ಹರಾರೆ: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್ಗೆ ನಮೀಬಿಯಾ ಮತ್ತು ಜಿಂಬಾಬ್ವೆ ತಂಡಗಳು ಅರ್ಹತೆ ಪಡೆದಿವೆ.
ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಆಫ್ರಿಕಾ ಪ್ರಾದೇಶಿಕ ಅರ್ಹತಾ ಪಂದ್ಯಗಳಲ್ಲಿ ಫೈನಲ್ ತಲುಪಿದ ನಂತರ ನಮೀಬಿಯಾ ಮತ್ತು ಜಿಂಬಾಬ್ವೆ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವು.
ಸೆಮಿಫೈನಲ್‌ನಲ್ಲಿ ತಾಂಜಾನಿಯಾವನ್ನು 63 ರನ್‌ಗಳಿಂದ ಸೋಲಿಸುವ ಮೂಲಕ ನಮೀಬಿಯಾ ಸತತ ನಾಲ್ಕನೇ ಆವೃತ್ತಿಯ ಫೈನಲ್‌ಗೆ ತಲುಪಿತು.
ಆತಿಥೇಯ ಜಿಂಬಾಬ್ವೆ ಕೀನ್ಯಾ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿ 2022 ರ ನಂತರ ಮೊದಲ ಬಾರಿಗೆ ಅರ್ಹತೆ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೀನ್ಯಾ, ರಾಕೆಪ್ ಪಟೇಲ್ ಅವರ 47 ಎಸೆತಗಳಲ್ಲಿ 65 ರನ್‌ಗಳ ಇನ್ನಿಂಗ್ಸ್‌ನಿಂದಾಗಿ 6 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಬ್ರಿಯಾನ್ ಬೆನೆಟ್ 25 ಎಸೆತಗಳಲ್ಲಿ 51 ರನ್ ಗಳಿಸಿ ಜಿಂಬಾಬ್ವೆ ಇನ್ನೂ ಐದು ಓವರ್‌ಗಳು ಬಾಕಿ ಇರುವಂತೆಯೇ ನಿಗದಿತ ಗುರಿಯನ್ನು ತಲುಪಿತು.
ನಮೀಬಿಯಾ ಮತ್ತು ಜಿಂಬಾಬ್ವೆ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಮುಂದಿನ ವರ್ಷ ಅವರು ಭಾರತ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಲಿರುವುದು ಉಭಯ ತಂಡಗಳಿಗೆ ಗೊತ್ತಾಗಿದೆ.