ಟಿಮ್ ಡೇವಿಡ್ 
ಕ್ರಿಕೆಟ್

IPL 2026: ವಾಂಖೆಡೆಯಲ್ಲಿ ಹೈಡ್ರಾಮಾ; ದಿಢೀರ್ ಚೆಂಡು ಬದಲಿಸಿದ ಅಂಪೈರ್, Tim David​ಗೆ ಡೌಟ್..; ಮುಂದೇನಾಯ್ತು? Video

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿತ್ತು.

ಮುಂಬೈ: ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಿಮ್ ಡೇವಿಡ್ ಮತ್ತು ಅಂಪೈರ್ ಗಳ ನಡುವೆ ಕೆಲ ಕ್ಷಣಗಳ ಕಾಲ ಗೊಂದಲ ಏರ್ಪಟ್ಟಿತ್ತು.

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ದ ಆರ್ ಸಿಬಿ 18 ರನ್ ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿತ್ತು. ಇದನ್ನು ಬೆನ್ನುಹತ್ತಿದ ಮುಂಬೈ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ 18 ರನ್ ಅಂತರದಲ್ಲಿ ಗೆದ್ದು ಬೀಗಿತು.

ದಿಢೀರ್ ಚೆಂಡು ಬದಲಿಸಿದ ಅಂಪೈರ್

ಇನ್ನು ಆರ್ ಸಿಬಿ ಇನ್ನಿಂಗ್ಸ್ ವೇಳೆ ಅಂಪೈರ್ ಗಳು ಚೆಂಡು ಬದಲಿಸಿದ್ದರಿಂದ ಅನುಮಾನಗೊಂಡ ಟಿಮ್ ಡೇವಿಡ್ ಚೆಂಡನ್ನು ಒಂದೇ ಸಮನೆ ಪರೀಕ್ಷಿಸಿದರು. ಇದು ಅಂಪೈರ್ ಗಳ ಕೆಂಗಣ್ಣಿಗೆ ಗುರಿಯಾಯಿತು. ಅಂಪೈರ್ ಗಳು ಪದೇ ಪದೇ ಚೆಂಡನ್ನು ನೀಡುವಂತೆ ಕೇಳಿದರೂ ಟಿಮ್ ಡೇವಿಡ್ ಚೆಂಡನ್ನು ನೀಡದೇ ಚೆಂಡನ್ನು ಪದೇ ಪದೇ ಪರೀಕ್ಷಿಸುತ್ತಿದ್ದರು.

ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಔಟ್‌ಫೀಲ್ಡ್‌ನಲ್ಲಿ ತೇವಾಂಶ ಇದ್ದ ಕಾರಣ ಚೆಂಡು ಒದ್ದೆಯಾಗಿತ್ತು ಹಾಗಾಗಿ ಅಂಪೈರ್‌ಗಳು ನಿಯಮದಂತೆ ಹಳೆಯ ಚೆಂಡಿನ ಬಾಕ್ಸ್ ತರಿಸಿ ಹೊಸ ಚೆಂಡನ್ನು ಆಯ್ಕೆ ಮಾಡಿದು ಬೌಲ್‌ ಮಾಡಲು ತಿಳಿಸಿದರು.. ಅದೇ ವೇಳೆ ಆರ್‌ಸಿಬಿ ಬ್ಯಾಟರ್‌ ಟಿಮ್‌ ಡೇವಿಡ್‌ ಓಡಿ ಬಂದು ಅಂಪೈರ್‌ ಆಯ್ಕೆ ಮಾಡಿದ ಬಾಲನ್ನೇ ಕೈಗೆತ್ತಿಕೊಂಡ ಟಿಮ್ ಡೇವಿಡ್, ಅದರ ಆಕಾರ ಮತ್ತು ತೂಕವನ್ನು ಪದೇ ಪದೇ ತಿರುಗಿಸಿ ಪರೀಕ್ಷಿಸಲು ಶುರು ಮಾಡಿದರು.

ಆಗಿದ್ದೇನು?

ಆರ್ ಸಿಬಿ ಇನ್ನಿಂಗ್ಸ್ ನ 18 ಓವರ್ ನಲ್ಲಿ ಟಿಮ್ ಡೇವಿಡ್ ಹಾರ್ದಿಕ್ ಪಾಂಡ್ಯಗೆ ಸಿಕ್ಸರ್ ಬಾರಿಸಿದ ನಂತರ ಚೆಂಡು ಹಳೆಯದಾಗಿದ್ದರಿಂದ ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದ್ದರು. ಹೊಸ ಚೆಂಡನ್ನು ಪರಿಶೀಲಿಸಲು ಬದಲಿ ಚೆಂಡುಗಳನ್ನು ತಂದಾಗ, ಡೇವಿಡ್ ಅದನ್ನು ಕೈಗೆ ತೆಗೆದುಕೊಂಡು ತಪಾಸಣೆ ನಡೆಸಿದರು.

ಈ ವೇಳೆ ಅಂಪೈರ್‌ಗಳಾದ ವೀರೇಂದ್ರ ಶರ್ಮಾ ಮತ್ತು ಸ್ವರೂಪಾನಂದ್ ಕಣ್ಣೂರ್ ಅವರು ಚೆಂಡನ್ನು ಮರಳಿ ನೀಡುವಂತೆ ಹಲವು ಬಾರಿ ಹೇಳಿದರೂ ಡೇವಿಡ್ ಕೇಳಿರಲಿಲ್ಲ. ಅಂತಿಮವಾಗಿ ಅಂಪೈರ್‌ಗಳು ಡೇವಿಡ್‌ಗೆ ಎಚ್ಚರಿಕೆ ನೀಡಿದಕೆ ಚೆಂಡನ್ನು ವಾಪಸ್ಸ್‌ ನೀಡಿದರು.

ಟಿಮ್ ಡೇವಿಡ್ ಗೆ ಅಂಪೈರ್ ಎಚ್ಚರಿಕೆ

ಅಂಪೈರ್ ಸ್ವರೂಪಾನಂದ್ ಕಣ್ಣೂರ್ ಅವರು ಹೇಯ್‌ ಈಗಾಗಲೇ ಸಮಯ ಅಗುತ್ತಿದೆ ಚೆಂಡನು ಕೊಡಿ ಎಂದು ಪದೇ ಪದೇ ಕೇಳಿದರು. ಟಿಮ್‌ ಡೇವಿಡ್‌ ಮಾತ್ರ ಡೇವಿಡ್ ಚೆಂಡಿನ ಆಕಾರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಪರೀಕ್ಷಿಸುತ್ತಿದ್ದರು ಚೆಂಡನ್ನು ಪರೀಕ್ಷೆ ಮಾಡುವುದರಲ್ಲಿ ಬ್ಯುಸಿ ಆಗಿದ್ದರು. ಇದರಿಂದ ಕೋಪಗೊಂಡ ಅಂಪೈರ್‌ಗಳಾದ ಸ್ವರೂಪಾನಂದ್ ಮತ್ತು ವೀರೇಂದರ್ ಶರ್ಮಾ ಟಿಮ್‌ ಡೇವಿಡ್‌ ಎಚ್ಚರಿಕೆ ನೀಡಿದರು. ಅಲ್ಲದೆ ಡೇವಿಡ್‌ಗೆ ಮೈದಾನದ ಶಿಸ್ತಿನ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ರೋಹಿತ್ ಶರ್ಮಾ ಎಂಟ್ರಿ

ಈ ವೇಳೆ ರೋಹಿತ್‌ ಶರ್ಮಾ ಟಿಮ್‌ ಡೇವಿಡ್‌ ಏನೋ ನಿಂದು ಅನ್ನೋ ತರ ನಗು ಬೀರಿದರು. ಟಿಮ್ ಡೇವಿಂಡ್ ಪ್ರಸಂಗದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಲ್ಲಾಳೆ, Video!

ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಆಫರ್; ಹೊಸ ದಾಳ ಉರುಳಿಸಿದ 'ದಳಪತಿ'

Toxic: ಕೊನೆಗೂ ಬಿಡುಗಡೆ ಆಯ್ತು ‘ಟಾಕ್ಸಿಕ್’ ಟ್ರೈಲರ್; ಡಾರ್ಕ್‌ ಗ್ಯಾಂಗ್‌ಸ್ಟರ್‌ ಲೋಕಕ್ಕೆ ರಾಕಿಂಗ್‌ ಸ್ಟಾರ್ ಎಂಟ್ರಿ, ಫ್ಯಾನ್ಸ್‌ ಫಿದಾ!

ಭಾರತೀಯ ಅಭಿಮಾನಿಗಳಿಗೆ ಶಾಕ್: ಭಾರತಕ್ಕೂ ಮೊದಲು ವಿದೇಶದಲ್ಲಿ Ramayana ಚಿತ್ರ ಬಿಡುಗಡೆ; ಕಾರಣ ಬಿಚ್ಚಿಟ್ಟ ನಿರ್ಮಾಪಕ!