ಡೆಲ್ಲಿ ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್. 
ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಪ್ರಕಾರ 'ಮೋಸ್ಟ್ ಸ್ಟೈಲಿಶ್' ಆಟಗಾರ ಯಾರು ಗೊತ್ತಾ?

ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ, ಗೌತಮ್ ಗಂಭೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ತಂಡದ ಪ್ರದರ್ಶನ ಉತ್ತಮವಾಗಿಲ್ಲ ಎಂದಿದ್ದಾರೆ.

ಮುಂದಿನ ವಾರ ಏಷ್ಯಾ ಕಪ್‌ ಆರಂಭವಾಗಲಿದ್ದು, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಸದ್ಯ ತಮ್ಮ ಸಣ್ಣ ವಿರಾಮವನ್ನು ಆನಂದಿಸುತ್ತಿದ್ದಾರೆ. ಅವರು ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಭಾಗವಹಿಸಿದ್ದರು ಮತ್ತು ಫಟಾಫಟ್ ಪ್ರಶ್ನೆಗಳಿಗೆ ಉತ್ತರಿಸಿದರು.

ಟಿ20 ವಿಶ್ವಕಪ್ ನಂತರ ಕಳೆದ ವರ್ಷ ಅಧಿಕಾರ ವಹಿಸಿಕೊಂಡಾಗಿನಿಂದ ಗಮನ ಸೆಳೆಯುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗೆ ಕೆಲವು ಪದಗಳನ್ನು ಹೇಳಲಾಯಿತು. ಆ ಪದಗಳಿಗೆ ಸರಿಹೊಂದುವ ಭಾರತೀಯ ಆಟಗಾರರ ಹೆಸರುಗಳನ್ನು ಹೇಳುವಂತೆ ಸೂಚಿಸಲಾಯಿತು.

ಅವರು ಯಾವ ಪದಗಳಿಗೆ ಯಾವ ಭಾರತೀಯ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ ಎಂಬುದು ಇಲ್ಲಿದೆ:

ಕ್ಲಚ್ - ಸಚಿನ್ ತೆಂಡೂಲ್ಕರ್

ದೇಸಿ ಬಾಯ್ - ವಿರಾಟ್ ಕೊಹ್ಲಿ

ಸ್ಪೀಡ್- ಜಸ್ಪ್ರೀತ್ ಬುಮ್ರಾ

ಗೋಲ್ಡನ್ ಆರ್ಮ್ - ನಿತೀಶ್ ರಾಣಾ

ಮೋಸ್ಟ್ ಸ್ಟೈಲಿಶ್- ಶುಭಮನ್ ಗಿಲ್

ಮಿ. ಕನ್ಸಿಸ್ಟೆಂಟ್- ರಾಹುಲ್ ದ್ರಾವಿಡ್

ರನ್ ಮೆಷಿನ್- ವಿವಿಎಸ್ ಲಕ್ಷ್ಮಣ್

ಮೋಸ್ಟ್ ಫನ್ನಿ- ರಿಷಭ್ ಪಂತ್

ಡೆತ್ ಓವರ್ ಸ್ಪೆಷಲಿಸ್ಟ್- 'ಬುಮ್ರಾ ಅವರನ್ನು ಹೇಳಬೇಕೆಂದಿದ್ದೆ, ಆದರೆ ನಾನು ಈಗಾಗಲೇ ಅವರ ಹೆಸರನ್ನು ಹೇಳಿರುವುದರಿಂದ ಜಹೀರ್ ಖಾನ್.

ಇತ್ತೀಚೆಗೆ, ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ, ಗೌತಮ್ ಗಂಭೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಕಳಪೆ ಫಲಿತಾಂಶಗಳ ಹೊರತಾಗಿಯೂ, ತಂಡವು ಸದ್ಯ ಪರಿವರ್ತನೆಯ ಹಾದಿಯಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ಹೇಳಿದರು.

ಗಂಭೀರ್ ಅವರ ಅಡಿಯಲ್ಲಿ ಭಾರತ 15 ಟೆಸ್ಟ್‌ಗಳನ್ನು ಆಡಿದ್ದು, ಕೇವಲ ಐದು ಪಂದ್ಯಗಳನ್ನು ಗೆದ್ದಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡದ ಪ್ರದರ್ಶನವು ಅನೇಕ ಜನರನ್ನು ಪ್ರಭಾವಿತಗೊಳಿಸಿತು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತ ತಂಡಕ್ಕೆ ಇದು ನಿರ್ಣಾಯಕ ಫಲಿತಾಂಶವಾಗಿತ್ತು. ಗಂಭೀರ್ ಅವರ ಭವಿಷ್ಯದ ಮೇಲೆ ಮುಂಬರುವ ಬಾಂಗ್ಲಾದೇಶ ಸರಣಿಯು ಮಹತ್ವದ ಪಾತ್ರ ವಹಿಸಲಿದೆ ಎಂದು ಚೋಪ್ರಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

ದಶಕಗಳ ಪ್ರಯತ್ನಕ್ಕೆ Trump ಕೊಳ್ಳಿ ಇಟ್ಟಿದ್ದಾರೆ: ಅಧ್ಯಕ್ಷನ ಆತುರ ನಿರ್ಧಾರಗಳೇ ಭಾರತ-ರಷ್ಯಾ-ಚೀನಾ ದೋಸ್ತಿಗೆ ಕಾರಣ!

ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್?: ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್: 63 ಪದಕ ಪಡೆದು ಮಿಂಚಿದ ಭಾರತದ ಕ್ರೀಡಾಪಟುಗಳು!

Cricket: 'Alcohol, Pornography...': ಡ್ರೀಮ್11 ಹೊರಕ್ಕೆ, ಜೆರ್ಸಿ ಸ್ಪಾನ್ಸರ್‌ಗೆ BCCI ಅರ್ಜಿ ಆಹ್ವಾನ, ಡೆಡ್‌ಲೈನ್ ನಿಗದಿ, ಅರ್ಹತೆ ಏನು?

SCROLL FOR NEXT