ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್ ಹಾಗೂ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಮದುವೆ ಮುಂದೂಡಲ್ಪಟ್ಟಿದೆ.
ಬಹು ಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ನವೆಂಬರ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಮದುವೆ ದಿನವೇ ಸ್ಮೃತಿ ಮಂದಾನ ತಂದೆಯ ಆರೋಗ್ಯ ಏರು-ಪೇರಾಗಿದ್ದರಿಂದ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಸ್ಮೃತಿ ಮಂದಾನ ತಂದೆ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇತ್ತ ಮದುವೆ ನಿಂತಿದ್ದರಿಂದ ಒತ್ತಡಕ್ಕೆ ಸಿಲುಕಿದ್ದ ಪಲಾಶ್ ಮುಚ್ಚನ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸ್ಮೃತಿ ಮಂದಾನ ಹಾಗೂ ಪಲಾಶ್ ಮದುವೆ ನಿಂತಿದ್ದರಿಂದ ಊಹಾ-ಪೋಹಗಳು ಹುಟ್ಟಿಕೊಂಡಿವೆ. ಜೊತೆಗೆ ನೆಟ್ಟಿಗರು ಕೆಲವು ವಿಡಿಯೋಗಳನ್ನು ವೈರಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಮದುವೆ ನಿಲ್ಲಲು ಪಲಾಶ್ ಮುಚ್ಚನ್ ಅಫೇರ್‌ಗಳು ಕಾರಣವೆಂದು ಹೇಳಲಾಗುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಲಾಶ್ ಹಾಗೂ ನತಾಶಾ ಸ್ಟಾಂಕೋವಿಕ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಕಾರಿನಲ್ಲಿ ಬಾಲಿವುಡ್ ಗಾಯಕ ಬಾದ್‌ಷಾ ಅವರ ಫೇಮಸ್ ಸಾಂಗ್ "ಡಿಜೆ ವಾಲೆ ಬಾಬು" ಸಾಂಗ್ ಪ್ಲೇ ಆಗುತ್ತಿದ್ದು, ಇಬ್ಬರೂ ಆ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ.
ಸ್ಮೃತಿ ಮಂದಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆ, ವಂಚನೆ ಆರೋಪಗಳ ಮಧ್ಯೆ ಈ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಇದರ ಜೊತೆಗೆ ಮೇರಿ ಡಿ ಕೋಸ್ಟಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಚಾಟ್‌ಗಳು ಪಲಾಶ್ ಮತ್ತು ಇನ್ನೊಬ್ಬ ಮಹಿಳೆಯ ನಡುವಿನ ಸಂಭಾಷಣೆಯ ವಿಡಿಯೋಗಳನ್ನು ಒಳಗೊಂಡಿದೆ.
ಸ್ಮೃತಿ ಮಂದಾನ ಜೊತೆ ಸಂಬಂಧದಲ್ಲಿದ್ದಾಗಲೇ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ. ಸದ್ಯ ವಿಡಿಯೋ ಹಾಗೂ ಚಾಟ್‌ಗಳ ಸತ್ಯಾಂಶ ಹೊರ ಬಿದ್ದಿಲ್ಲ. ಸದ್ಯ ಪಲಾಶ್ ಮುಚ್ಚಲ್ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಸ್ಮ್ರತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಬೇರೆ ಮಹಿಳೆಯ ಜೊತೆ ಪಲಾಶ್ ಮುಚ್ಚಲ್ ಮಾಡಿದ್ದಾರೆ ಎನ್ನಲಾದ ಚಾಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.