ನುವಾನ್ ತುಷಾರ 
ಕ್ರಿಕೆಟ್

IPL 2026: ಪ್ರಕರಣ ಹಿಂಪಡೆದ ನುವಾನ್ ತುಷಾರ; ಶ್ರೀಲಂಕಾ ಕ್ರಿಕೆಟ್‌ಗೆ ಕ್ಷಮೆಯಾಚಿಸಿದ RCB ಆಟಗಾರ!

ಈ ಹಿಂದೆ 2024 ಮತ್ತು 2025 ರಲ್ಲಿ ಆಡಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತುಷಾರ ಆಡಬೇಕಿತ್ತು. 2025ರಲ್ಲಿ ಆರ್‌ಸಿಬಿ ಈ ಶ್ರೀಲಂಕಾ ಆಟಗಾರನನ್ನು ₹1.6 ಕೋಟಿಗೆ ಖರೀದಿಸಿತು.

ಐಪಿಎಲ್‌ನಲ್ಲಿ ಸ್ಪರ್ಧಿಸಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡದಿದ್ದಕ್ಕಾಗಿ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ವೇಗಿ ನುವಾನ್ ತುಷಾರ, ಗುರುವಾರ ಆಡಳಿತ ಮಂಡಳಿ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಂಡಿದ್ದಾರೆ. 2022 ರಿಂದ 30 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಆಟಗಾರ, ಫಿಟ್‌ನೆಸ್ ಪರೀಕ್ಷೆಗಳಲ್ಲಿ ವಿಫಲರಾಗಿರುವುದಾಗಿ ಹೇಳಿ ಎಸ್‌ಎಲ್‌ಸಿ ತನಗೆ ಎನ್‌ಒಸಿ ನೀಡಲು ನಿರಾಕರಿಸಿದೆ ಎಂದು ದೂರಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ನಲ್ಲಿನ ಹೆಚ್ಚಿನ ಪಂದ್ಯಗಳು ಈಗಾಗಲೇ ಪೂರ್ಣಗೊಂಡಿರುವುದರಿಂದ, ಈ ಪ್ರಕರಣವನ್ನು ತಮ್ಮ ಕಕ್ಷಿದಾರರು ಹಿಂಪಡೆಯಲು ಬಯಸಿದ್ದಾರೆ ಎಂದು ನುವಾನ್ ತುಷಾರ ಅವರ ವಕೀಲರು ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದರು. ಅವರು ಎಸ್‌ಎಲ್‌ಸಿಗೆ ಕ್ಷಮೆಯಾಚಿಸಿದರು ಮತ್ತು ಪ್ರಕರಣವನ್ನು ಹಿಂಪಡೆಯಲು ಇಚ್ಛೆಯನ್ನು ಸೂಚಿಸಿದರು.

ಈ ಹಿಂದೆ 2024 ಮತ್ತು 2025 ರಲ್ಲಿ ಆಡಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಎಸ್‌ಬಿ) ಪರ ತುಷಾರ ಆಡಬೇಕಿತ್ತು. 2025ರಲ್ಲಿ ಆರ್‌ಸಿಬಿ ಈ ಶ್ರೀಲಂಕಾ ಆಟಗಾರನನ್ನು ₹1.6 ಕೋಟಿಗೆ ಖರೀದಿಸಿತು.

ದೂರು ನೀಡಿದ ನಂತರ ತುಷಾರ ಅವರು SLC ಜೊತೆಗಿನ ತಮ್ಮ ಒಪ್ಪಂದವು ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಈ ಒಪ್ಪಂದವನ್ನು ನವೀಕರಿಸದಿರಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ತಮ್ಮ ಇಚ್ಛೆಯನ್ನು ಮಂಡಳಿಗೆ ತಿಳಿಸಿದ್ದರು ಎಂದು ವರದಿಯಾಗಿತ್ತು.

ಈಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ರಜತ್ ಪಾಟೀದಾರ್, ಐಪಿಎಲ್ 2026ರಲ್ಲಿ ತಮ್ಮ ತಂಡದ ಬಲವಾದ ಆರಂಭಕ್ಕೆ ಆಕ್ರಮಣಕಾರಿ ಇಂಟೆಂಟ್ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ನಡುವಿನ ಸಮತೋಲನವೇ ಕಾರಣ ಎಂದಿದ್ದಾರೆ. ಹಾಲಿ ಚಾಂಪಿಯನ್‌ಗಳು ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

SIR ವಿವಾದ: ಫಾರ್ಮ್‌-6 ನಿಯಮ ಸರಳಗೊಳಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ವಿಶೇಷ ಅಭಿಯಾನಕ್ಕೆ ಸೂಚನೆ..!

ಕಾನೂನುಬಾಹಿರವಾಗಿ ಜಮೀನು ಖರೀದಿಸಿರೋದು ಪ್ರೂವ್ ಮಾಡಿದ್ರೆ ಪಬ್ಲಿಕ್ ನಲ್ಲಿ ನೇಣು ಹಾಕಿಕೊಳ್ತೀನಿ: ಸಿಎಂ ಡಿಕೆಶಿಗೆ ಹೆಚ್‌ಡಿಕೆ ಸವಾಲು!