ವಿರೇಂದ್ರ ಸೆಹ್ವಾಗ್- ಅಭಿಷೇಕ್ ಶರ್ಮಾ online desk
ಕ್ರಿಕೆಟ್

ಗಾಯದ ಮೇಲೆ ಉಪ್ಪು ಸುರಿದ ಅಭಿಷೇಕ್ ಶರ್ಮಾ: ವೀರೇಂದ್ರ ಸೆಹ್ವಾಗ್ ಉಲ್ಲೇಖಿಸಿ ಪಾಕಿಸ್ತಾನದ ಕಾಲೆಳೆದ ಕ್ರಿಕೆಟಿಗ

ಸೋನಿ ಲಿವ್‌ನಲ್ಲಿ ಚಾಟ್ ಮಾಡುವಾಗ ಅಭಿಷೇಕ್, ಪಾಕಿಸ್ತಾನ ತಂಡ ಪ್ರಸ್ತುತ ಹೊಂದಿರುವ ಬೌಲರ್‌ಗಳ ಗುಣಮಟ್ಟದ ಬಗ್ಗೆ ದಿಟ್ಟ ಹೇಳಿಕೆ ನೀಡಿ, ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ.

ನವದೆಹಲಿ: ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಅಭಿಷೇಕ್ ಶರ್ಮಾ 74 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಭಾರತ ತಂಡ 172 ರನ್ ಗಳ ಗುರಿಯನ್ನು 7 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿದ ಅಭಿಷೇಕ್ 39 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಗಳಿಸಿದರು.

ಹ್ಯಾರಿಸ್ ರೌಫ್ ಮತ್ತು ಶಾಹೀನ್ ಶಾ ಅಫ್ರಿದಿ ಅವರಂತಹ ವೇಗಿಗಳನ್ನು ಎದುರಿಸಿದರೂ, ಅಭಿಷೇಕ್ ಈ ಸವಾಲಿನಿಂದ ವಿಚಲಿತರಾಗಲಿಲ್ಲ ಮತ್ತು ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರು. ಪಂದ್ಯದ ನಂತರ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಮಾತನಾಡಿದ ಅಭಿಷೇಕ್, ಪ್ರಸ್ತುತ ಪಾಕಿಸ್ತಾನಿ ಬೌಲರ್‌ಗಳು ತಮಗೆ ಸವಾಲೊಡ್ಡಲು ಏಕೆ ವಿಫಲರಾಗಿದ್ದಾರೆಂದು ವಿವರಿಸಿದ್ದಾರೆ.

ಸೋನಿ ಲಿವ್‌ನಲ್ಲಿ ಚಾಟ್ ಮಾಡುವಾಗ ಅಭಿಷೇಕ್, ಪಾಕಿಸ್ತಾನ ತಂಡ ಪ್ರಸ್ತುತ ಹೊಂದಿರುವ ಬೌಲರ್‌ಗಳ ಗುಣಮಟ್ಟದ ಬಗ್ಗೆ ದಿಟ್ಟ ಹೇಳಿಕೆ ನೀಡಿ, ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ. ಗಡಿಯಾಚೆಗಿನ ಭಾರತದ ಪ್ರತಿಸ್ಪರ್ಧಿಗಳು ವೀರೇಂದ್ರ ಸೆಹ್ವಾಗ್ ಅವರಂತಹ ಬ್ಯಾಟ್ಸ್ ಮನ್ ಗಳನ್ನು ಎದುರಿಸುವ ಬೌಲರ್‌ಗಳನ್ನು ಹೊಂದಿಲ್ಲ ಎಂದು ಅಭಿಷೇಕ್ ಭಾವಿಸಿದ್ದಾರೆ.

"ವಿರು ಪಾಜಿ ಎದುರಿಸಿದ ಬೌಲರ್‌ಗಳಂತಹ ಬೌಲರ್‌ಗಳು ಈಗ ಆ ತಂಡದಲ್ಲಿ ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅಭಿಷೇಕ್ ಸೋನಿ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

ಸಂಭಾಷಣೆಯ ಸಮಯದಲ್ಲಿ, ಸೆಹ್ವಾಗ್ ಅಭಿಷೇಕ್‌ಗೆ ಒಂದು ಪ್ರಮುಖ ಸಲಹೆ ನೀಡಿದ್ದು, ಅವರು 50 ಮತ್ತು 70 ರನ್ ಗಳನ್ನು ಶತಕಗಳಾಗಿ ಪರಿವರ್ತಿಸಲು ಪ್ರಾರಂಭಿಸಬೇಕು, ಇಲ್ಲದೇ ಇದ್ದಲ್ಲಿ ಮುಂದೆ ಹಾಗೆ ಮಾಡದಿದ್ದಕ್ಕೆ ವಿಷಾದಿಸುವ ಸಮಯ ಬರುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.

"ನೀವು 70 ತಲುಪಿದಾಗಲೆಲ್ಲಾ, 100 ನ್ನು ಕಳೆದುಕೊಳ್ಳಬೇಡಿ ಏಕೆಂದರೆ ಸುನಿಲ್ ಗವಾಸ್ಕರ್ ನನಗೆ ಹೇಳಿದರು - ನೀವು ನಿವೃತ್ತರಾದಾಗ, ನೀವು 70 ಅಥವಾ 80 ರಲ್ಲಿ ಔಟಾದ ಇನ್ನಿಂಗ್ಸ್ ನ್ನು ನೆನಪಿಸಿಕೊಳ್ಳುತ್ತೀರಿ. ನೀವು ಅವುಗಳನ್ನು ಪರಿವರ್ತಿಸಿದರೆ, ಬಹುಶಃ ನಿಮ್ಮ ವೃತ್ತಿಜೀವನವು ಹೆಚ್ಚಿನ ಶತಕಗಳನ್ನು ಹೊಂದಿರುತ್ತದೆ ಏಕೆಂದರೆ ಈ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ. ನೀವು ಚೆನ್ನಾಗಿ ಬ್ಯಾಟಿಂಗ್ ಮಾಡುವಾಗ, , ನಾಟ್ ಔಟ್ ಆಗಲು ಪ್ರಯತ್ನಿಸಿ ಅದು ಉತ್ತಮ" ಎಂಬ ಸಲಹೆಯನ್ನು ಸೆಹ್ವಾಗ್ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೋಹನ್ ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: SRK, ವಿಕ್ರಾಂತ್ ಮಾಸ್ಸೆ ಹಾಗೂ ರಾಣಿ ಮುಖರ್ಜಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರದಾನ!

'ಭಾರತ ವಿರುದ್ಧ ಗೆಲ್ಲಬೇಕಿದ್ರೆ ಪಾಕ್ ಸೇನಾ ಮುಖ್ಯಸ್ಥರೇ ಬ್ಯಾಟ್ ಹಿಡೀಬೇಕು': PCB ವಿರುದ್ಧ Imran Khan ಗರಂ!

Bengaluru: 'ನನ್ ಗಂಡ "ನಪುಂಸಕ".. 2 ಕೋಟಿ ಕೊಡ್ಸಿ...': ನವ ವಿವಾಹಿತೆ ಬೇಡಿಕೆ! ಆದ್ರೆ ಗಂಡನಿಂದಲೇ FIR

ಧರ್ಮಸ್ಥಳ ಪ್ರಕರಣ: ಅಗತ್ಯವಿದ್ದರೆ ಚಿನ್ನಯ್ಯ ಕುಟುಂಬಕ್ಕೆ ರಕ್ಷಣೆ ನೀಡಲಾಗುವುದು- ಪರಮೇಶ್ವರ; Video

ರಣಜಿ ಟ್ರೋಫಿ: ಸಂಭಾವ್ಯರ ಪಟ್ಟಿಯಲ್ಲಿ ಕೆ.ಎಲ್. ರಾಹುಲ್, ಪ್ರಸಿದ್ಧ್, ಕರುಣ್ ನಾಯರ್

SCROLL FOR NEXT