ಯೂಸುಫ್ ಪಠಾಣ್ 
ಕ್ರಿಕೆಟ್

Yusuf Pathan ಭೂಗಳ್ಳ; ಸೆಲೆಬ್ರಿಟಿ ಆದರೇನು ಕ್ರಮಕೈಗೊಳ್ಳಿ: ಗುಜರಾತ್ ಹೈಕೋರ್ಟ್‌ ಮಹತ್ವದ ತೀರ್ಪು

ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ (Yusuf Pathan) ನನ್ನು ಗುಜರಾತ್‌ನ ವಡೋದರಾದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ (Yusuf Pathan) ನನ್ನು ಗುಜರಾತ್‌ನ ವಡೋದರಾದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ವಿಚಾರಣೆಯ ಸಮಯದಲ್ಲಿ ಸೆಲೆಬ್ರಿಟಿಗಳು ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಹೀಗಾಗಿ ಅವರಿಗೆ ರಿಯಾಯಿತಿಗಳನ್ನು ನೀಡುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹಾಗೆ ಮಾಡುವುದರಿಂದ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಅತಿಕ್ರಮಣವನ್ನು ಕ್ರಮಬದ್ಧಗೊಳಿಸಿದಂತೆ ಆಗುತ್ತದೆ ಎಂದು ಕೋರ್ಟ್ ಹೇಳಿದೆ.

ನ್ಯಾಯಾಲಯದ ತೀರ್ಪಿನ ನಂತರ, ಯೂಸುಫ್ ಪಠಾಣ್ ಆಕ್ರಮಿಸಿಕೊಂಡಿರುವ ನಿವೇಶನವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ನಿಗಮವು ಪ್ರಾರಂಭಿಸಿದೆ ಎಂದು ವಡೋದರಾ ಪುರಸಭೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಸ್ತವವಾಗಿ, ವಡೋದರಾ ಪುರಸಭೆಯು ಕಳೆದ ವರ್ಷ ಈ ನಿವೇಶನವನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ಇದರ ವಿರುದ್ಧ ಪಠಾಣ್ ಅರ್ಜಿ ಸಲ್ಲಿಸಿದ್ದರು.

ಮಾಹಿತಿಯ ಪ್ರಕಾರ, ಪಠಾಣ್ ತಮ್ಮ ಮನೆಯ ಸಮೀಪವಿರುವ ನಗರಸಭೆಯ 978 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು 2012ರಲ್ಲಿ ಸ್ವಾಧೀನಪಡಿಸಿಕೊಂಡು ಬಳಸಲು ಪ್ರಾರಂಭಿಸಿದ್ದರು. 2014ರಲ್ಲಿ ಹರಾಜು ಇಲ್ಲದೆ ನಿವೇಶನವನ್ನು ಮಾರಾಟ ಮಾಡುವ ನಗರಸಭೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಇದರ ಹೊರತಾಗಿಯೂ ಪಠಾಣ್ ಕುಟುಂಬವು ನಿವೇಶನವನ್ನು ಬಳಸುವುದನ್ನು ಮುಂದುವರೆಸಿತು. ಹೀಗಾಗಿ 2024ರ ಜೂನ್ ನಲ್ಲಿ ಕೌನ್ಸಿಲರ್ ದೂರಿನ ನಂತರ ನಗರಸಭೆಯು ಪಠಾಣ್‌ಗೆ ನೋಟಿಸ್ ನೀಡಿ ನಿವೇಶನವನ್ನು ಖಾಲಿ ಮಾಡುವಂತೆ ಕೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಠಾಣ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಯೂಸುಫ್ ಪಠಾಣ್ ಗುಜರಾತ್ ಹೈಕೋರ್ಟ್ ಅನ್ನು ಸಂಪರ್ಕಿಸಿ, ಮಾರುಕಟ್ಟೆ ಬೆಲೆಯನ್ನು ಪಾವತಿಸುವ ಮೂಲಕ ಭೂಮಿಯನ್ನು ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ವಿಎಂಸಿ ಅರ್ಜಿಯನ್ನು ವಿರೋಧಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

UKP 3ನೇ ಹಂತ: ನೀರಾವರಿ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟ ನಿರ್ಧಾರ

75ರ ವಸಂತಕ್ಕೆ ಕಾಲಿಡುತ್ತಿರುವ ನರೇಂದ್ರ ಮೋದಿ: ಜನರ ಪ್ರಧಾನಿಯ ಏಳು ಬೀಳುಗಳ ಸ್ಮರಣೀಯ ಪ್ರಯಾಣ

Operation Sindoor ವೇಳೆ ಮೂರನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ: ಟ್ರಂಪ್ ಮುಖವಾಡ ಬಯಲು ಮಾಡಿದ ಪಾಕ್ ಸಚಿವ

ಗುಜರಾತ್‌: ರಸ್ತೆ ಇಲ್ಲದೆ ಗರ್ಭಿಣಿಯನ್ನು ಜೋಲಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಕುಟುಂಬ; ದಾರಿ ಮಧ್ಯೆ ಮಹಿಳೆ ಸಾವು!

Gaza ವಶಕ್ಕೆ ಇಸ್ರೇಲ್ ಕಾರ್ಯಾಚರಣೆ; US ಕುಮ್ಮಕ್ಕು: IDF ದಾಳಿಯಲ್ಲಿ 62 ಪ್ಯಾಲೆಸ್ತೀನಿಯರು ಸಾವು, ಲಕ್ಷಾಂತರ ಮಂದಿ ಪಲಾಯನ!

SCROLL FOR NEXT