ಎಂಎಸ್ ಧೋನಿ-ಇರ್ಫಾನ್ ಪಠಾಣ್ 
ಕ್ರಿಕೆಟ್

'ನಾನು ಕೋಣೆಯಲ್ಲಿ Hookah ಇಡುತ್ತಿರಲಿಲ್ಲ': ಅವಕಾಶ ವಂಚಿತ ಇರ್ಫಾನ್ ಪಠಾಣ್, MS Dhoni ವಿರುದ್ಧ ಕೊಟ್ಟಿದ್ದ ಹೇಳಿಕೆ, Video ವೈರಲ್!

ಇರ್ಫಾನ್ ಪಠಾಣ್ ಪರೋಕ್ಷವಾಗಿ ಮಹೇಂದ್ರ ಸಿಂಗ್ ಧೋನಿ ತನಗೆ ಅನುಕೂಲಕರವಾಗಿರುವ ಆಟಗಾರರಿಗೆ ಅವಕಾಶ ನೀಡುತ್ತಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ಹೇಳಿಕೆಯು ವೈರಲ್ ಆಗಿದೆ.

ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅವರು ಎಂಎಸ್ ಧೋನಿ (MS Dhoni) ಬಗ್ಗೆ ಮಾತನಾಡಿರುವ ಹಳೆಯ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ ಪಠಾಣ್ ರಾಷ್ಟ್ರೀಯ ತಂಡದಿಂದ ತಮ್ಮ ದಿಢೀರ್ ನಿರ್ಗಮನ ಬಗ್ಗೆ ಮಾತನಾಡಿದ್ದು ಧೋನಿಯೊಂದಿಗೆ ಪಠಾಣ್ ನಡೆಸಿದ ಸಂಭಾಷಣೆಯನ್ನು ಸಹ ನೆನಪಿಸಿಕೊಂಡಿದ್ದಾರೆ. ಈ ವೇಳೆ ತಾನು ಹೇಗೆ ಅವಕಾಶ ವಂಚಿತನಾದೆ ಎಂಬುದನ್ನು ಸಹ ಪ್ರಸ್ತಾಪಿಸಿದ್ದಾರೆ. ನಾಯಕ ತನ್ನ ಬೌಲಿಂಗ್ ಬಗ್ಗೆ ಅತೃಪ್ತಿ ಹೊಂದಿದ್ದಾನೆಂದು ತಿಳಿದ ನಂತರ ತಾನು ಧೋನಿಯನ್ನು ಸಂಪರ್ಕಿಸಿದ್ದೆ ಎಂದು ಎಡಗೈ ವೇಗಿ ಇರ್ಫಾನ್ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಧೋನಿ ಈ ಹೇಳಿಕೆಗಳನ್ನು ತಳ್ಳಿಹಾಕಿದ್ದು ಅವುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದರು.

2008ರ ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ, ಇರ್ಫಾನ್ ಚೆನ್ನಾಗಿ ಬೌಲಿಂಗ್ ಮಾಡುತ್ತಿಲ್ಲ ಎಂಬ ಧೋನಿ ಹೇಳಿಕೆ ಮಾಧ್ಯಮಗಳಲ್ಲಿ ಬಂದಿತ್ತು. ಆದ್ದರಿಂದ ಸರಣಿಯಾದ್ಯಂತ ನಾನು ಚೆನ್ನಾಗಿ ಬೌಲಿಂಗ್ ಮಾಡಿದ್ದೇನೆ ಎಂದು ನನಗೆ ಅನಿಸಿತು. ಆದ್ದರಿಂದ ನಾನು ಧೋನಿಗೆ ಆ ಬಗ್ಗೆ ಕೇಳಿದೆ. ಕೆಲವೊಮ್ಮೆ, ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ತಿರುಚಲಾಗುತ್ತದೆ. ಆದ್ದರಿಂದ ನಾನು ಸಹ ಸ್ಪಷ್ಟನೆ ಕೇಳಲು ಬಯಸಿದ್ದೆ. ಅದಕ್ಕೆ ಮಹಿ ಭಾಯ್, 'ಇಲ್ಲ ಇರ್ಫಾನ್, ಹಾಗೆ ಏನೂ ಇಲ್ಲ, ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿದೆ' ಎಂದು ಹೇಳಿದರು. ನಾಯಕನಿಂದಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕ ಮೇಲೆ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಷ್ಟೇ. ಅಲ್ಲದೆ, ನೀವು ಮತ್ತೆ ಮತ್ತೆ ಸ್ಪಷ್ಟೀಕರಣಗಳನ್ನು ಕೇಳುತ್ತಿದ್ದರೆ, ಅದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ನಮಗೂ ಸ್ವಾಭಿಮಾನ ಇರುತ್ತಲ್ವಾ?

ಪಠಾಣ್ ಅವರು, ತಾನು ಮೈದಾನದ ಹೊರಗೆ ಯಾರನ್ನೂ ಸನ್ನೆಗಳ ಮೂಲಕ ಮೆಚ್ಚಿಸಲು ಪ್ರಯತ್ನಿಸುವ ಆಟಗಾರನಲ್ಲ ಎಂದು ಹೇಳಿದರು. ಸಹ ಆಟಗಾರನ ಕೋಣೆಯಲ್ಲಿ ಹುಕ್ಕಾ ಇಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾರದ್ದೋ ಕೋಣೆಯಲ್ಲಿ ಹುಕ್ಕಾ ಇಡುವ ಅಥವಾ ಅದರ ಬಗ್ಗೆ ಮಾತನಾಡುವ ಅಭ್ಯಾಸ ನನಗಿಲ್ಲ. ಎಲ್ಲರಿಗೂ ತಿಳಿದಿದೆ. ಕೆಲವೊಮ್ಮೆ ನೀವು ಅದರ ಬಗ್ಗೆ ಮಾತನಾಡದಿದ್ದರೆ, ಅದು ಉತ್ತಮ. ಒಬ್ಬ ಕ್ರಿಕೆಟಿಗನ ಕೆಲಸವೆಂದರೆ ಮೈದಾನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡುವುದು ಮತ್ತು ನಾನು ಅದರ ಮೇಲೆ ಕೇಂದ್ರೀಕರಿಸುತ್ತಿದ್ದೆ ಎಂದು ಹೇಳಿದ್ದಾರೆ.

ಇರ್ಫಾನ್ ಪಠಾಣ್ ಪರೋಕ್ಷವಾಗಿ ಮಹೇಂದ್ರ ಸಿಂಗ್ ಧೋನಿ ತನಗೆ ಅನುಕೂಲಕರವಾಗಿರುವ ಆಟಗಾರರಿಗೆ ಅವಕಾಶ ನೀಡುತ್ತಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ಹೇಳಿಕೆಯು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಾಯಕತ್ವದ ಬಗ್ಗೆ ಚರ್ಚೆ ಶುರುವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಅಕ್ಕಿ ಆಮದಿನ ಮೇಲೆ ಅಮೆರಿಕಾ ಕಣ್ಣು: ಮತ್ತೊಂದು ಸುಂಕಾಸ್ತ್ರ ಎಚ್ಚರಿಕೆ ಕೊಟ್ಟ ಟ್ರಂಪ್..!

ಬೆಳಗಾವಿ ಜಿಲ್ಲೆ ವಿಭಜನೆ: ಸಿಎಂ ಸಿದ್ದರಾಮಯ್ಯ ಭೇಟಿ ಮನವಿ ಸಲ್ಲಿಸಿದ ನಿಯೋಗ

ಇಂಡಿಗೋ ಅವಾಂತರ: 4500 ಕ್ಕೂ ಹೆಚ್ಚು ಬ್ಯಾಗ್ ಗಳು ವಾಪಸ್, 827 ಕೋಟಿ ರೂ. ಮರುಪಾವತಿ

ಬೆಳಗಾವಿ ಅಧಿವೇಶನ ಆರಂಭದಲ್ಲೇ ಕದನ ಸದ್ದು: 20 ಸಾವಿರ ರೈತರೊಂದಿಗೆ ಸುವರ್ಣ ಸೌಧಕ್ಕೆ ಇಂದು ಮುತ್ತಿಗೆ ಹಾಕಲು ಬಿಜೆಪಿ ಸಜ್ಜು

ರಾಜ್ಯದ ಅರಣ್ಯಗಳಲ್ಲಿ ಭಾರೀ ಪ್ರಮಾಣದ ಚಿನ್ನ, ಲಿಥಿಯಂ ನಿಕ್ಷೇಪ ಪತ್ತೆ; ಯಾವ ಜಿಲ್ಲೆಗಳಲ್ಲಿ ಗೊತ್ತಾ?

SCROLL FOR NEXT