಬಹುತೇಕ ಖಚಿತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಫಾರ್ಮ್ ನಲ್ಲಿವೆ. 11 ಪಂದ್ಯಗಳನ್ನಾಡಿರುವ ಆರ್ ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ನಲ್ಲಿ ಬಹುತೇಕ ಸ್ಥಾನ ಫಿಕ್ಸ್ ಆಗಿದೆ. ಮತ್ತೊಂದೆಡೆ ಆರಂಭದಲ್ಲಿ ಸಾಕಷ್ಟು ಹಿನ್ನೆಡೆ ಅನುಭವಿಸಿದ ಮುಂಬೈ ಇಂಡಿಯನ್ಸ್ ತದನಂತರ ಪುಟಿದೇಳಿದ್ದು, ಫೈನಲ್ ತಲುಪುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಸಮತೋಲನದ ತಂಡ RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಹಿಂದಿನ ಟೂರ್ನಿಗಿಂತ ಈ ಬಾರಿ ಹೆಚ್ಚು ಸಮತೋಲನದಿಂದ ಕೂಡಿದೆ. ಇಡೀ ತಂಡ ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿಲ್ಲ. ಪ್ರತಿಯೊಂದು ಪಂದ್ಯದಲ್ಲಿ ವಿಭಿನ್ನ ಆಟಗಾರನೊಬ್ಬ ಹೊರಹೊಮ್ಮುತ್ತಾನೆ. ಇದು ಈ ಬಾರಿ ಟ್ರೋಫಿ ಗೆಲಲ್ಲು ಉತ್ತಮ ಸೂಚನೆಯಾಗಿದೆ ಎಂದು ಬಜ್ಜೆ ಅಭಿಪ್ರಾಯ ಪಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ಅದ್ಬುತ ಕಂಬ್ಯಾಕ್: 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಸಾಕಷ್ಟು ಹಿನ್ನೆಡೆ ಅನುಭವಿಸಿತು. ಆದರೆ, ಸತತ ಆರು ಗೆಲುವಿನೊಂದಿಗೆ ಫಿನಿಕ್ಸ್ ನಂತೆ ಕಂಬ್ಯಾಕ್ ಮಾಡಿತು. ಈ ಗೆಲುವು ಅವರನ್ನು ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವ ನಂಬಿಕೆಯನ್ನು ಹುಟ್ಟಿಸಿದೆ. ಇದೇ ರೀತಿಯಲ್ಲಿ ಆಟ ಮುಂದುವರೆಸಿದರೆ ಅವರು ಫೈನಲ್ ತಲುಪುದು ಖಚಿತ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಈ ಸಲ ಕಪ್ ನಮ್ದೆ? ಆರ್ ಸಿಬಿ ಕಪ್ ಗೆಲ್ಲಬೇಕೆಂಬುದು ಅಭಿಮಾನಿಗಳ 18 ವರ್ಷಗಳ ಮಹಾದಾಸೆಯಾಗಿದೆ. ಈ ಆವೃತ್ತಿ ವಿಭಿನ್ನವಾಗಿರುತ್ತದೆ ಅನಿಸುತ್ತದೆ. ತಂಡ ಟ್ರೋಫಿ ಗೆಲ್ಲುವ ಬಗ್ಗೆ ಮೌನವಾಗಿರುವ ಮೂಲಕ ಪ್ರಬುದ್ಧತೆ ತೋರುತ್ತಿದೆ. ಪ್ರದರ್ಶನದತ್ತ ಗಮನ ಹರಿಸಿದೆ.

RCB ಕೊಹ್ಲಿ ಅಥವಾ ಪಾಟಿದಾರ್ ಮೇಲೆ ಅವಲಂಬಿತವಾಗಿಲ್ಲ: ಈ ಬಾರಿ ಆರ್ ಸಿಬಿಯ ಒಂದು ದೊಡ್ಡ ಬದಲಾವಣೆ ಅಂದ್ರೆ, ಎಲ್ಲಾ ಆಟಗಾರರ ಕೊಡುಗೆಯಿದೆ. ಕೊಹ್ಲಿ ಅಥವಾ ರಜತ್ ಪಾಟಿದಾರ್ ಅವರಂತಹ ಆಟಗಾರರ ಮೇಲೆ ಅವಲಂಬಿತವಾಗಿಲ್ಲ. ಬೌಲರ್ ಗಳು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈ ತಂಡ ಪ್ರಯತ್ನ ಮುಂದುವರೆಸಿದ್ದರೆ ಟ್ರೋಫಿ ಗೆಲ್ಲುವ ಹಾದಿ ಸುಗಮವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಜರಾತ್: SIR ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ, 73.73 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

5ನೇ T20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 30 ರನ್ ಗಳ ರೋಚಕ ಜಯ; 3-1 ಸರಣಿ ಗೆಲುವು

Load shedding In bangalore: ಡಿ.20 ರಂದು ನಗರದ ಈ ಏರಿಯಾಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ವಿದ್ಯುತ್ ಕಡಿತ

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

1,000 ಕೋಟಿ ಬೆಟ್ಟಿಂಗ್ ಆ್ಯಪ್ ತನಿಖೆ: ಯುವರಾಜ್ ಸಿಂಗ್, ಉತ್ತಪ್ಪ, ಮಿಮಿ ಚಕ್ರವರ್ತಿ, ಸೋನು ಸೂದ್ ಆಸ್ತಿ ಮುಟ್ಟುಗೋಲು!

SCROLL FOR NEXT