ಭಾರತ vs ಪಾಕಿಸ್ತಾನ 
ಕ್ರಿಕೆಟ್

Asia Cup 2025 Final: ಭಾರತ vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ಪಂದ್ಯದ ಟಿಕೆಟ್‌ ಸೋಲ್ಡ್ ಔಟ್!

ಈ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ ಮತ್ತು T20I ಗಳಲ್ಲಿ ಪ್ರಬಲ ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ.

ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 28) ಮುಖಾಮುಖಿಯಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗಳು ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿಯೇ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಇದು ಪ್ರಸಾರಕರ ಕನಸು ಕೂಡ ಹೌದು.

ಆಶ್ಚರ್ಯಕರವಾಗಿ, 28,000 ಆಸನಗಳಿರುವ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಸಂಘಟಕರು ದೃಢಪಡಿಸಿದ್ದಾರೆ. ಇದರಿಂದಾಗಿ ಪಂದ್ಯವು ಹೌಸ್-ಫುಲ್ ಆಗಲಿದೆ. ಏಷ್ಯಾ ಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. 2017ರ ಏಕದಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಎರಡೂ ದೇಶಗಳ ನಡುವಿನ ಮೊದಲ ಬಹು-ರಾಷ್ಟ್ರೀಯ ಟೂರ್ನಮೆಂಟ್ ಫೈನಲ್ ಇದಾಗಿದೆ.

ಜಿಯೋಸೂಪರ್ ನ್ಯೂಸ್ ಪ್ರಕಾರ, ಉಭಯ ತಂಡಗಳ ನಡುವಿನ ಹಿಂದಿನ ಪಂದ್ಯಗಳು ಈಗಾಗಲೇ ಭಾರಿ ಜನಸಂದಣಿಯನ್ನು ಸೆಳೆದಿದ್ದವು. ಸೆಪ್ಟೆಂಬರ್ 14 ರಂದು ನಡೆದ ಗುಂಪು ಹಂತದ ಪಂದ್ಯವನ್ನು 20,000 ಅಭಿಮಾನಿಗಳು ವೀಕ್ಷಿಸಿದರು. ಆದರೆ, ಸೆಪ್ಟೆಂಬರ್ 21 ರಂದು ನಡೆದ ಸೂಪರ್ ಫೋರ್ ಪಂದ್ಯಕ್ಕೆ 17,000 ಅಭಿಮಾನಿಗಳು ಸಾಕ್ಷಿಯಾಗಿದ್ದರು. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದೀಗ ಪಾಕಿಸ್ತಾನ ಫೈನಲ್ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿದ್ದರೆ, ಗೆಲುವಿನ ಓಟವನ್ನು ಮುಂದುವರಿಸುವ ತವಕದಲ್ಲಿ ಭಾರತವಿದೆ.

ಈ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ ಮತ್ತು T20I ಗಳಲ್ಲಿ ಪ್ರಬಲ ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ. ಪಾಕ್ ಜೊತೆಗಿನ 15 ಮುಖಾಮುಖಿಗಳಲ್ಲಿ 12 ರಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಎಲ್ಲ ವಿಭಾಗಗಳಲ್ಲಿ ಸಮತೋಲನದಿಂದ ಕೂಡಿದೆ. ಆದರೂ, ಅಭಿಷೇಕ್ ಶರ್ಮಾ ಮೇಲೆ ಅತಿಯಾದ ಅವಲಂಬನೆ ಇದೆ. ಈಮಧ್ಯೆ, ಜಸ್ಪ್ರೀತ್ ಬುಮ್ರಾ ಉತ್ತಮ ಪ್ರದರ್ಶನ ನೀಡಿಲ್ಲ.

ಇತ್ತ ಪಾಕಿಸ್ತಾನ ತಂಡವು ಫೈನಲ್‌ ತಲುಪಿದ್ದರೂ, ಈ ಪಂದ್ಯಾವಳಿಯಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲ. ಸೂಪರ್ ಫೋರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 11 ರನ್‌ಗಳ ಜಯ ಸಾಧಿಸಿ ಭಾನುವಾರದ ನಿರ್ಣಾಯಕ ಪಂದ್ಯಕ್ಕೆ ಲಗ್ಗೆಯಿಟ್ಟಿತು. ಪಾಕಿಸ್ತಾನ ಟ್ರೋಫಿಯನ್ನು ಎತ್ತಿ ಹಿಡಿಯಬೇಕಾದರೆ, ಅವರ ಬ್ಯಾಟಿಂಗ್ ಘಟಕವು ಸಾಮೂಹಿಕವಾಗಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಮತ್ತು ಭಾರತದ ಉತ್ತಮ ಫಾರ್ಮ್‌ನಲ್ಲಿರುವ ಅಗ್ರ ಕ್ರಮಾಂಕದ ವಿರುದ್ಧ ಆರಂಭಿಕ ಪ್ರಗತಿಯನ್ನು ಕಂಡುಕೊಳ್ಳಬೇಕಾಗುತ್ತದೆ.

ನಿಯಮಿತ ಟಿಕೆಟ್‌ಗಳು ಮುಗಿದಿದ್ದರೂ, ಕೆಲವು ಪ್ರೀಮಿಯಂ ಆತಿಥ್ಯ ಸೀಟುಗಳು ಅಧಿಕೃತ ಸೈಟ್‌ನಲ್ಲಿ ಲಭ್ಯವಿದೆ. ಸ್ಕೈ ಬಾಕ್ಸ್ - ಲೌಂಜ್ ಬೆಲೆ USD 2,267.03 (ರೂ 2 ಲಕ್ಷ), ಬೌಂಡರಿ ಲೌಂಜ್ ಪ್ಯಾಕೇಜ್ USD 1,700.27 (ರೂ 1.5 ಲಕ್ಷ), ಮತ್ತು ಗ್ರ್ಯಾಂಡ್ ಲೌಂಜ್ ಅನುಭವ USD 991.83 (ರೂ 88 ಸಾವಿರ) ಆಗಿದೆ. ದುಬೈನಲ್ಲಿ ಐತಿಹಾಸಿಕ ರಾತ್ರಿಗೆ ಸಾಕ್ಷಿಯಾಗುವ ಈ ಪಂದ್ಯದ ಟಿಕೆಟ್‌ಗಾಗಿ ಅಭಿಮಾನಿಗಳು ಪರದಾಡುತ್ತಿರುವಾಗ ಇವುಗಳು ಕೂಡ ಬೇಗನೆ ಮಾರಾಟವಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪು ಕೋಟೆ ಬಳಿ ಕಾರು ಸ್ಫೋಟ 'ಭಯೋತ್ಪಾದಕ ದಾಳಿ': ಕೇಂದ್ರ ಸರ್ಕಾರ

ಧರ್ಮಸ್ಥಳ ಕೇಸ್: ತಿಮರೋಡಿ, ಗಿರೀಶ್ ಮಟ್ಟಣನವರ್ ತಂಡಕ್ಕೆ ಹೈಕೋರ್ಟ್ ಶಾಕ್; SIT ತನಿಖೆಗೆ ಅನುಮತಿ!

'BJP, ECಯಿಂದ ಬಹಿರಂಗವಾಗಿಯೇ ಮತಗಳ್ಳತನ': ಒಬ್ಬ ವ್ಯಕ್ತಿಯಿಂದ ಹಲವು ಕಡೆ ಮತದಾನ; ಪೋಸ್ಟ್ ಹಂಚಿಕೊಂಡ ರಾಹುಲ್

ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆದರೆ ತಪ್ಪೇನು?- DK Shivakumar; ಸಿಎಂ ಹುದ್ದೆ ಕನಸು ಕೈಬಿಟ್ಟ DCM?

GST ಕಡಿತ, ಆಹಾರ ವಸ್ತುಗಳ ಬೆಲೆ ಇಳಿಕೆ; ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಹಣದುಬ್ಬರ

SCROLL FOR NEXT