ಐಪಿಎಲ್ 2026ರ ಮಿನಿ-ಹರಾಜಿಗೆ ಮುಂಚಿತವಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 8 ಆಟಗಾರರನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಆಟಗಾರರಲ್ಲಿ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಸೇರಿದ್ದಾರೆ, ಜೊತೆಗೆ ಐಪಿಎಲ್ 2025ರ ಅಂತ್ಯದ ವೇಳೆಗೆ ಬದಲಿ ಆಟಗಾರನಾಗಿ ಬಂದಿದ್ದ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಾಬಾನಿ ಅವರನ್ನು ಕೈಬಿಡಲಾಗಿದೆ.
ರಜತ್ ಪಾಟಿದಾರ್ ನೇತೃತ್ವದ ತಂಡವು ಕಳೆದ ಆವೃತ್ತಿಯಲ್ಲಿ ತಮ್ಮ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ 18 ವರ್ಷಗಳ ಬರವನ್ನು ಕೊನೆಗೊಳಿಸಿತು.
ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರು
ಸ್ವಸ್ತಿಕ್ ಚಿಕಾರ - ₹30 ಲಕ್ಷ
ಮಯಾಂಕ್ ಅಗರ್ವಾಲ್ - ₹1 ಕೋಟಿ
ಟಿಮ್ ಸೈಫರ್ಟ್ - ₹2 ಕೋಟಿ
ಮನೋಜ್ ಭಾಂಡಗೆ- ₹30 ಲಕ್ಷ
ಲಿಯಾಮ್ ಲಿವಿಂಗ್‌ಸ್ಟನ್- ₹8.75
ಲುಂಗಿ ಎಂಗಿಡಿ- ₹1 ಕೋಟಿ
ಬ್ಲೆಸ್ಸಿಂಗ್ ಮುಜರಾಬಾನಿ - ₹75 ಲಕ್ಷ
ಮೋಹಿತ್ ರಾಠಿ - ₹30 ಲಕ್ಷ
ಆರ್‌ಸಿಬಿ ಉಳಿಸಿಕೊಂಡ ಆಟಗಾರರು
ರಜತ್ ಪಾಟೀದಾರ್ - ₹11 ಕೋಟಿ
ವಿರಾಟ್ ಕೊಹ್ಲಿ - ₹21 ಕೋಟಿ
ದೇವದತ್ ಪಡಿಕ್ಕಲ್- ₹2 ಕೋಟಿ
ಫಿಲ್ ಸಾಲ್ಟ್- ₹11.5 ಕೋಟಿ
ಜಿತೇಶ್ ಶರ್ಮಾ - ₹11 ಕೋಟಿ
ಕೃನಾಲ್ ಪಾಂಡ್ಯ- ₹5.75
ಸ್ವಪ್ನಿಲ್ ಸಿಂಗ್- ₹50 ಲಕ್ಷ
ಟಿಮ್ ಡೇವಿಡ್- ₹3 ಕೋಟಿ
ಜೇಕಬ್ ಬೆಥೆಲ್- ₹2.60 ಕೋಟಿ
ಜಾಶ್ ಹೇಜಲ್‌ವುಡ್- ₹12.50 ಕೋಟಿ
ಯಶ್ ದಯಾಳ್ - ₹5 ಕೋಟಿ
ಭುವನೇಶ್ವರ್ ಕುಮಾರ್- ₹10.75 ಕೋಟಿ
ರಸಿಕ್ ಸಲಾಂ ದಾರ್- ₹6 ಕೋಟಿ
ಅಭಿನಂದನ್ ಸಿಂಗ್- ₹30 ಲಕ್ಷ
ಸುಯಾಂಶ್ ಶರ್ಮಾ- ₹2.6 ಕೋಟಿ
ರೊಮಾರಿಯೋ ಶೆಫರ್ಡ್
IPL 2025 ರಲ್ಲಿ RCB ತಂಡ
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ನುವಾನ್ ತುಷಾರ, ಸುಯಾಶ್ ಶರ್ಮಾ, ಜಾಶ್ ಹೇಜಲ್‌ವುಡ್, ಟಿಮ್ ಸೈಫರ್ಟ್, ರಸಿಕ್ ದಾರ್ ಸಲಾಂ, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್, ಬ್ಲೆಸ್ಸಿಂಗ್ ಮುಜರಾಬಾನಿ, ಟಿಮ್ ಡೇವಿಡ್, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್.