ಮುಂಬೈ: ಐತಿಹಾಸಿಕ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಗೂ ಮುನ್ನ 'ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ' ಎಂದು ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರಿಗೆ ಭಾರತದ ವಿಶ್ವಕಪ್ ಹೀರೋ ಜೆಮಿಮಾ ರೊಡ್ರಿಗಸ್ ಆಗ್ರಹಿಸಿದ್ದಾರೆ.
ಐತಿಹಾಸಿಕ ಮಹಿಳಾ ಏಕದಿನ ವಿಶ್ವಕಪ್ ಗೆಲುವಿನ ನಂತರ ಒಟ್ಟಿಗೆ ಹಾಡು ಹಾಡುವ ಸಮಯ ಬಂದಿರುವುದಾಗಿ ಅವರು ನೆನಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಈ ಕುರಿತ ವಿಡಿಯೋ ಹಂಚಿಕೊಂಡಿರುವ ಜೆಮಿಮಾ, ಒಟ್ಟಿಗೆ ಹಾಡುವ ಸಮಯ ಕಾಯಲು ಸಾಧ್ಯವಿಲ್ಲ" ಎಂದು ಹೇಳಿದ್ದು, ಫೈನಲ್ ಮುನ್ನ ಹೇಳಿದ ಮಾತಿನಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.
ಗವಾಸ್ಕರ್ ಏನಂತಾ ಮಾತು ಕೊಟ್ಟಿದ್ರು?
ಹೌದು. ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಫೈನಲ್‌ಗೆ ಮೊದಲು, ಭಾರತ ಪ್ರಶಸ್ತಿ ಗೆದ್ದರೆ ಜೆಮಿಮಾ ಅವರೊಂದಿಗೆ ಗಿಟಾರ್ ನೊಂದಿಗೆ ಒಟ್ಟಿಗೆ ಹಾಡುವುದಾಗಿ ಗವಾಸ್ಕರ್ ಹೇಳಿದ್ದರು. "ಭಾರತ ವಿಶ್ವಕಪ್ ಗೆದ್ದರೆ, ಅವರು ಮತ್ತು ನಾನು - ಅವರು ಒಪ್ಪಿದರೆ, ಒಟ್ಟಿಗೆ ಹಾಡನ್ನು ಹಾಡುತ್ತೇವೆ. ಅವರ ಬಳಿ ಅವರ ಗಿಟಾರ್ ಇರುತ್ತದೆ. ನಾನು ಅವರೊಂದಿಗೆ ಹಾಡುತ್ತೇನೆ" ಎಂದು ಗವಾಸ್ಕರ್ ಹೇಳಿದ್ದರು. ಈಗ ಟ್ರೋಫಿ ಗೆದ್ದಿರುವುದರಿಂದ ಜೆಮಿಮಾ ಈ ರೀತಿಯ ಆಹ್ವಾನ ನೀಡಿದ್ದಾರೆ.
"ಹಾಯ್ ಸುನಿಲ್ ಗವಾಸ್ಕರ್ ಸರ್, ನಿಮ್ಮ ಸಂದೇಶವನ್ನು ನಾನು ನೋಡಿದೆ. ಭಾರತ ವಿಶ್ವಕಪ್ ಗೆದ್ದರೆ, ನಾವಿಬ್ಬರೂ ಒಟ್ಟಿಗೆ ಹಾಡನ್ನು ಹಾಡುತ್ತೇವೆ ಎಂದು ನೀವು ಹೇಳಿದ್ದೀರಿ. ಆದ್ದರಿಂದ ನಾನು ಗಿಟಾರ್‌ನೊಂದಿಗೆ ಸಿದ್ಧನಿದ್ದೇನೆ ಮತ್ತು ನಿಮ್ಮ ಮೈಕ್‌ನೊಂದಿಗೆ ನೀವು ಸಿದ್ಧರಿದ್ದೀರಿ ಎಂದು ಭಾವಿಸುತ್ತೇನೆ. ತುಂಬಾ ಪ್ರೀತಿಯಿಂದ ಎಂದು ಜೆಮಿಮಾ ತನ್ನ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.