ಕುಶಿತಾ ಕಲ್ಲಾಪು 
ಕ್ರಿಕೆಟ್

ಮುಖ್ಯಮಂತ್ರಿಗಾಗಿ ಕಾಯ್ದಿರಿಸಿದ IPL ಪಂದ್ಯದ ಟಿಕೆಟ್‌ ಮಾಡೆಲ್ ಕೈಯಲ್ಲಿ; ವಿವಾದ ಸೃಷ್ಟಿ!

ಏಪ್ರಿಲ್ 18ರ ಶನಿವಾರ ಉಪ್ಪಲ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು CSK ನಡುವಿನ IPL ಪಂದ್ಯದ ಮುಖ್ಯಮಂತ್ರಿಕಾಗಿ ಕಾಯ್ದಿರಿಸಿದ್ದ ಟಿಕೆಟ್ ಗಳು ನಟಿಯೊಬ್ಬರು ಹಿಡಿದುಕೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಹೈದರಾಬಾದ್: ಏಪ್ರಿಲ್ 18ರ ಶನಿವಾರ ಉಪ್ಪಲ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದ ಮುಖ್ಯಮಂತ್ರಿಕಾಗಿ ಕಾಯ್ದಿರಿಸಿದ್ದ ಟಿಕೆಟ್ ಗಳು ನಟಿಯೊಬ್ಬರು ಹಿಡಿದುಕೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಶಿಷ್ಟಾಚಾರದಡಿಯಲ್ಲಿ ಬರಬೇಕಾದ ಟಿಕೆಟ್‌ಗಳು ಸಾಮಾಜಿಕ ಮಾಧ್ಯಮ ಪ್ರಭಾವಿಯ ಕೈಯಲ್ಲಿ ಕಾಣಿಸಿಕೊಂಡಿದ್ದು ಹಲವು ಅನುಮಾನಗಳನ್ನು ಮೂಡಿಸಿದೆ. ನಟಿ, ಪ್ರಭಾವಿ ಕುಶಿತಾ ಕಲ್ಲಾಪು (kushita kallapu) ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕೆಲವು ಟಿಕೆಟ್‌ಗಳ ಫೋಟೋಗಳು ಈ ವಿವಾದಕ್ಕೆ ಕಾರಣವಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸನ್‌ರೈಸರ್ಸ್‌ನಿಂದ ಉಡುಗೊರೆ ಎಂದು ಟಿಕೆಟ್‌ಗಳ ಮೇಲೆ ಸ್ಪಷ್ಟವಾಗಿ ಬರೆಯಲಾಗಿದೆ. ಪ್ರತಿ ಟಿಕೆಟ್‌ನ ಬೆಲೆ ಸರಿಸುಮಾರು 30,000 ರಿಂದ ರೂ. 40,000 ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇವು ಸಾಮಾನ್ಯವಾಗಿ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ ಕಚೇರಿ (ಸಿಎಂಒ) ತಲುಪುತ್ತವೆ.

ಕುಶಿತಾ ಈ ವಿಶೇಷ ಪಾಸ್ ಹಿಡಿದಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಚರ್ಚೆಗಳನ್ನು ಹುಟ್ಟುಹಾಕಿವೆ. ಸರ್ಕಾರಿ ವಲಯದಿಂದ ಯಾರಾದರೂ ಆಕೆಗೆ ಈ ಟಿಕೆಟ್‌ಗಳನ್ನು ನೀಡಿದ್ದಾರೆಯೇ? ಅಥವಾ ಸನ್‌ರೈಸರ್ಸ್ ಫ್ರಾಂಚೈಸಿಯಿಂದ ನೇರವಾಗಿ ಹೋಗಿದೆಯೇ? ಮುಖ್ಯಮಂತ್ರಿಗೆ ನಿಗದಿಪಡಿಸಿದ ಆಸನಗಳಲ್ಲಿ ಪ್ರಭಾವಿಗಳು ಕುಳಿತುಕೊಳ್ಳುವ ಬಗ್ಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ಟೀಕೆ

ಬಿಆರ್‌ಎಸ್ ಸಾಮಾಜಿಕ ಮಾಧ್ಯಮ ವಿಭಾಗವು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ. ಜನರ ಆಡಳಿತ ಎಂದರೆ ಇದೇನಾ? ಮುಖ್ಯಮಂತ್ರಿಗೆ ನೀಡಲಾದ ಪಾಸ್‌ಗಳು ಹೊರಗಿನವರ ಕೈಯಲ್ಲಿವೆ? ನೀವು ಈ ರೀತಿ ಮಾಡುತ್ತಿದ್ದೀರಾ? ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅವರು ಸರ್ಕಾರವನ್ನು ವ್ಯಂಗ್ಯವಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!