ಭಾರತದ ನಾಯಕಿಯ ಗುರಾಯಿಸಿದ ಪಾಕ್ ಸ್ಪಿನ್ನರ್ 
ಕ್ರಿಕೆಟ್

ಏಕದಿನ ವಿಶ್ವಕಪ್: "Bh***diki ಕಣ್ಣು ತೋರಿಸ್ತಾಳೆ': ಪಾಕ್ ಸ್ಪಿನ್ನರ್ ವಿರುದ್ಧ ಹರ್ಮನ್ ಪ್ರೀತ್ ಕೌರ್ ಕೆಂಡ

ಶ್ರೀಲಂಕಾದ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರ ತಂಡ 88 ರನ್ ಗಳ ಭರ್ಜರಿ ಜಯ ಸಾಧಿಸಿತು.

ಕೊಲಂಬೋ: ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ತಮ್ಮನ್ನು ಕೆಣಕಿದ ಪಾಕ್ ಸ್ಪಿನ್ನರ್ ಗೆ ಭಾರತದ ನಾಯಕ ಹರ್ಮನ್ ಪ್ರೀತ್ ಕೌರ್ ಕೆಂಡ ಕಾರಿರುವ ವಿಡಿಯೋ ವೈರಲ್ ಆಗುತ್ತಿದೆ.

ನಿನ್ನೆ ಶ್ರೀಲಂಕಾದ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರ ತಂಡ 88 ರನ್ ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಐಸಿಸಿ ಟೂರ್ನಿಯಲ್ಲಿ ಭಾರತದ ಎದುರು ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗಧಿತ 50 ಓವರ್ ಗಳಲ್ಲಿ 247 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 43 ಓವರ್ ನಲ್ಲಿ 159 ರನ್ ಗೆ ಆಲೌಟ್ ಆಯಿತು. ಆ ಮೂಲಕ ಭಾರತ 88 ರನ್ ಗಳ ಜಯ ಸಾಧಿಸಿತು.

ಭಾರತ ನಾಯಕಿ ಕೆಣಕಿದ ಪಾಕ್ ಸ್ಪಿನ್ನರ್

ಇನ್ನು ಭಾರತ ಬ್ಯಾಟಿಂಗ್ ವೇಳೆ ಪಾಕಿಸ್ತಾನ ತಂಡದ ಸ್ಪಿನ್ನರ್ ನಶ್ರಾ ಸಂಧು ಭಾರತ ತಂಡ ನಾಯಕ ಹರ್ಮನ್ ಪ್ರೀತ್ ಕೌರ್ ನ್ನು ಕೆಣಕಿದ ಘಟನೆ ನಡೆಯಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಗಮಿಸಿದ ಹರ್ಮನ್ ಪ್ರೀತ್ ಕೌರ್ 34 ಎಸೆತಗಳಲ್ಲಿ 2 ಬೌಂಡರಿ ಸಹಿತ 19 ರನ್ ಗಳಿಸಿದ್ದರು. ಅಂತೆಯೇ ಹರ್ಲೀನ್ ಡಿಯೋಲ್ ಜೊತೆ 39 ರನ್ ಗಳ ಉತ್ತಮ ಜೊತೆಯಾಟ ಕೂಡ ಆಡಿದರು.

ಭಾರತದ ಇನ್ನಿಂಗ್ಸ್ ನ 22ನೇ ಓವರ್ ನಲ್ಲಿ ಸ್ಪಿನ್ನರ್ ನಶ್ರಾ ಸಂಧು ಎಸೆದ ಎಸೆತವನ್ನು ಹರ್ಮನ್ ಪ್ರೀತ್ ಕೌರ್ ರಕ್ಷಣಾತ್ಮಕವಾಗಿ ಆಡಿದರು. ಈ ವೇಳೆ ಚೆಂಡು ನೇರವಾಗಿ ಸಂದು ಕೈ ಸೇರಿತು. ಆಗ ಸಂಧು ಚೆಂಡನ್ನು ಕೋಪದಿಂದ ಹರ್ಮನ್ ಪ್ರೀತ್ ಕೌರ್ ಕಡೆ ಎಸೆಯುವಂತೆ ಆ್ಯಕ್ಷನ್ ಮಾಡಿದರು. ಅಲ್ಲದೆ ದೊಡ್ಡದಾಗಿ ಕಣ್ಣು ಬಿಡ್ಡುತಾ ಹರ್ಮನ್ ಪ್ರೀತ್ ಕೌರ್ ರನ್ನು ಗುರಾಯಿಸಿದರು.

ಸ್ಥಳದಲ್ಲೇ ತಿರುಗೇಟು ಕೊಟ್ಟ ಹರ್ಮನ್ ಪ್ರೀತ್ ಕೌರ್

ಇನ್ನು ನಶ್ರಾ ಸಂಧು ನಡೆಗೆ ಸ್ಥಳದಲ್ಲೇ ತಿರುಗೇಟು ಕೊಟ್ಟ ಹರ್ಮನ್ ಪ್ರೀತ್ ಕೌರ್, "Bh***diki ಕಣ್ಣು ತೋರಿಸ್ತಾಳೆ' ಎಂದು ಕಿಡಿಕಾರಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ನೋ ಹ್ಯಾಂಡ್ ಶೇಕ್ ಪಾಲಿಸಿ ಮುಂದುವರಿಕೆ

ಈ ಹಿಂದೆ ಆಪರೇಷನ್ ಸಿಂದೂರ್ ನಿಮಿತ್ತ ಭಾರತೀಯ ಸೇನೆಗೆ ಗೌರವ ನೀಡುವ ಸಲುವಾಗಿ ಭಾರತ ಪುರುಷರ ಕ್ರಿಕೆಟ್ ತಂಡ ಪಾಕ್ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದೀಗ ಅದೇ ನೀತಿಯನ್ನು ಭಾರತ ಮಹಿಳಾ ತಂಡ ಕೂಡ ಪಾಲಿಸಿದೆ. ನಿನ್ನೆಯ ಪಂದ್ಯದ ಟಾಸ್ ಮತ್ತು ಪಂದ್ಯ ಮುಕ್ತಾಯದ ಬಳಿಕ ಪಾಕ್ ಆಟಗಾರ್ತಿಯರೊಂದಿಗೆ ಭಾರತ ವನಿತೆಯರು ಹಸ್ತಾಲಾಘವ ಮಾಡದೇ ಡ್ರೆಸಿಂಗ್ ರೂಮ್ ಸೇರಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಇದೆಲ್ಲಾ ನನ್ ಮೇಲೆ ಪರಿಣಾಮ ಬೀರೊಲ್ಲ': ನ್ಯಾಯಾಲಯದಲ್ಲಿ CJI ಮೇಲೆ ಶೂ ಎಸೆದ ವಕೀಲ; Gavai ಪ್ರತಿಕ್ರಿಯೆ

Frances New PM Resigns: ಕ್ಯಾಬಿನೆಟ್ ರಚನೆ ಬೆನ್ನಲ್ಲೆ ಫ್ರಾನ್ಸ್‌ನ ನೂತನ ಪ್ರಧಾನಿ ರಾಜೀನಾಮೆ! ಕಾರಣವೇನು?

Ranji Trophy 2025: ಕರ್ನಾಟಕ ತಂಡ ಪ್ರಕಟ, ಕನ್ನಡಿಗ Mayank Agrawal ಗೆ ಮತ್ತೆ ಸಾರಥ್ಯ!

ಗಾಜಾದ ಅಂತಿಮ ಭರವಸೆ: ಈಜಿಪ್ಟ್‌ನಲ್ಲಿ ನಡೆಯುವ ಮಾತುಕತೆಗಳು ಯುದ್ಧ ನಿಲ್ಲಿಸಬಹುದೇ? (ಜಾಗತಿಕ ಜಗಲಿ)

ಮತ್ತೊಂದು ಪೈಶಾಚಿಕ ಕೃತ್ಯ: MBBS ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಅತ್ಯಾಚಾರ, Video ರೆಕಾರ್ಡ್!

SCROLL FOR NEXT