ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಡಳಿತ ಸಮಿತಿಯ ಚುನಾವಣೆಯನ್ನು ಎರಡನೇ ಬಾರಿಗೆ ಮುಂದೂಡಲಾಗಿದೆ. ಇದಕ್ಕೂ ಮೊದಲು, ಸೆಪ್ಟೆಂಬರ್ 30 ಕ್ಕೆ ಚುನಾವಣೆ ನಿಗದಿಯಾಗಿತ್ತು, ನಂತರ ನವೆಂಬರ್ 30 ಕ್ಕೆ ಮುಂದೂಡಲಾಯಿತು.
ಕೆಲವು ಅಭ್ಯರ್ಥಿಗಳ ಅರ್ಹತಾ ಮಾನದಂಡಗಳ ಕುರಿತು ನ್ಯಾಯಾಲಯದಲ್ಲಿ ಇತ್ಯರ್ಥವಾಗಿರಬೇಕಿರುವುದರಿಂದ ಚುನಾವಣೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತದೆ.
ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಕ್ರಿಕೆಟ್ ಮತ್ತೊಮ್ಮೆ ಕೆಎಸ್‌ಸಿಎಯ ಆದ್ಯತೆಗಳಿಂದ ಹೊರಗುಳಿದಿದೆ ಎಂದು ಆಘಾತ ವ್ಯಕ್ತಪಡಿಸಿದರು. ಆದ್ಯತೆಯು ಕ್ರಿಕೆಟ್ ಆಗಿರಬೇಕು, ರಾಜಕೀಯವಲ್ಲ. ನಾವು ಇಲ್ಲಿರುವುದು ಒಂದೇ ಒಂದು ಕಾರಣಕ್ಕಾಗಿ: ಐಪಿಎಲ್ ಸೇರಿದಂತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನ್ನು ಮರಳಿ ತರುವುದಾಗಿದೆ. ಬೆಂಗಳೂರು ಫ್ರಾಂಚೈಸಿ (ಐಪಿಎಲ್‌ನಲ್ಲಿ) ಬೆಂಗಳೂರಿನ ಹೊರಗೆ ಏಕೆ ಆಡಬೇಕು, ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲಿ ಆಗಬೇಕೆಂದರೆ ಚುನಾವಣೆಯಾಗಬೇಕು ಎಂದರು.
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವೆಂಕಟೇಶ್ ಪ್ರಸಾದ್ ಅವರ ತಂಡದ ವಿನಯ್ ಮೃತ್ಯುಂಜಯ, ಚುನಾವಣಾಧಿಕಾರಿ ನವೆಂಬರ್ 14 ಮತ್ತು 15 ರಂದು ಪತ್ರಗಳ ಮೂಲಕ ವ್ಯವಸ್ಥಾಪಕ ಸಮಿತಿಯೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ, ಚುನಾವಣಾ ಅಧಿಕಾರಿ ಸದಸ್ಯರಲ್ಲಿ ಗೊಂದಲವಿದೆ ಎಂದು ಹೇಳಿದರು, ಗೊಂದಲ ಏನೆಂದು ನಮಗೆ ಅರ್ಥವಾಗುತ್ತಿಲ್ಲ. ಚುನಾವಣೆಯನ್ನು ಮುಂದೂಡಲು ಸಮಿತಿಯು ಸಂಪೂರ್ಣವಾಗಿ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ನಾವು ಇಂದು ರಾತ್ರಿ ನಮ್ಮ ವಕೀಲರ ಜೊತೆ ಮುಂದಿನ ಹಂತಗಳ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.
ಪ್ರಎಲ್ಲಾ ರೀತಿಯ ಕ್ರಿಕೆಟ್ ನ್ನು ಕೆಎಸ್‌ಸಿಎ ಬಹಳ ಸಮಯದಿಂದ ರಾಜ್ಯದಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂಬುದು ಗೇಮ್ ಚೇಂಜರ್ಸ್ ತಂಡದ ಆರೋಪವಾಗಿದೆ.
ಬ್ರಿಜೇಶ್ ಪಟೇಲ್ ಅವರ ತಂಡದ ಕ್ರಿಕೆಟಿಗರಲ್ಲದ ಆಟಗಾರ ತಮ್ಮ ವಿರುದ್ಧ ಸ್ಪರ್ಧಿಸುತ್ತಿರುವುದಕ್ಕೆ ಕೂಡ ವೆಂಕಟೇಶ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು.