ಭಾರತ- ಪಾಕಿಸ್ತಾನ 
ಕ್ರಿಕೆಟ್

Asia Cup 2025: ಬಾಂಗ್ಲಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ; ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ಫೈನಲ್ ಹಣಾಹಣಿ!

ಮೆನ್ ಇನ್ ಬ್ಲೂ ತಂಡವು ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳ ಮೇಲೆ ಪ್ರಬಲ ದಾಖಲೆ ಹೊಂದಿದೆ.

ಏಷ್ಯಾ ಕಪ್ 2025ರ ಪ್ರಶಸ್ತಿಗಾಗಿ ಸೆಪ್ಟೆಂಬರ್ 28ರ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೆಣಸಲಿದೆ. ಗುರುವಾರ ಬಾಂಗ್ಲಾದೇಶ ವಿರುದ್ಧ 11 ರನ್‌ಗಳ ಜಯ ಸಾಧಿಸಿದ ನಂತರ ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸಿತು. ಶಾಹೀನ್ ಅಫ್ರಿದಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಮುನ್ನಡೆಸಿದರು. ಏಷ್ಯಾ ಕಪ್ ಫೈನಲ್ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯವಾಗಿದೆ.

ದುಬೈನ ಇಂಟರ್ ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿತು.

ಯುಎಇ ಮತ್ತು ಭಾರತ ವಿರುದ್ಧದ ಪಂದ್ಯದಲ್ಲಿ ಅಮೂಲ್ಯ ಪಾತ್ರಗಳನ್ನು ನಿರ್ವಹಿಸಿದ ಎಡಗೈ ಬೌಲರ್ ಶಾಹಿನ್ ಅಫ್ರಿದಿ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಅದೇ ರೀತಿ ಪ್ರದರ್ಶನ ನೀಡಿದರು. ರನ್ ರೇಟ್ ಹೆಚ್ಚಿಸಲು ಅವರು ದೊಡ್ಡ ಹೊಡೆತಗಳನ್ನು ಬಾರಿಸಿದರು. ಕ್ಯಾಚ್‌ಗಳನ್ನು ಕೈಬಿಟ್ಟ ಬಾಂಗ್ಲಾ ಅವರಿಗೆ ಎರಡು ಬಾರಿ ಅವಕಾಶ ನೀಡಿತು. ಆಫ್ರಿದಿ, 13 ಎಸೆತಗಳಲ್ಲಿ 19 ರನ್ ಗಳಿಸಿ ಪಾಕಿಸ್ತಾನ ಇನಿಂಗ್ಸ್‌ಗೆ ಉತ್ತಮ ವೇಗ ನೀಡಿದರು.

ಪಾಕ್ ನೀಡಿದ್ದ 136 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಪಾಕಿಸ್ತಾನ 11 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಏಷ್ಯಾ ಕಪ್ 2025ರ ಫೈನಲ್‌ಗೆ ಲಗ್ಗೆ ಇಟ್ಟಿತು.

ಬೌಲಿಂಗ್‌ನಲ್ಲೂ ಮಿಂಚಿದ 25 ವರ್ಷದ ಶಾಹೀನ್ ಮೊದಲ ಓವರ್‌ನಲ್ಲಿ ಪರ್ವೇಜ್ ಎಮನ್ ಅವರನ್ನು ಔಟ್ ಮಾಡಿದರು ಮತ್ತು ನಂತರ ಪವರ್‌ಪ್ಲೇ ಒಳಗೆ ಟೌಹ್ರಿದ್ ಹೃದಯೋಯ್ ಅವರನ್ನು ಔಟ್ ಮಾಡಿದರು. ಇದು ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ನಂತರ ಶಮೀಮ್ ಹೊಸೈನ್ ಅವರ ವಿಕೆಟ್ ಪಡೆದರು. ಆಫ್ರಿದಿ 3/17 ಗಳಿಸುವ ಮೂಲಕ ಪಾಕಿಸ್ತಾನದ ಗೆಲುವಿಗೆ ಕಾರಣರಾದರು.

ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡವು ಪಾಕಿಸ್ತಾನವನ್ನು ಫೈನಲ್‌ನಲ್ಲಿ ಎದುರಿಸಲಿದೆ. 41 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ಭಾರತ vs ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿಯೇ ಇಲ್ಲ. ಇದು ಅಪರೂಪದ ಸಂದರ್ಭವಾಗಿದೆ. ಮೆನ್ ಇನ್ ಬ್ಲೂ ತಂಡವು ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳ ಮೇಲೆ ಪ್ರಬಲ ದಾಖಲೆ ಹೊಂದಿದೆ. ಪಾಕಿಸ್ತಾನವು ಏಷ್ಯಾಕಪ್‌ನ T20 ಆವೃತ್ತಿಯನ್ನು ಎಂದಿಗೂ ಗೆದ್ದಿಲ್ಲ. ಆದರೆ, ಈ ಬಾರಿ ಗಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೈಸೂರು: ಪಂಚಭೂತಗಳಲ್ಲಿ ಸಾಹಿತಿ ಎಸ್‌.ಎಲ್‌ ಭೈರಪ್ಪ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ 'ಅಕ್ಷರ ಮಾಂತ್ರಿಕ'ನ ಅಂತ್ಯಕ್ರಿಯೆ

'RJD ಯಾವತ್ತೂ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ': ಬಿಹಾರ ಮಹಿಳೆಯರಿಗೆ ಪ್ರಧಾನಿ ಮೋದಿ ಕರೆ

ಲಡಾಖ್ ಘರ್ಷಣೆ: Sonam Wangchuk ಬಂಧನ

Indore: Patch Up ನಿರಾಕರಿಸಿದ ಮಾಜಿ ಪ್ರೇಯಸಿಗೆ ಸ್ಕೂಟರ್ ನಿಂದ ಗುದ್ದಿದ 'ಭೂಪ', Video Viral

ಯಾದಗಿರಿ: ಪತ್ನಿ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಂದೆ; ಮತ್ತೊಂದು ಮಗುವಿನ ಸ್ಥಿತಿ ಗಂಭೀರ!

SCROLL FOR NEXT