ಲಲಿತ್ ಮೋದಿ, ಸಂಜೀವ್ ಗೋಯೆಂಕಾ 
ಕ್ರಿಕೆಟ್

ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್ ಮಾಡ್ತಿದ್ದೆ: ಲಲಿತ್ ಮೋದಿ

ನಾನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ IP ಅನ್ನು ಮಾಡಿದ್ದೇನೆ. ಪ್ರತಿ ವರ್ಷವೂ ಇದು ಆಗಬಾರದು. ನಾನು ಇನ್ನೂ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರೆ, ತಕ್ಷಣದಿಂದಲೇ ತಂಡದ ಮಾಲೀಕತ್ವವನ್ನು ರದ್ದುಪಡಿಸುತ್ತಿದ್ದೆ ಎಂದು ಲಲಿತ್ ಮೋದಿ ಹೇಳಿದ್ದಾರೆ.

ನವದೆಹಲಿ: ಬುಧವಾರ ನಡೆದ ಐಪಿಎಲ್ 2026 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಬ್ ಪಂತ್ ಅವರೊಂದಿಗೆ ಸಂಜೀವ್ ಗೋಯೆಂಕಾ ನಡುವಿನ ಚರ್ಚೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. LSG ಮಾಲೀಕ ಗೋಯೆಂಕಾ ಅವರು ಪಂದ್ಯಕ್ಕೂ ಮುನ್ನಾ, ತದನಂತರ ತನ್ನ ತಂಡದೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

ಐಪಿಎಲ್ 2024 ರ ಸಮಯದಲ್ಲಿ, ಆಗಿನ LGS ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿತ್ತು. ಬುಧವಾರ ನಡೆದ ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಅವರೊಂದಿಗೆ ಸಂಜೀವ್ ಗೋಯೆಂಕಾ ತೀವ್ರವಾದ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತ ವಾಘನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಲಕ್ನೋ ಐಪಿಎಲ್‌ನ ಮಾಲೀಕ ಡಾ. ಸಂಜೀವ್‌ಗೋಯೆಂಕಾ ಅವರು ಸಂಪೂರ್ಣ ಸೋತವರು ಮತ್ತು ಅತ್ಯುನ್ನತ ಶ್ರೇಣಿಯ ಜೋಕರ್ ಎಂದು ನಾನು ನಿಮಗೆ ಹೇಳಿದ್ದೇನೆ. ಅವರ ವರ್ತನೆಯಿಂದ ನಾನು ಗಂಭೀರವಾಗಿ ಮುಜುಗರಕ್ಕೊಳಗಾಗಿದ್ದೇನೆ. ನಾನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ IP ಅನ್ನು ಮಾಡಿದ್ದೇನೆ. ಪ್ರತಿ ವರ್ಷವೂ ಇದು ಆಗಬಾರದು. ನಾನು ಇನ್ನೂ ಅಧ್ಯಕ್ಷ ಮತ್ತು ಕಮಿಷನರ್ ಆಗಿದ್ದರೆ, ತಕ್ಷಣದಿಂದಲೇ ತಂಡದ ಮಾಲೀಕತ್ವವನ್ನು ರದ್ದುಪಡಿಸುತ್ತಿದ್ದೆ ಎಂದು ಹೇಳಿದ್ದಾರೆ.

ಆತ ಸಂಪೂರ್ಣ ಆಡಂಬರದ ಕೋಡಂಗಿ. ಈ ಸಮಸ್ಯೆಗೆ ಫ್ರ್ಯಾಂಚೈಸ್ ಒಪ್ಪಂದದಲ್ಲಿ ಒಂದು ಷರತ್ತು ಇದ್ದು, BCCI ಇದನ್ನು ಜಾರಿಗೊಳಿಸಿ, ಸಂಜೀವ್ ಗೋಯೆಂಕಾ ಮಾಲೀಕತ್ವ ರದ್ದುಪಡಿಸಿ, ಎಲ್ಲಕ್ಕಿಂತ ಹೆಚ್ಚಾಗಿ ಸಮಗ್ರತೆಯನ್ನು ಕಾಪಾಡಿಕೊಳ್ಳಿ .ಅಭಿಮಾನಿಗಳು ಮತ್ತು ಆಟಗಾರರು ನೆನಪಿಸಿಕೊಳ್ಳುತ್ತಾರೆ ಎಂದು ಲಲಿತ್ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಘಟನೆ ವೈರಲ್ ಆದ ನಂತರ, LSG ಸ್ಪಷ್ಟೀಕರಣವನ್ನು ನೀಡಿದ್ದು, ನೀವು ನೋಡುವುದೆಲ್ಲವೂ ನಿಜವಾದ ಕಥೆಯಲ್ಲ. ಕ್ಯಾಮರಾಗಳು ಕತ್ತರಿಸದಿದ್ದಲ್ಲಿ ಫಿಲ್ಟರ್ ಮಾಡದ ಪಂದ್ಯದ ನಂತರದ ವಿಡಿಯೋಗಳು ಇಲ್ಲಿವೆ ಎಂದು ಫ್ರ್ಯಾಂಚೈಸಿ ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!