ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ನಿಶ್ಚಿತಾರ್ಥ ಸದ್ದು ಮಾಡುತ್ತಿದೆ. ಅವರು ತಮ್ಮ ಹೊಸ ಗೆಳತಿ ಮಹಿಕಾ ಶರ್ಮಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಅವರು ತಮ್ಮ ಹೊಸ ಗೆಳತಿ ಎಂದೇ ಹೇಳಲಾಗುತ್ತಿರುವ ಮಹಿಕಾ ಶರ್ಮಾ ಜೊತೆಯ ಫೋಟೋ ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥದ ಊಹಾಪೋಹಕ್ಕೆ ಮತ್ತಷ್ಟು ಬಣ್ಣ ತುಂಬಿದೆ. ಈ ಚಿತ್ರಗಳಲ್ಲಿ ಮಹಿಕಾ ಅವರ ಕೈಯಲ್ಲಿ ಹೊಳೆಯುವ ದೊಡ್ಡ ವಜ್ರದ ಉಂಗುರವೇ ಎಲ್ಲರ ಗಮನ ಸೆಳೆದಿದೆ. ಸಾಂಪ್ರದಾಯಿಕ ಉಡುಪಿನಲ್ಲಿದ್ದ ಈ ಜೋಡಿಯ ಫೋಟೋಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.
ಹಾರ್ದಿಕ್, ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಜುಲೈ 2024ರಲ್ಲಿ ವಿಚ್ಛೇದನ ಪಡೆದಿದ್ದರಿಂದ, ಅವರ ಹೊಸ ಸಂಬಂಧದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ವಿಚ್ಛೇದನದ ನಂತರ ಹಾರ್ದಿಕ್–ಮಹಿಕಾ ಸಂಬಂಧದ ಸುದ್ದಿ ಹರಿದಾಡುತ್ತಿದ್ದರೂ, ಹುಟ್ಟುಹಬ್ಬದ ದಿನ ಹಾರ್ದಿಕ್ ಹಂಚಿಕೊಂಡ ಫೋಟೋಗಳು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ.