ಸೂರ್ಯಕುಮಾರ್ ಯಾದವ್ 
ಕ್ರಿಕೆಟ್

'ಮುಂದಿನ ಮೂರ್ನಾಲ್ಕು ವರ್ಷ ಬಹಳ ಮುಖ್ಯ, ತುರ್ತಾಗಿ ಸಹಾಯ ಮಾಡಿ': RCB ಮಾಜಿ ಆಟಗಾರ ಎಬಿಡಿಗೆ ಸೂರ್ಯಕುಮಾರ್ ಯಾದವ್ ಮನವಿ!

ಎಬಿ ಡಿವಿಲಿಯರ್ಸ್ ಟಿ20ಐ ಮತ್ತು ಏಕದಿನ ಪಂದ್ಯಗಳಲ್ಲಿ ಅದ್ಭುತವಾಗಿದ್ದರು. ಆದರೆ, ಅವರು ಟೆಸ್ಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎಂದು ಭಾರತದ ಟಿ20ಐ ನಾಯಕ ಗಮನಸೆಳೆದರು.

ಭಾರತ ಕ್ರಿಕೆಟ್ ತಂಡದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಅವರು ಭವಿಷ್ಯದಲ್ಲಿ ಏಕದಿನ ಪಂದ್ಯಗಳನ್ನು ಆಡುವ ಉದ್ದೇಶ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ಮುಂಬೈ ಬ್ಯಾಟ್ಸ್‌ಮನ್ ಸದ್ಯ 50 ಓವರ್‌ಗಳ ಸ್ವರೂಪದಿಂದ ಹೊರಗಿದ್ದಾರೆ. ಆದರೂ, ಅವರು ಇಲ್ಲಿಯವರೆಗೆ 37 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟಿ20ಐ ಮತ್ತು ಏಕದಿನ ಪಂದ್ಯಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ತಾವು ವಿಫಲರಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿಯೇ ಅವರಿಗೆ ಭಾರತದ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ವಿಮಲ್ ಕುಮಾರ್ ಅವರೊಂದಿಗಿನ ಸಂದರ್ಶನದಲ್ಲಿ ಸೂರ್ಯಕುಮಾರ್ ಅವರು, ಎಬಿ ಡಿವಿಲಿಯರ್ಸ್ ಅವರೊಂದಿಗೆ ಎಂದಿಗೂ ದೀರ್ಘ ಸಂಭಾಷಣೆ ನಡೆಸಿಲ್ಲ ಮತ್ತು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ, ಟಿ20ಐ ಮತ್ತು ಏಕದಿನ ಪಂದ್ಯಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸಬಹುದು ಎಂದು ಮಾಜಿ ಪ್ರೋಟಿಯಸ್ ನಾಯಕನನ್ನು ಕೇಳುವುದಾಗಿ ಹೇಳಿದರು.

ಎಬಿ ಡಿವಿಲಿಯರ್ಸ್ ಟಿ20ಐ ಮತ್ತು ಏಕದಿನ ಪಂದ್ಯಗಳಲ್ಲಿ ಅದ್ಭುತವಾಗಿದ್ದರು. ಆದರೆ, ಅವರು ಟೆಸ್ಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎಂದು ಭಾರತದ ಟಿ20ಐ ನಾಯಕ ಗಮನಸೆಳೆದರು. ಮುಂದಿನ ನಾಲ್ಕು ವರ್ಷಗಳು ತಮಗೆ ಬಹಳ ಮುಖ್ಯ ಎಂದ ಅವರು, ತುರ್ತಾಗಿ ತಮ್ಮೊಂದಿಗೆ ಸಂಭಾಷಣೆ ನಡೆಸಿ ಸಹಾಯ ಮಾಡುವಂತೆ ಎಬಿಡಿ ಅವರಿಗೆ ಮನವಿ ಮಾಡಿದರು.

'ನಾನು ಅವರನ್ನು ಶೀಘ್ರದಲ್ಲೇ ಭೇಟಿಯಾದರೆ, ಅವರು ತಮ್ಮ T20I ಮತ್ತು ODI ಪಂದ್ಯಗಳನ್ನು ಹೇಗೆ ಸಮತೋಲನಗೊಳಿಸಿದರು ಎಂದು ಅವರನ್ನು (ಡಿವಿಲಿಯರ್ಸ್) ಕೇಳಲು ಬಯಸುತ್ತೇನೆ. ಏಕೆಂದರೆ, ಅವರೊಂದಿಗೆ ಮಾತನಾಡಲು ನನಗೆ ಈವರೆಗೆ ಸಾಧ್ಯವಾಗಿಲ್ಲ. ODI ಅನ್ನು T20I ನಂತೆ ಆಡಬೇಕು ಎಂದು ನಾನು ಭಾವಿಸಿದೆ. ಎರಡೂ ಸ್ವರೂಪಗಳಲ್ಲಿ ಯಶಸ್ವಿಯಾಗಲು ಅವರು ಏನು ಮಾಡಿದರು ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಎಬಿ, ನೀವು ಇದನ್ನು ಕೇಳುತ್ತಿದ್ದರೆ, ದಯವಿಟ್ಟು ಬೇಗನೆ ನನ್ನನ್ನು ಸಂಪರ್ಕಿಸಿ. ಏಕೆಂದರೆ, ಮುಂದಿನ ಮೂರ್ನಾಲ್ಕು ವರ್ಷಗಳು ನನಗೆ ಮುಖ್ಯವಾಗಿವೆ. ಮತ್ತು ನಾನು ODI ಕ್ರಿಕೆಟ್ ಆಡಲು ತುಂಬಾ ಉತ್ಸುಕನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ! T20I ಮತ್ತು ODI ಪಂದ್ಯಗಳ ನಡುವೆ ಸಮತೋಲನ ಸಾಧಿಸಲು ನನಗೆ ಸಾಧ್ಯವಾಗಲಿಲ್ಲ' ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

ಸೂರ್ಯಕುಮಾರ್ ಯಾದವ್ ಅವರು 2021ರಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು ಮತ್ತು ಕೊನೆಯ ಬಾರಿಗೆ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ 50 ಓವರ್‌ಗಳ ಸ್ವರೂಪದಲ್ಲಿ ಆಡಿದರು. ಅಂದಿನಿಂದ, ಅವರು ಕೇವಲ T20I ಗಳಿಗೆ ಸೀಮಿತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

Bihar Poll: ಮೊದಲ ಹಂತದ ಮತದಾನ, ಪ್ರಚಾರಕ್ಕೆ ತೆರೆ, ಪ್ರಧಾನಿ ಮೋದಿ ನಕಲಿ ಪದವಿ ಹೊಂದಿದ್ದಾರೆ- ರಾಹುಲ್ ಆರೋಪ

ಕೊನೆಗೆ ನಿಮಗೆ 'ಚಹಾ ಕಪ್' ಗತಿ: ವಿಶ್ವಕಪ್ ಗೆದ್ದ ನಂತರ Pakistan ಕಾಲೆಳೆದು ಸೇಡು ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್; Video ವೈರಲ್!

ರಾಮನಗರ: ಕೋಟ್ಯಂತರ ರೂ ವೆಚ್ಚದಲ್ಲಿ 'ಹಿಂದೂ ದೇವಾಲಯ' ಕಟ್ಟಿಸಿಕೊಟ್ಟ ಮುಸ್ಲಿಂ ಉದ್ಯಮಿ!

SCROLL FOR NEXT