ಏಷ್ಯಾಕಪ್ 2025ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು (ಭಾನುವಾರ) ಹೈ ಪ್ರೊಫೈಲ್ ಕ್ರಿಕೆಟ್ ಸ್ಪರ್ಧೆ ನಡೆಯಲಿದ್ದು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪಾಕಿಸ್ತಾನದ ಮುಖ್ಯ ಕೋಚ್ ಮೈಕ್ ಹಸ್ಸನ್, ತಂಡದ ಸ್ಪಿನ್ನರ್ ಮೊಹಮ್ಮದ್ ನವಾಜ್ ಅವರನ್ನು ವಿಶ್ವದ ಅತ್ಯುತ್ತಮ ಎಂದು ಕರೆದಿದ್ದಾರೆ. ಪಾಕಿಸ್ತಾನ ತರಬೇತುದಾರರ ಈ ಹೇಳಿಕೆಯು ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಪಂದ್ಯಕ್ಕೂ ಮುನ್ನ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಸ್ಸನ್ ಅವರ ಈ ಹೇಳಿಕೆಗೆ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಪ್ರತಿಕ್ರಿಯಿಸಿದ್ದಾರೆ.
ವಿಶ್ವ T20I ಶ್ರೇಯಾಂಕದಲ್ಲಿ 30ನೇ ಸ್ಥಾನದಲ್ಲಿದ್ದರೂ, ನವಾಜ್ ಅವರ ಅರ್ಹತೆಯ ಬಗ್ಗೆ ಹೆಸ್ಸನ್‌ಗೆ ನೀಡಿರುವ ಈ ಹೇಳಿಕೆ ಅಭಿಮಾನಿಗಳು ಮತ್ತು ಆಟದ ತಜ್ಞರಿಗೆ ಆಶ್ಚರ್ಯವನ್ನುಂಟುಮಾಡಿತು.
'ನಮ್ಮ ತಂಡದ ಸೌಂದರ್ಯ ಏನೆಂದರೆ ನಮ್ಮಲ್ಲಿ ಐದು ಸ್ಪಿನ್ನರ್‌ಗಳಿದ್ದಾರೆ. ನಮ್ಮಲ್ಲಿ ಸದ್ಯ ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರ್ ಆಗಿರುವ ಮೊಹಮ್ಮದ್ ನವಾಜ್ ಇದ್ದಾರೆ ಮತ್ತು ಅವರು ತಂಡಕ್ಕೆ ಮರಳಿದಾಗಿನಿಂದ ಕಳೆದ ಆರು ತಿಂಗಳುಗಳಲ್ಲಿ ಆ ಸ್ಥಾನದಲ್ಲಿದ್ದಾರೆ' ಎಂದು ಹಸ್ಸನ್ ಹೇಳಿದ್ದರು.
ಭಾರತದ ಸ್ಪಿನ್ನರ್‌ಗಳ ಬಗ್ಗೆ ಮಾತನಾಡಿದ ರಯಾನ್ ಟೆನ್ ಡೋಸ್ಚೇಟ್, ಹಸ್ಸನ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಲಿಲ್ಲವಾದರೂ, ಪ್ರತಿಯೊಬ್ಬರೂ ತಮ್ಮ ಆಟಗಾರರನ್ನು ಅವರ ಇಚ್ಛೆಯಂತೆ ಶ್ರೇಣೀಕರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಸೂಚಿಸಿದರು.
'ಈ ಸ್ಪರ್ಧೆಯಲ್ಲಿ ಸ್ಪಿನ್ನರ್‌ಗಳು ಬಹಳ ಮುಖ್ಯವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ನಿರೀಕ್ಷಿಸಿದಷ್ಟು ಹಿಡಿತ ಸಾಧಿಸಿಲ್ಲ ಮತ್ತು ವರ್ಷದ ಆರಂಭದಲ್ಲಿ ನಾವು ಇಲ್ಲಿದ್ದಾಗ ಇದ್ದಂತೆ ಖಂಡಿತವಾಗಿಯೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಸಾಮಾನ್ಯವಾಗಿ ಸ್ಪಿನ್ ಟಿ20 ಕ್ರಿಕೆಟ್‌ನ ಪ್ರಮುಖ ಭಾಗವಾಗಿದೆ ಮತ್ತು ಎರಡೂ ತಂಡಗಳು ಸಾಕಷ್ಟು ಸ್ಪಿನ್ ಕೊಡುಗೆಯನ್ನು ಹೊಂದಿವೆ. ಖಂಡಿತವಾಗಿಯೂ ನಮಗೆ ವರುಣ್, ಅಕ್ಷರ್ ಮತ್ತು ಕುಲದೀಪ್ ಬಗ್ಗೆ ನಂಬಿಕೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅರ್ಹರಾಗಿದ್ದಾರೆ ಮತ್ತು ಅವರು ತಮ್ಮ ಆಟಗಾರರನ್ನು ಎಲ್ಲಿ ಬೇಕಾದರೂ ಶ್ರೇಣೀಕರಿಸಬಹುದು' ಎಂದು ಅವರು ಸ್ಪರ್ಧೆಯ ಮುನ್ನಾದಿನ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.